Bigg Boss Hindi 18: ಸಲ್ಮಾನ್‌ ಖಾನ್‌ ನಿರೂಪಣೆಯ ‌’ಬಿಗ್‌ ಬಾಸ್‌’ ಪ್ರೋಮೋ ಔಟ್

Public TV
1 Min Read

ನ್ನಡದ ‘ಬಿಗ್ ಬಾಸ್ 11’ಕ್ಕೆ(Bigg Boss Kannada 11) ಭರ್ಜರಿ ತಯಾರಿ ನಡೆಯುತ್ತಿದೆ. ಸೆ.29ಕ್ಕೆ ಗ್ರ್ಯಾಂಡ್‌ ಆಗಿ ಲಾಂಚ್‌ ಆಗುತ್ತಿದೆ. ಇದರ ನಡುವೆ ಹಿಂದಿ ಬಿಗ್ ಬಾಸ್ ಪ್ರಸಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸಲ್ಮಾನ್ ಖಾನ್ (Salman Khan) ನಿರೂಪಣೆಯ ‘ಬಿಗ್ ಬಾಸ್ ಸೀಸನ್ 18’ರ (Bigg Boss Hindi 18) ಪ್ರೋಮೋ ರಿಲೀಸ್ ಆಗಿದೆ.

ಈ ಕಣ್ಣು ಇತಿಹಾಸ ಬರೆಯಲು ಸಜ್ಜಾಗಿದೆ ಎಂದು ಖಡಕ್ ಆಗಿ ಡೈಲಾಗ್ ಹೇಳುತ್ತಾ ಸಲ್ಮಾನ್ ಖಾನ್‌ ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದೇ ಅಕ್ಟೋಬರ್ 6ರಂದು ರಾತ್ರಿ ಗಂಟೆಗೆ ಬಿಗ್ ಬಾಸ್ ಶೋಗೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಇದನ್ನೂ ಓದಿ:ಹೊಟ್ಟೆ ಮೇಲೆ ರೇಖಾ ಚಿತ್ರ ಬಿಡಿಸಿಕೊಂಡ ಗರ್ಭಿಣಿ ರಿಚಾ ಚಡ್ಡಾ!

 

View this post on Instagram

 

A post shared by ColorsTV (@colorstv)

ಇನ್ನೂ ಕನ್ನಡದ ‘ಸೂರ್ಯವಂಶ’ ನಟಿ ಇಶಾ ಕೊಪ್ಪಿಕರ್, ಸುರಭಿ ಜ್ಯೋತಿ, ಕರಣ್ ಪಟೇಲ್, ಸಮೀರಾ ರೆಡ್ಡಿ, ಅವಿನಾಶ್ ಮಿಶ್ರಾ, ನೈರಾ ಬ್ಯಾನರ್ಜಿ ಸೇರಿದಂತೆ ಅನೇಕರ ಹೆಸರು ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಲ್ಲದ್ದಕ್ಕೂ ಉತ್ತರ ಶೋ ಶುರುವಾದ್ಮೇಲೆ ಕುತೂಹಲಕ್ಕೆ ತೆರೆಬೀಳಲಿದೆ.

ಅಂದಹಾಗೆ, ರಶ್ಮಿಕಾ ಮಂದಣ್ಣ ಜೊತೆಗಿನ ಸಿಖಂದರ್ ಚಿತ್ರ, ಅಟ್ಲೀ ಜೊತೆಗಿನ ಹೊಸ ಸಿನಿಮಾದ ನಡುವೆ ‘ಬಿಗ್ ಬಾಸ್’ ಶೋ ಕೂಡ ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ.

Share This Article