ಕುರಾನ್‌ ಸುಟ್ಟು ಹಾಕಿದ್ದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

By
1 Min Read

ಸ್ಟಾಕ್‌ಹೋಮ್: 2023 ರಲ್ಲಿ ಸ್ವೀಡನ್‌ನಲ್ಲಿ (Sweden) ಕುರಾನ್ (Quran) ಅನ್ನು ಸುಟ್ಟುಹಾಕಿದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಹಲವಾರು ಪ್ರತಿಭಟನೆಗಳಲ್ಲಿ ಕುರಾನ್‌ ಪ್ರತಿಗಳನ್ನು ಸುಟ್ಟುಹಾಕಿದ ಕ್ರಿಶ್ಚಿಯನ್ ಇರಾಕಿ ಸಲ್ವಾನ್ ಮೊಮಿಕಾ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ತಪ್ಪಿತಸ್ಥನೇ ಎಂದು ಸ್ಟಾಕ್‌ಹೋಮ್ ನ್ಯಾಯಾಲಯ ಗುರುವಾರ ತೀರ್ಪು ನೀಡಬೇಕಿತ್ತು. ಇದನ್ನೂ ಓದಿ: ಚೀನಾ ಮತ್ಸ್ಯ ಕನ್ಯೆಯ ಮೇಲೆ ದೈತ್ಯ ಮೀನಿನ ದಾಳಿ!

ಈಗ ಸಲ್ವಾನ್ ಮೊಮಿಕಾ ಮೃತಪಟ್ಟಿರುವುದರಿಂದ ತೀರ್ಪನ್ನು ಫೆ.3ಕ್ಕೆ ಮುಂದೂಡಿ ಕೋರ್ಟ್‌ ಆದೇಶ ಹೊರಡಿಸಿದೆ. ಮೊಮಿಕಾ ವಾಸಿಸುತ್ತಿದ್ದ ಸೊಡೆರ್ಟಾಲ್ಜೆ ನಗರದಲ್ಲಿ ಗುಂಡಿನ ದಾಳಿ ನಡೆಯುವ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಸಲ್ವಾನ್‌ ಮೃತಪಟ್ಟಿದ್ದ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ವಿಮಾನ -18 ಮಂದಿ ಸಾವು

Share This Article