ಸಮಂತಾ ಜೊತೆಗಿನ ‘ಖುಷಿ’ಯ ಕ್ಷಣ ಹಂಚಿಕೊಂಡ ವಿಜಯ್‌ ದೇವರಕೊಂಡ

Public TV
1 Min Read

ಟಾಲಿವುಡ್ (Tollywood) ನಟ ವಿಜಯ್ ದೇವರಕೊಂಡ- ಸಮಂತಾ ರುತ್ ಪ್ರಭು ಅವರು ‘ಖುಷಿ’ (Kushi) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಸಮಂತಾ- ವಿಜಯ್ ನಡುವೆ ಆಪ್ತತೆ ಹೆಚ್ಚಾಗಿದೆ. ಈ ಕುರಿತ ಫೋಟೋ, ವೀಡಿಯೋ ಎಲ್ಲೆಡೆ ಸದ್ದು ಮಾಡ್ತಿದೆ.

 

View this post on Instagram

 

A post shared by Samantha (@samantharuthprabhuoffl)

‘ಲೈಗರ್’ (Liger) ಸಿನಿಮಾ ನಂತರ ವಿಜಯ್ ದೇವರಕೊಂಡ (Vijay Devarakonda) ತೆಲುಗಿನ ‘ಖುಷಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ವಿಜಯ್- ಸ್ಯಾಮ್ ಜೊತೆಯಾಗಿ ನಟಿಸಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಒಡನಾಟ ಹೇಗಿತ್ತು ಎಂದು ವಿಜಯ್ ರೀಲ್ಸ್ ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತೋರಿಸಿದ್ದಾರೆ.

 

View this post on Instagram

 

A post shared by Samantha (@samantharuthprabhuoffl)

ಸಮಂತಾ (Samantha) ಸಿಂಗಲ್ ಆಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾಗಿ ಸಮಂತಾ ಗಮನವೆಲ್ಲಾ ಸಿನಿಮಾಗಳ ಮೇಲಿದೆ. ಸೌತ್- ಬಾಲಿವುಡ್ (Bollywood) ಸಿನಿಮಾಗಳಲ್ಲಿ ಸ್ಯಾಮ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ

 

View this post on Instagram

 

A post shared by Vijay Deverakonda (@thedeverakonda)

‘ಖುಷಿ’ ಸಿನಿಮಾ ಫಸ್ಟ್ ಸಾಂಗ್ ಇತ್ತೀಚಿಗಷ್ಟೇ ರಿಲೀಸ್ ಆಗಿತ್ತು. ಅಭಿಮಾನಿಗಳಿಂದ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ವಿಜಯ್- ಸಮಂತಾ (Samantha) ಖುಷಿಯ ಕ್ಷಣಗಳನ್ನ ನೋಡಿ, ಈ ಪರಿ ಸ್ನೇಹ ಹೆಚ್ಚಾಗಲು ಕಾರಣವೇನು? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Share This Article