ಮಹೇಶ್ ಬಾಬು ಸರಳ ವ್ಯಕ್ತಿ: ಹಾಡಿ ಹೊಗಳಿದ ಸಲ್ಮಾನ್ ಖಾನ್

Public TV
1 Min Read

ತೆಲುಗು ನಟ ಮಹೇಶ್ ಬಾಬು ಅವರ ಸಂಬಂಧಿ ಶಿಲ್ಪಾ ಶಿರೋಡ್ಕರ್ (Shilpa Shirodkar) ‘ಬಿಗ್ ಬಾಸ್ ಹಿಂದಿ ಸೀಸನ್ 18’ರಲ್ಲಿ ಸ್ಪರ್ಧಿಯಾಗಿ ಹೈಲೆಟ್ ಆಗುತ್ತಿದ್ದಾರೆ. ವಾರಾಂತ್ಯದ ಸ್ಪೆಷಲ್ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ಅವರು ಮಹೇಶ್ ಬಾಬು (Mahesh Babu) ಅವರ ಸರಳತೆಯನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

‘ವೀಕೆಂಡ್ ಕಾ ವಾರ್’ ಎಪಿಸೋಡ್‌ನಲ್ಲಿ ಮಹೇಶ್ ಬಾಬು ಬಗ್ಗೆ ಮಾತನಾಡಿದ ಸಲ್ಮಾನ್ (Salman Khan) ಅವರು ಶಿಲ್ಪಾ ಅವರ ಭಾವ ಮಹೇಶ್ ಬಾಬುರವರು ತೆರೆಯ ಮೇಲೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ರಿಯಲ್ ಲೈಫ್‌ನಲ್ಲಿ ಅವರು ಹಾಗಲ್ಲ. ತೆರೆಯ ಮೇಲೆ ಅವರು ಆ್ಯಟಿಟ್ಯೂಡ್ ತೋರಿಸಬಹುದು. ಆದರೆ ನಿಜ ಜೀವನದಲ್ಲಿ ಅವರು ಸರಳ ವ್ಯಕ್ತಿ. ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದರು. ನಟನ ಮಾತಿಗೆ ಶಿಲ್ಪಾ ಖುಷಿಪಟ್ಟರು.


ಇದೀಗ ಮಹೇಶ್ ಬಾಬು ಕುರಿತು ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಆಡಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟನ ಮಾತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದಹಾಗೆ, ಮಹೇಶ್ ಬಾಬು ಅವರು ರಾಜಮೌಳಿ ಜೊತೆ ಹೊಸ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share This Article