ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ ಆನಂದ್

Public TV
1 Min Read

ದುನಿಯಾ ವಿಜಿ ನಟಿಸಿ, ನಿರ್ದೇಶನ ಮಾಡಿದ್ದ ‘ಸಲಗ’ ಸಿನಿಮಾ ಮೂಲಕ ಸಿನಿಮಾ ದುನಿಯಾಗೆ ಮತ್ತಷ್ಟು ಹತ್ತಿರ ಆದವರು. ಸಂಜನಾ ಆನಂದ್. ಈ ಸಿನಿಮಾದಲ್ಲಿ ಬೋಲ್ಡ್ ಮಾತುಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದವರು. ಈ ಚಿತ್ರದ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು, ತೆಲುಗು ಸಿನಿಮಾಗಳಲ್ಲಿಯೂ ಭರ್ಜರಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ದುನಿಯಾ ವಿಜಯ್ ಕೂಡ ತೆಲುಗಿಗೆ ಹಾರಿದ ಬೆನ್ನಲ್ಲೇ ಸಂಜನಾ ಕೂಡ ಅದೇ ಹಾದಿ ಹಿಡಿದಿದ್ದು, ಚಿತ್ರ ಪ್ರೇಮಿಗಳಲ್ಲಿ ಡಬಲ್ ಸಂಭ್ರಮ ತಂದಿದೆ. ದುನಿಯಾ ವಿಜಯ್ ತೆಲುಗಿನ ಸೂಪರ್ ಸ್ಟಾರ್ ಬಾಲಯ್ಯ ಜತೆ ಸಿನಿಮಾ ಮಾಡುತ್ತಿದ್ದರೆ, ಸಂಜನಾ ‘ನೇನು ಮೀಕು ಬಾಗಾ ಕಾವಾಲ್ಸಿ ನಿವಾಡಿನಿ’ ಸಿನಿಮಾದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರು ‘ತೇಜು’ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಾತ್ರದ ಫಸ್ಟ್ ಲುಕ್ ಇದೀಗ ರಿಲೀಸಾಗಿದೆ. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

ಶೀತಲ್ ಶೆಟ್ಟಿ ನಿದೇಶನದ ‘ವಿಂಡೋಸೀಟ್’ ಸಿನಿಮಾದಲ್ಲಿಯೂ ಸಂಜನಾ ನಟಿಸಿದ್ದು, ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅಲ್ಲದೆ ಸಂಜನಾ, ಅಜಯ್ ರಾವ್ ಜೊತೆ ‘ಶೋಕಿವಾಲ’ ಚಿತ್ರದಲ್ಲೂ ನಟಿಸಿದ್ದು, ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

Sanjana Anand Ultra HD Images

ತಬಲಾ ನಾಣಿ ಜೊತೆಗೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದವರು ಸಂಜನಾ, ನಂತರ ನಿವೇದಿತಾ ಶಿವರಾಜ್‍ಕುಮಾರ್ ನಿರ್ಮಾಣದ ‘ಹನಿಮೂನ್’ ವೆಬ್ ಸಿರೀಸ್‍ನಲ್ಲಿಯೂ ನಟಿಸಿದ್ದರು. ಈ ವೆಬ್ ವರ್ಷನ್ ತೆಲುಗಿನಲ್ಲೂ ತೆರೆಕಂಡಿರುವುದು ವಿಶೇಷ.

Share This Article
Leave a Comment

Leave a Reply

Your email address will not be published. Required fields are marked *