ಅಖಿಲೇಶ್ ಯಾದವ್ ಕರೆ ಮಾಡಿದ್ರು; ಟಿಕೆಟ್ ಆಫರ್ ಬಗ್ಗೆ ಸುಳಿವು ಬಿಟ್ಟುಕೊಟ್ರಾ ಈಶ್ವರಪ್ಪ

Public TV
1 Min Read

– ಪುತ್ರನ ಗೆಲುವಿಗೆ ಬಿಎಸ್‍ವೈ ಹೊಂದಾಣಿಕೆ ರಾಜಕೀಯ ಆರೋಪ

ಶಿವಮೊಗ್ಗ: ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ನನಗೆ ಕರೆ ಮಾಡಿದ್ದರು. ನಾನು ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ, ಅವರ ಪಕ್ಷದಿಂದ ಸ್ಪರ್ಧಿಸುವಂತೆ ಆಹ್ವಾನಿಸಲು ಕರೆ ಮಾಡಿರಬಹುದು. ನಾನು ಹಿಂದುತ್ವವಾದಿ ಹೀಗಾಗಿ ಅವರ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ (K.S Eshwarappa) ಹೇಳಿದ್ದಾರೆ.

ಶಿಕಾರಿಪುರದಲ್ಲಿ ಸಾಕಷ್ಟು ಹಣ ಸುರಿದಿದ್ದರು:
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್‍ವೈ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರನ ಗೆಲುವಿಗೆ ಯಡಿಯೂರಪ್ಪ ಸಾಕಷ್ಟು ಹಣ ಸುರಿದಿದ್ದರು. ಶಿಕಾರಿಪುರದಲ್ಲಿ ಸುರಿದ ಹಣವನ್ನು ರಾಜ್ಯದ ಬೇರೆ ಎಲ್ಲಿಯೂ ಸುರಿದಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ನಾರಿಶಕ್ತಿ ಅಪಮಾನಗೊಳಿಸುವ ʻಸ್ತ್ರೀ ದ್ವೇಷಿʼಗಳಿರುವುದು ಬೇಸರ – ಶಾಮನೂರು ಶಿವಶಂಕರಪ್ಪ ವಿರುದ್ಧ ಸೈನಾ ನೆಹ್ವಾಲ್‌ ಕಿಡಿ

ಪುತ್ರನ ಗೆಲುವಿಗೆ ಹೊಂದಾಣಿಕೆ 
ಶಿಕಾರಿಪುರ ಕ್ಷೇತ್ರದಲ್ಲಿ ಹೆಚ್ಚಿನ ಹಣ ಖರ್ಚು ಮಾಡಿದ್ದರೂ ವಿಜಯೇಂದ್ರ ಕಡಿಮೆ ಅಂತರದಲ್ಲಿ ತಿಣುಕಾಡಿ ಗೆದ್ದರು. ಇಷ್ಟೇ ಅಲ್ಲದೇ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಹೀಗಾಗಿಯೇ ಅವರು ಗೆದ್ದರು. ಈ ಲೋಕಸಭಾ ಚುನಾವಣೆಲ್ಲೂ ಯಡಿಯೂರಪ್ಪ ತಮ್ಮ ಪುತ್ರನ ಗೆಲುವಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೊಪಿಸಿದ್ದಾರೆ. ಇದನ್ನೂ ಓದಿ: ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ: ಸುಮಲತಾ ಭಾವುಕ

Share This Article