‘ಟೈಗರ್‌ 3’ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಭುಜಕ್ಕೆ ಗಾಯ

Public TV
1 Min Read

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಸದ್ಯ ‘ಟೈಗರ್ 3’ (Tiger 3) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಅವರ ಎಡ ಭುಜಕ್ಕೆ ಗಾಯ ಆಗಿದೆ.

‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದ ಸೋಲಿನ ನಂತರ ‘ಟೈಗರ್ 3’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಖಾನ್, 5 ಕೆಜಿ ತೂಕದ ಡಂಬೆಲ್‌ ಅನ್ನು ಎತ್ತಿದ ಬಳಿಕ ಅವರ ಎಡ ಭುಜಕ್ಕೆ ಏಟಾಗಿದೆ. ಗಾಯಗಳಾಗಿದ್ದು ಅದಕ್ಕೆ ಸೂಕ್ತ ಚಿಕಿತ್ಸೆಯನ್ನ ಕೂಡ ಪಡೆದಿದ್ದಾರೆ. ಈ ಕುರಿತು ನಟ ಪೋಸ್ಟ್ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Salman Khan (@beingsalmankhan)

ನೀವು ಪ್ರಪಂಚದ ಭಾರವನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದೀರಿ ಎಂದು ನೀವು ಭಾವಿಸಿದರೆ, ಇಹಲೋಕ ತ್ಯಜಿಸಿ 5 ಕೆಜಿ ಡಂಬೆಲ್ ಎತ್ತಿ ತೋರಿಸಿ ಎಂದಿದ್ದಾರೆ. ಹುಲಿ ಗಾಯಗೊಂಡಿದೆ ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ. ಬೇಗ ಹುಷಾರಾಗಿ ಸುಲ್ತಾನ್ ಎಂದು‌ ನೆಚ್ಚಿನ ನಟನಿಗೆ ಬಗೆ ಬಗೆಯ ರೀತಿಯಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಇತ್ತೀಚಿಗೆ ನಟಿಸಿದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ‘ಟೈಗರ್ 3’ ಚಿತ್ರದತ್ತ ತಮ್ಮ ಸಂಪೂರ್ಣ ಗಮನ ನೀಡುತ್ತಿದ್ದಾರೆ. ಸಲ್ಲು ಕೆರಿಯರ್‌ಗೆ ಗೆಲುವಿನ ಅವಶ್ಯಕತೆಯಿದೆ. ಈ ಚಿತ್ರದಲ್ಲಿ ಸಲ್ಲುಗೆ ನಾಯಕಿಯಾಗಿ ಕತ್ರಿನಾ ಕೈಫ್‌ ತೆರೆ ಹಂಚಿಕೊಂಡಿದ್ದಾರೆ.

Share This Article