ಬಿಡದೆ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ- ಮತ್ತೆ ವಿದೇಶಕ್ಕೆ ಹಾರಿದ ಪ್ರಭಾಸ್

Public TV
1 Min Read

ಪ್ರಭಾಸ್ (Prabhas) ಮತ್ತೆ ವಿದೇಶಕ್ಕೆ ಹಾರಿದ್ದಾರೆ. ಕೆಲವೇ ತಿಂಗಳ ಹಿಂದೆ ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದರು. ಇದೀಗ ಮತ್ತೆ ಇನ್ನೊಂದು ದೇಶಕ್ಕೆ ಹೋಗಿದ್ದಾರೆ. ಮೊಣಕಾಲಿನ ಶಸ್ತ್ರ ಚಿಕಿತ್ಸೆಗಾಗಿ (Surgery) ವಿಮಾನ ಏರಿದ್ದಾರೆ ಅನ್ನೋರು ಕೆಲವರು. ಇಲ್ಲ ವಿಶ್ರಾಂತಿಗಾಗಿ ಅನ್ನೋರು ಹಲವರು. ಯಾವುದು ಸತ್ಯ? ಇಲ್ಲಿದೆ ಮಾಹಿತಿ.

ಸಲಾರ್ (Salaar) ಇನ್ನೂ ಬಂದಿಲ್ಲ. ಅಕಸ್ಮಾತ್ ಅಂದುಕೊಂಡ ಡೇಟ್‌ಗೆ ರಿಲೀಸ್ ಆಗಿದ್ದರೆ ಪ್ರಭಾಸ್ ಹೇಳದೇ ಕೇಳದೇ ಊರು ಬಿಡುತ್ತಿರಲಿಲ್ಲ. ಇಲ್ಲೇ ಇದ್ದು ಗೆಲುವನ್ನು ಎಂಜಾಯ್ ಮಾಡುತ್ತಿದ್ದರು. ಮತ್ತೆ ಹಳೆ ಹವಾ ಎದ್ದಿರುವುದನ್ನು ನೋಡಿ ಖುಷಿ ಪಡುತ್ತಿದ್ದರು. ಆದರೆ ಹಾಗಾಗಲಿಲ್ಲ. ಪರಿಣಾಮ ಡಾರ್ಲಿಂಗ್ ಸದ್ದಿಲ್ಲದೆ ವಿಮಾನ ಏರಿದ್ದಾರೆ. ಆದರೆ ಅವರು ಎಲ್ಲಿಗೆ ಹೋಗಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಹಾಗಿದ್ದರೆ ಅವರು ಯಾವ ಕಾರಣಕ್ಕೆ ದೇಶ ಬಿಟ್ಟರು? ಶಸ್ತ್ರ ಚಿಕಿತ್ಸೆಗಾ, ವಿಶ್ರಾಂತಿ ಮಾಡುವುದಕ್ಕಾ? ವಿಷಯ ಇದೆ. ಇದನ್ನೂ ಓದಿ:ಜವಾನ್ ಪೈರಸಿ: ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟ ಶಾರುಖ್

‘ಆದಿಪುರುಷ್’ (Adipurush) ಬಿಡುಗಡೆಗೂ ಮುನ್ನ ಪ್ರಭಾಸ್ ಅಮೆರಿಕಾಕ್ಕೆ ಹೋಗಿದ್ದರು. ಹೆಚ್ಚು ಕಮ್ಮಿ ಎರಡು ತಿಂಗಳು ಅಲ್ಲಿದ್ದರು. ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆಯಿತಾ ಇಲ್ಲವಾ? ಗೊತ್ತಾಗಲಿಲ್ಲ. ಇದೀಗ ಮತ್ತೆ ಅದೇ ಆಪರೇಶನ್‌ಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಹಾಗಲ್ಲ. ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಿಂದ ಹೈರಾಣಾಗಿದ್ದಾರೆ. ಹೀಗಾಗಿ ರೆಸ್ಟ್ ಮಾಡಲು ಈ ಪ್ರವಾಸ. ಯಾವುದಕ್ಕೂ ಸ್ಪಷ್ಟ ಉತ್ತರ ಇಲ್ಲ. ಪ್ರಭಾಸ್ ಫ್ಯಾನ್ಸ್ ಮಾತ್ರ ಸಲಾರ್ ಯಾವಾಗ ಬರುತ್ತೋ ಎಂದು ಕಾಯ್ತಿದ್ದಾರೆ.

‘ಸಲಾರ್’ (Salaar) ಪಾರ್ಟ್ 1, ದೀಪಿಕಾ ಪಡುಕೋಣೆ (Deepika Padukone) ಜೊತೆಗಿನ 2898 AD, ವಿಷ್ಣ ಮಂಜು ಜೊತೆ ಭಕ್ತ ಕಣ್ಣಪ್ಪ, ನಿಧಿ ಅಗರ್‌ವಾಲ್‌ ಜೊತೆ ‘ರಾಜಾ ಡಿಲಕ್ಸ್‌’ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಪ್ರಭಾಸ್ ಕೈಯಲ್ಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್