‘ಸಿಕಂದರ್’ ಸಲ್ಮಾನ್ ಜೊತೆ ರಶ್ಮಿಕಾ ಡ್ಯಾನ್ಸ್- ಟೀಸರ್ ಔಟ್

Public TV
1 Min Read

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಕಂದರ್’ (Sikandar) ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ಸ್ಟೈಲೀಶ್ ಆಗಿ ಡ್ಯಾನ್ಸ್ ಮಾಡಿರುವ ಹಾಡಿನ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.

‘ಸಿಕಂದರ್ ನಾಚೇ’ ಹಾಡಿನಲ್ಲಿ  ಸಲ್ಮಾನ್ ಜೊತೆ ‘ಪುಷ್ಪ 2’ ಬೆಡಗಿ ರಶ್ಮಿಕಾ ಸೊಂಟ ಬಳುಕಿಸಿದ್ದಾರೆ. ಹಾಡಿನಲ್ಲಿ ಸಲ್ಮಾನ್ ಮಾಸ್ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇತ್ತ ರಶ್ಮಿಕಾ (Rashmika Mandanna) ಸ್ಟೈಲೀಶ್ ಮತ್ತು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕಂದರ್ ನಾಚೇ ಎನ್ನುತ್ತಾ ಇಬ್ಬರೂ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಸದ್ಯ ಹಾಡಿನ ಟೀಸರ್ ರಿಲೀಸ್ ಆಗಿದ್ದು, ಮಾ.18ರಂದು ಫುಲ್ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. ಸದ್ಯ ರಿಲೀಸ್ ಆಗಿರುವ ಟೀಸರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಸಲ್ಮಾನ್, ರಶ್ಮಿಕಾ ಮಂದಣ್ಣ, ‘ಮಗಧೀರ’ ನಟಿ ಕಾಜಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಾಜಿದ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇನ್ನೂ ‘ಸಿಕಂದರ್’ ಚಿತ್ರದ ಟೀಸರ್, ಸಾಂಗ್ಸ್ ಎಲ್ಲವೂ ಫ್ಯಾನ್ಸ್‌ಗೆ ಮೆಚ್ಚುಗೆ ಆಗಿದೆ. ಈದ್ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನೂ ಮೊದಲ ಬಾರಿಗೆ ಸಲ್ಮಾನ್ ಜೊತೆ ರಶ್ಮಿಕಾ ನಟಿಸಿರೋ ಕಾರಣ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇತ್ತೀಚಿಗೆ ರಶ್ಮಿಕಾ ನಟಿಸಿದ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿದೆ. ಇತ್ತ ಸಲ್ಮಾನ್ ಇತ್ತೀಚೆಗೆ ನಟಿಸಿರುವ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದೆ. ಹಾಗಾಗಿ ‘ಸಿಕಂದರ್’ ಚಿತ್ರ ಸಕ್ಸಸ್‌ ಕಾಣುತ್ತಾ? ಎಂಬುದನ್ನು ಕಾದುನೋಡಬೇಕಿದೆ.

Share This Article