ದೊಡ್ಡ ಮೊತ್ತಕ್ಕೆ ಸೇಲ್ ಆಯಿತು ‘ಸಲಾರ್’ ಸ್ಯಾಟ್ ಲೈಟ್ ರೈಟ್ಸ್

Public TV
2 Min Read

ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿದ್ದರಿಂದ ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ನಿರಾಸೆಗೊಂಡ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿಯೊಂದು ಸಿಕ್ಕಿದ್ದು, ಸಲಾರ್ ಸಿನಿಮಾ ಬಿಡುಗಡೆಗೂ ಮುನ್ನ 350 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಿಡುಗಡೆಗೂ ಮುನ್ನ ಈ ಪ್ರಮಾಣದಲ್ಲಿ ಹಣ ಮಾಡಿದ ಮೊದಲ ಕನ್ನಡದ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ ಡಿಜಿಟಿಲ್ ಮತ್ತು ಸ್ಯಾಟ್ ಲೈಟ್ ಹಕ್ಕುಗಳು (Sat Light Rights) ಭರ್ಜರಿ ಮೊತ್ತಕ್ಕೆ ಮಾರಾಟವಾಗಿದ್ದು ಎಲ್ಲ ಭಾಷೆಗಳ ಸ್ಯಾಟ್ ಲೈಟ್ ಹಕ್ಕನ್ನು ಸ್ಟಾರ್ ಟಿವಿ ಪಡೆದುಕೊಂಡಿದ್ದು, ನೆಟ್ ಫ್ಲಿಕ್ಸ್ ಓಟಿಟಿ ಹಕ್ಕನ್ನು ಪಡೆದುಕೊಂಡಿದೆ. ಈ ಎರಡೂ ಸಂಸ್ಥೆಗಳಿಂದ ಬರೋಬ್ಬರಿ 350 ಕೋಟಿ ರೂಪಾಯಿ ನಿರ್ಮಾಣ ಸಂಸ್ಥೆನಗೆ ಸಂದಾಯವಾಗಿದೆ ಎಂದು ಹೇಳಲಾಗುತ್ತಿದೆ.

ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ನಲ್ಲಿ ಈ ಹಿಂದೆ ರಿಲೀಸ್ ಆಗಿದ್ದ ‘ಕೆಜಿಎಫ್ 2’ ಸಿನಿಮಾದ ಸ್ಯಾಟ್ ಲೈಟ್ ಮತ್ತು ಓಟಿಟಿ ಹಕ್ಕುಗಳು 250 ಕೋಟಿ ರೂಪಾಯಿಗೆ ಮಾರಾಟವಾಗಿದ್ದವು. ಸಲಾರ್ ಅದಕ್ಕಿಂತಲೂ ಹೆಚ್ಚು ಮಾರಾಟವಾಗುವ ಮೂಲಕ ಆ ದಾಖಲೆಯನ್ನು ಬ್ರೇಕ್ ಮಾಡಿದೆ. ಅಲ್ಲದೇ, ಈಗಾಗಲೇ ನಾನಾ ರಾಜ್ಯಗಳ ವಿತರಣಾ ಹಕ್ಕುಗಳ ಬಗ್ಗೆ ಮಾತುಕತೆ ಕೂಡ ಮಾಡಲಾಗುತ್ತಿದ್ದು, ಹಲವು ಏರಿಯಾಗಳ ವಿತರಣಾ ಹಕ್ಕುಗಳು ಕೂಡ ಮಾರಾಟವಾಗಿದೆ ಎನ್ನುವ ಮಾಹಿತಿ ಇದೆ.

ಬಲ್ಲ ಮೂಲಗಳ ಮಾಹಿತಿ ಪ್ರಕಾರ ವಿದೇಶಿ ಹಕ್ಕುಗಳು ಈಗಾಗಲೇ ಸೋಲ್ಡ್ ಔಟ್ ಆಗಿದ್ದು, 90 ಕೋಟಿ ರೂಪಾಯಿಗೆ ಓವರ್ ಸೀಸ್ ರೈಟ್ಸ್ ಮಾರಾಟ ಮಾಡಲಾಗಿದೆ. ತೆಲುಗಿನಲ್ಲಿ ನಿಜಮ್ ಏರಿಯಾದ ವಿತರಣಾ ಹಕ್ಕು 100 ಕೋಟಿಗೆ ಮಾರಾಟವಾಗಿದ್ದರೆ, ಹಿಂದಿ ವರ್ಷನ್ ವಿತರಣಾ ಹಕ್ಕು 150 ಕೋಟಿಗೆ ಸೇಲ್ ಆಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಕೋಟಿ ಕೋಟಿ ರೂಪಾಯಿ ಸಿನಿಮಾ ವಹಿವಾಟು ನೆಡೆಸಿದೆ ಎನ್ನುವ ಅಂದಾಜು ಸಿಗುತ್ತಿದೆ. ಆದರೆ, ಅಧಿಕೃತವಾಗಿ ಹಕ್ಕು ಪಡೆದ ಸಂಸ್ಥೆಗಳಾಗಲಿ ಅಥವಾ ಹಣ ಪಡೆದ ನಿರ್ಮಾಣ ಸಂಸ್ಥೆಯಾಗಲಿ ಹೇಳಿಕೊಂಡಿಲ್ಲ. ಹಾಗಾಗಿ ಈ ಎಲ್ಲ ಮೊತ್ತದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯೇ ಖಚಿತ ಪಡಿಸಬೇಕಿದೆ.

 

ಸ್ಯಾಟ್ ಲೈಟ್ ನಲ್ಲಿ ಹಣ ಪಡೆದ ಟಾಪ್ ಭಾರತೀಯ ಚಿತ್ರಗಳು

ಸಲಾರ್ #Salaar -350 Cr

ಆರ್.ಆರ್.ಆರ್ #RRR – 320 Cr

ಜವಾನ್ #jawan – 250 Cr

ಆದಿಪುರುಷ #Adipurush -240 Cr

ಡುಂಕಿ #Dunki – 230 Cr

ಸಾಹೋ #Saaho-220 Cr

ಪಠಾಣ್ #Pathaan 225 Cr

ರಾಧಾ ಶ್ಯಾಮ್#Radheshyam 200 Cr

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್