`ಕೆಜಿಎಫ್ 2′ ಟೀಮ್‌ನಿಂದ ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

Public TV
1 Min Read

ಪ್ರಶಾಂತ್‌ ನೀಲ್ ಮತ್ತು ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ರಿಲೀಸ್ ಆಗೋಕೆ ದಿನಗಣನೆ ಶುರುವಾಗಿದೆ. ಇದೇ ಏಪ್ರಿಲ್‌ 14ಕ್ಕೆ ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಕೂಡ ಬ್ಯಾಕ್ ಟು ಬ್ಯಾಕ್ ಅಪ್‌ಡೇಟ್‌ನಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಿದ್ದಾರೆ. ಈಗ `ಕೆಜಿಎಫ್ ೨’ ಸಿನಿಮಾದಲ್ಲಿ ಸಿನಿರಸಿಕರಿಗೆ ಬಿಗ್ ಸಪ್ರೈಸ್‌ ಇರಲಿದೆ.

`ಕೆಜಿಎಫ್ 2′ ಶೂಟಿಂಗ್ ಗ್ಯಾಪ್‌ನಲ್ಲೇ ಶೂಟಿಂಗ್ ಮಾಡಿರೋ, ಪ್ರಶಾಂತ್‌ ನೀಲ್ ನಿರ್ದೇಶನದ `ಕೆಜಿಎಫ್ 2′ ರಿಲೀಸ್‌ನಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇರಲಿದೆ. ಪ್ರಭಾಸ್ ನಟನೆಯ ʼಸಲಾರ್’ ಚಿತ್ರದ ಟೀಸರ್ ಕೂಡ `ಕೆಜಿಎಫ್ 2’ನಲ್ಲಿ ಅಟ್ಯಾಚ್ ಆಗಿರಲಿದೆ. ಈ ಸುದ್ದಿ ಕೇಳಿ ರಾಕಿಭಾಯ್ ಫ್ಯಾನ್ಸ್ ಜೊತೆಗೆ ಪ್ರಭಾಸ್ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

ಬಿಗ್ ಬಜೆಜ್ ಸಿನಿಮಾಗಳು ರಿಲೀಸ್ ಆಗುವಾಗ ಬಿಡುಗಡೆಗೆ ಸಿದ್ಧವಿರೋ ಚಿತ್ರಗಳ ಟ್ರೇಲರ್ ಮತ್ತು ಟೀಸರ್‌ಗಳನ್ನ ಅಟ್ಯಾಚ್ ಮಾಡುವ ಪದ್ಧತಿಯಿದೆ. ಅದರಂತೆಯೇ ಪುನೀತ್ ರಾಜ್‌ಕುಮಾರ್ ನಟನೆಯ ಮಾರ್ಚ್.17ಕ್ಕೆ ರಿಲೀಸ್ ಆಗಿದ್ದ `ಜೇಮ್ಸ್’ ಚಿತ್ರದ ವೇಳೆ ಶಿವರಾಜ್‌ಕುಮಾರ್ ನಟನೆಯ `ಬೈರಾಗಿ’ ಚಿತ್ರದ ಟೀಸರ್ ಕೂಡ ಪ್ರಸಾರಗೊಂಡಿತ್ತು. ಅದೇ ರೀತಿ `ಕೆಜಿಎಫ್ 2′ ಸಿನಿಮಾ ಜೊತೆಗೆ `ಸಲಾರ್’ ಚಿತ್ರದ ಟೀಸರ್ ಕೂಡ ಪ್ರಸಾರ ಮಾಡಲಾಗುತ್ತದೆ.

`ಕೆಜಿಎಫ್ 2’ನಂತೆ `ಸಲಾರ್’ ಚಿತ್ರಕ್ಕೂ ಕೂಡ ಪ್ರಶಾಂತ್‌ನೀಲ್ ನಿರ್ದೇಶನದ ಜೊತೆಗೆ ಹೊಂಬಾಳೆ ಬ್ಯಾನರ್ ನಿರ್ಮಾಣ ಮಾಡುತ್ತಿದೆ. ಪ್ರಭಾಸ್ ಶ್ರುತಿ ಹಾಸನ್ ನಟನೆಯ `ಸಲಾರ್’ ಚಿತ್ರದ ಯಾವೊಂದು ಅಪ್‌ಡೇಟ್ ಸಿಗ್ತಿರಲಿಲ್ಲ. ಚಿತ್ರದ ಪ್ರಚಾರ ನಿಟ್ಟಿನಲ್ಲಿ `ಕೆಜಿಎಫ್ 2′ ಚಿತ್ರದ ವೇಳೆ `ಸಲಾರ್’ ಟೀಸರ್ ಕೂಡ ಅಟ್ಯಾಚ್ ಮಾಡಲಾಗುತ್ತಿದೆ. ಇದನ್ನು ಓದಿ:ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ

`ಸಲಾರ್’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಚಿತ್ರದ ಶೂಟಿಂಗ್ ಇನ್ನು ಬಾಕಿಯಿದ್ದು, ಟೀಸರ್ ಗ್ಲಿಂಪ್ಸ್‌ನಿಂದ ಚಿತ್ರ ಹೇಗಿರಬಹುದು ಅಂತಾ ಊಹಿಸಬಹುದಾಗಿದೆ. ಒಟ್ನಲ್ಲಿ ನಿರೀಕ್ಷಿಸದೆ `ಸಲಾರ್’ ಕುರಿತು ಗುಡ್ ನ್ಯೂಸ್ ಕೊಟ್ಟಿರೋ `ಕೆಜಿಎಫ್ ೨’ ಚಿತ್ರವನ್ನ ನೋಡೋಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಕಿಭಾಯ್‌ನ ಕಣ್ತುಂಬಿಕೊಳ್ಳೊಕೆ ಫ್ಯಾನ್ಸ್‌ ಕಾಯ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *