ಕೊಲೆಯಾದ ಸೌರಭ್‌ ಹಣದಲ್ಲಿ ಜೂಟಾಟ, ಗೆದ್ದ ಹಣದಲ್ಲಿ ಅವನ ಪತ್ನಿ ಜೊತೆ ಸುತ್ತಾಟ – ಬಗೆದಷ್ಟೂ ರಹಸ್ಯ ಬಯಲು!

Public TV
1 Min Read

– ಮನೆ ಖರ್ಚಿಗೆ ತಿಂಗಳಿಗೆ 1 ಲಕ್ಷ ರೂ. ಪಡೆಯುತ್ತಿದ್ದ ಮುಸ್ಕಾನ್‌

ಲಕ್ನೋ: ಪತಿಯನ್ನು ಕೊಂದು ಜೈಲುಪಾಲಾಗಿರುವ ಮುಸ್ಕಾನ್ ರಸ್ತೋಗಿ (Muskan Rastogi) ಮತ್ತು ಪ್ರಿಯಕರ ಸಾಹಿಲ್‌ ಶುಕ್ರಾ ಕುರಿತು ಒಂದಿಲ್ಲೊಂದು ರಹಸ್ಯಗಳು ಬೆಳಕಿಗೆ ಬರುತ್ತಲೇ ಇವೆ.

ಸದ್ಯ ಜೈಲು (Jail) ಪಾಲಾಗಿರುವ ಆರೋಪಿ ಸಾಹಿಲ್‌, ಕೊಲೆಯಾದ ಮುಸ್ಕಾನ್‌ ಪತಿ ಸೌರಭ್‌ ಹಣದಲ್ಲಿ ಬೆಟ್ಟಿಂಗ್‌, ಜೂಜು ಆಡ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಮುಸ್ಲಿಮರ ತುಷ್ಟಿಕರಣಕ್ಕೆ ಕಾಂಗ್ರೆಸ್‌ನಿಂದ ಸಂವಿಧಾನ ಬದಲಾವಣೆ – ಇದು ನಮ್ಮ ದೇಶದ ದುರಂತ: ಸಿಟಿ ರವಿ

ಕೊಲೆಯಾದ ಸೌರಭ್‌ ಹಣವನ್ನು ಬಳಸಿಕೊಂಡು ಸಾಹಿಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಆಡ್ತಿದ್ದ. ಬುಕ್ಕಿಗಳನ್ನ ಬಳಸಿಕೊಂಡು ಬೆಟ್ಟಿಂಗ್‌ ಆಡುತ್ತಿದ್ದ. ಗೆದ್ದ ಹಣದಲ್ಲಿ ಪ್ರೇಯಸಿ ಮುಸ್ಕಾನ್‌ಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ರಿಷಿಕೇಶ್‌, ಡೆಹ್ರಾಡೂನ್‌ ಮೊದಲಾದ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿದ್ದ. ಆದ್ರೆ ನೆರೆಹೊರೆಯವರ ಬಳಿ ಇದ್ಯಾವುದೂ ಗೊತ್ತೇ ಇಲ್ಲ ಅನ್ನೋ ತರ ಇದ್ದ. ತನಗೆ ಉದ್ಯೋಗ ಇಲ್ಲ, ನಿರ್ದಿಷ್ಟ ಆದಾಯ ಮೂಲವೂ ಇಲ್ಲ ಎಂದು ಹೇಳಿಕೊಂಡಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  ಇದನ್ನೂ ಓದಿ: Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

ತಿಂಗಳ ಖರ್ಚಿಗೆ 1 ಲಕ್ಷ ಕೊಡ್ತಿದ್ದ ಸೌರಭ್‌:
ಪೊಲೀಸರ ಪ್ರಕಾರ, ಕೊಲೆಯಾದ ಸೌರಭ್‌ ತನ್ನ ಮತ್ತು ಮಗಳ ಖರ್ಚು ನೋಡಿಕೊಳ್ಳಲು ಪ್ರತಿ ತಿಂಗಳು ಮುಸ್ಲಾನ್‌ಗೆ 1 ಲಕ್ಷ ರೂ. ಕಳುಹಿಸುತ್ತಿದ್ದ. ಆದ್ರೆ ಮುಸ್ಕಾನ್‌ ಈ ವಿಷಯವನ್ನು ಸಾಹಿಲ್‌ಗೆ ತಿಳಿಸಿದ್ದಳು. ಮನೆ ಖರ್ಚು ಕಳೆದು ಉಳಿದ ಹಣವನ್ನ ಬೆಟ್ಟಿಂಗ್‌ ಆಡಲು ಕೊಡುತ್ತಿದ್ದಳು. ಸದ್ಯ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲ್ಲುವ ಫೇವರೆಟ್‌ ತಂಡಗಳ ಮೇಲೆ ಒಂದಿಷ್ಟು ಬೆಟ್ಟಿಂಗ್‌ ಮಾಡಲು ಹಣ ರೆಡಿ ಮಾಡಿಕೊಳ್ಳುತ್ತಿದ್ದ. ಅಷ್ಟರಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ದಕ್ಷಿಣದಲ್ಲಿ ಅಧೀರನಿಗೆ ಭಾರೀ ಬೇಡಿಕೆ- ಪ್ರಭಾಸ್ ಸಿನಿಮಾದಲ್ಲಿ ಸಂಜಯ್ ದತ್

Share This Article