ಲುಕ್‌ಗಿಂತ ಬಿಲ್ಡ್‌ ಕ್ವಾಲಿಟಿ ಹಾಗೂ ಸೇಫ್ಟಿ ನೋಡಿ ಕಾರು ಖರೀದಿಸಿ

Public TV
2 Min Read

ತ್ತೀಚಿನ ದಿನಗಳಲ್ಲಿ ಯಾವುದೇ ವಾಹನವನ್ನು(Vehicle) ಖರೀದಿಸುವಾಗ, ಹೆಚ್ಚಿನ ಜನರು ಸುರಕ್ಷತೆಯ ವೈಶಿಷ್ಟ್ಯಗಳನ್ನು ನೋಡುವುದಕ್ಕಿಂತ, ಒಳ್ಳೆ ಲುಕ್‌ ಇರುವ ವಾಹನವನ್ನು ಖರೀದಿಸುತ್ತಾರೆ. ತಮ್ಮ ಸುರಕ್ಷತೆಗಿಂತಲೂ ಇನ್ನೊಬ್ಬರ ಮುಂದೆ ಶೋ ಮಾಡುವ ಸಲುವಾಗಿ ಔಟ್‌ಲುಕ್‌ ಚೆನ್ನಾಗಿರುವ ವಾಹನಗಳ ಖರೀದಿಗೆ ಆದ್ಯತೆಯನ್ನು ನೀಡುತ್ತಾರೆ.

ಯಾವುದೇ ವಾಹನವಾಗಿರಲಿ ಅದರಲ್ಲಿ ಸೇಫ್ಟಿ ಫೀಚರ್‌ಗಳು ಇದ್ದಷ್ಟು ಒಳ್ಳೆಯದೇ. ಜಗತ್ತಿನಲ್ಲಿ ಕಾರುಗಳನ್ನು (Car) ತಯಾರಿಸುವ ಕಂಪನಿಗಳು ಬಹಳಷ್ಟು ಇವೆ. ಅದರಲ್ಲಿ ಒಂದಷ್ಟು ಕಂಪನಿಗಳು ಬಿಲ್ಡ್‌ ಕ್ವಾಲಿಟಿಗೆ ಆದ್ಯತೆ ನೀಡಿ ಕಾರನ್ನು ನಿರ್ಮಾಣ ಮಾಡಿದರೆ, ಇನ್ನೊಂದಷ್ಟು ಕಂಪನಿಗಳು ಲುಕ್‌ಗೆ ಆದ್ಯತೆ ನೀಡುತ್ತವೆ. ಎರಡೂ ರೀತಿಯ ವಾಹನಗಳಿಗೆ ಗ್ರಾಹಕರು (Consumers) ಇರೋದೂ ಹೌದು. ಇನ್ನೂ ಕೆಲವು ಕಂಪನಿಗಳು, ಬಿಲ್ಡ್‌ ಕ್ವಾಲಿಟಿಯ ಜೊತೆಗೆ ಎರ್‌ ಬ್ಯಾಗ್‌, ಸ್ಟೆಬಿಲಿಟಿಯಂತಹ ಸೆಫ್ಟಿ ಫೀಚರ್ಸ್ ಗಳನ್ನು ಕೂಡ ಅಳವಡಿಸಿರುತ್ತಾರೆ. ಇಂತಹ ಸೇಫ್ಟಿ ಫೀಚರ್ಸ್‌ ಗಳು ಕಾರಿಗೆ ತುಂಬಾ ಅಗತ್ಯವಾದದ್ದು. ಇದನ್ನೂ ಓದಿ: ಆಸ್ತಿ, ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ: ದರ್ಶನ್‌ಗೆ ಜೈಲೂಟ ಫಿಕ್ಸ್‌ – ಕೋರ್ಟ್‌ ಹೇಳಿದ್ದೇನು?

