ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ

Public TV
2 Min Read

ಟಿ ಸಮಂತಾ (Samantha) ನಿರ್ಮಾಣದ ‘ಶುಭಂ’ (Subham) ಸಿನಿಮಾ ಇದೇ ಮೇ 9ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಈ ಚಿತ್ರದ ಪ್ರಚಾರದ ವೇಳೆ ಸಮಂತಾ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ಈ ವಿಚಾರ ಚರ್ಚೆಗೆ ಗ್ರಾಸವಾಗ್ತಿದ್ದಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಹೋದಲ್ಲೆಲ್ಲಾ ಅಳೋದ್ಯಾಕೆ ಎಂಬುದನ್ನು ಸಮಂತಾ ವಿವರಿಸಿದ್ದಾರೆ. ಇದನ್ನೂ ಓದಿ:ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್

ವಿಶಾಖಪಟ್ಟಣದಲ್ಲಿ ‘ಶುಭಂ’ ಚಿತ್ರದ ಬಗ್ಗೆ ಸಮಂತಾ ಮತ್ತು ಚಿತ್ರತಂಡ ಭರ್ಜರಿಯಾಗಿ ಪ್ರಚಾರ ಮಾಡಿತ್ತು. ಈ ವೇಳೆ, ಅವರು ಭಾವುಕರಾಗಿದ್ಯಾಕೆ ಎಂಬುದನ್ನು ವಿವರಿಸಿದ್ದಾರೆ. ನಾನು ವೇದಿಕೆಯಲ್ಲಿ ಆಗಾಗ ನನ್ನ ಕಣ್ಣುಗಳನ್ನು ಒರೆಸಿಕೊಳ್ಳಲು ಕಾರಣ ಎಮೋಷನಲ್ ಆಗಿದ್ದಕ್ಕೆ ಅಲ್ಲ. ನಾನು ಹೆಚ್ಚು ಬೆಳಕನ್ನು ನೋಡಿದಾಗ ನನ್ನ ಕಣ್ಣುಗಳು ಸೂಕ್ಷ್ಮವಾಗುತ್ತದೆ. ಆಗ ಕಣ್ಣಲ್ಲಿ ನೀರು ಬರುತ್ತದೆ. ನಾನು ವೇದಿಕೆಯಲ್ಲಿದ್ದಾಗ ನನ್ನ ಕಣ್ಣುಗಳು ಕಣ್ಣೀರು ಬರಲು ಇದೇ ಕಾರಣ. ಈಗ ನಾನು ನಾನು ಚೆನ್ನಾಗಿದ್ದೇನೆ, ಸಂತೋಷವಾಗಿದ್ದೇನೆ ಎಂದಿದ್ದಾರೆ.

ಈ ಹಿಂದೆಯೂ ಹಲವು ವೇದಿಕೆಗಳಲ್ಲಿ ನಟಿ ಕಣ್ಣೀರು ಸುರಿಸಿದ್ದರು. ಹೀಗಾಗಿ ಇದು ಪ್ರಚಾರಕ್ಕಾಗಿ ಮಾಡುವ ಗಿಮಿಕ್ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಲೆಳೆದಿದ್ದರು. ಇದೀಗ ಮತ್ತೆ ಈ ವಿಚಾರ ಮುನ್ನೆಲೆ ಬಂದ ಕಾರಣ ಸಮಂತಾ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ:ಬೇಬಿ ಬಂಪ್‌ನೊಂದಿಗೆ ‘ಮೆಟ್ ಗಾಲಾ’ದಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅಡ್ವಾಣಿ

‘ಶುಭಂ’ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಹೊಸದಾಗಿ ಮದುವೆಯಾದ ಗಂಡಸರು, ತಮ್ಮ ಹೆಂಡ್ತಿಯನ್ನು ಕಂಟ್ರೋಲ್‌ನಲ್ಲಿ ಇಡಬೇಕು ಎಂದು ಬಯಸುತ್ತಾರೆ. ಆದರೆ ಅದು ನಡೆಯೋದು ರಾತ್ರಿ 9 ಗಂಟೆವರೆಗೂ ಮಾತ್ರವೇ ಆಗಿರುತ್ತದೆ. ಏಕೆಂದರೆ 9 ಗಂಟೆಗೆ ಶುರುವಾಗುವ ಸೀರಿಯಲ್ ನೋಡೋದ್ರಿಂದ ಪತ್ನಿಯರೆಲ್ಲ ದೆವ್ವ ಆಗುತ್ತಾರೆ. ಇದೇ ಈ ಸಿನಿಮಾ ಇಂಟೆಸ್ಟ್ರಿಂಗ್ ಕಥೆಯಾಗಿದೆ.

ಆ ಧಾರಾವಾಹಿಗೂ, ದೆವ್ವದ ಕಾಟಕ್ಕೂ ಏನು ಸಂಬಂಧ ಎಂಬುದನ್ನು ತಿಳಿಯುವ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ನಟಿ ಸಮಂತಾ ‘ಶುಭಂ’ ಮೂಲಕ ನಿರ್ಮಾಪಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಚಿತ್ರದಲ್ಲಿ ಮಂತ್ರವಾದಿಯಾಗಿ ಅತಿಥಿ ಪಾತ್ರ ಮಾಡಿದ್ದಾರೆ. ಈ ಚಿತ್ರವನ್ನು ಪ್ರವೀಣ್ ಕಂಡ್ರೆಗುಲಾ ನಿರ್ದೇಶನ ಮಾಡಿದ್ದಾರೆ.

Share This Article