ಗಾಡಿಯ ಬಿಲ್ಡ್‌ ಕ್ವಾಲಿಟಿ ಚೆನ್ನಾಗಿರುವುದರಿಂದ ಎಷ್ಟೋ ಪ್ರಾಣ ಉಳಿದದ್ದು ಇದೆ. ಬಿಲ್ಡ್‌ ಕ್ವಾಲಿಟಿ ಸರಿಯಾಗಿ ಇಲ್ಲದಿರುವುದರಿಂದ ಎಷ್ಟೋ ಪ್ರಾಣಗಳು ಹೋಗಿದ್ದೂ ಇವೆ. ನಾವುಗಳು ಅಷ್ಟು ದುಡ್ಡು ಕೊಟ್ಟು ಒಂದು ಗಾಡಿ ಖರೀದಿ ಮಾಡುತ್ತೇವೆ ಅಂದರೆ ಒಳ್ಳೆಯ ಬಿಲ್ಡ್‌ ಕ್ವಾಲಿಟಿ ಹಾಗು ಸೇಫ್ಟಿ ಫೀಚರ್ಸ್‌ ಇರುವ ಗಾಡಿಯನ್ನು ಯಾಕೆ ಖರೀದಿಸಬಾರದು ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು.

ಸಾಮಾನ್ಯವಾಗಿ ಒಳ್ಳೆಯ ಬಿಲ್ಡ್‌ ಕ್ವಾಲಿಟಿ ಇಲ್ಲದ ಕಾರುಗಳು ಲೈಟ್‌ ವೇಯ್ಟ್‌ ಸ್ಟೈನ್‌ಲೆಸ್‌ ಸ್ಟೀಲ್‌ ಮೆಟೀರಿಯಲ್ಸ್‌ ಗಳನ್ನು ಉಪಯೋಗಿಸುತ್ತಾರೆ. ಅದನ್ನು ಆಟೊಗ್ರೇಡ್‌ ಸ್ಟೀಲ್‌ ಎಂದು ಕರೆಯುತ್ತಾರೆ. ಅದೇ ರೀತಿ ಬಿಲ್ಡ್‌ ಕ್ವಾಲಿಟಿ ಒಳ್ಳೆಯದಿರುವ ಕಾರುಗಳಲ್ಲಿ ಅಲ್ಯುಮೀನಿಯಂ, ಮೆಗ್ನೀಸಿಯಂ ಹಾಗೂ ಸ್ಟೀಲ್‌ಗಳನ್ನು ಮಲ್ಟಿ ಲೇಯರ್‌ನಲ್ಲಿ ಬಲಿಷ್ಟವಾಗಿ ತಯಾರಿಸುತ್ತಾರೆ. ಈ ಗಾಡಿಯಯಲ್ಲಿ 55% ಉಕ್ಕು ಮತ್ತು ಕಬ್ಬಿಣವನ್ನು ಬಳಸಿದರೆ, 9% ಅಲ್ಯೂಮಿನಿಯಂ 7% ರಬ್ಬರ್‌, 11% ಪ್ಲಾಸ್ಟಿಕ್‌ ಮತ್ತು 14% ಬೇರೆ ವಸ್ತುಗಳನ್ನು ಬಳಸಲಾಗುತ್ತದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

ಕೆಲವು ಕಂಪನಿಗಳು, ತಾವು ತಯಾರಿಸಿದ ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲೇ ಅದರ ಬಿಲ್ಡ್‌ ಕ್ವಾಲಿಟಿಯನ್ನು ಪರೀಕ್ಷಿಸಿ ಅದರ ವೀಡಿಯೋಗಳನ್ನೂ ಬಿಡುಗಡೆ ಮಾಡುತ್ತವೆ. ಹೊಸ ಕಾರು ಖರೀದಿಸುವವರು ಇಂತಹ ವೀಡಿಯೋಗಳನ್ನು ನೋಡುವುದರ ಜೊತೆಗೆ ವಿಮರ್ಶೆಗಳನ್ನು ನೋಡಿ ಖರೀದಿಸುವುದು ಉತ್ತಮ.
– ಪ್ರಜ್ವಲ್‌ ಗೌಡ

 

Share This Article