ನಮಗೆ ಜೀವ ನೀಡುವುದೂ ಗೊತ್ತು.. ಜೀವ ತೆಗೆಯುವುದೂ ಗೊತ್ತು – ಪ್ರಜ್ಞಾ ಸಿಂಗ್‌ ಪ್ರಚೋದನಕಾರಿ ಭಾಷಣ

Public TV
2 Min Read

ಶಿವಮೊಗ್ಗ: ನಮಗೆ ಜೀವ ನೀಡುವುದೂ ಗೊತ್ತು, ಜೀವ ತೆಗೆಯುವುದೂ ಗೊತ್ತು ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ (Sadhvi Pragya Singh Thakur) ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಶಿವಮೊಗ್ಗದಲ್ಲಿ (Shivamogga) ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಸಮ್ಮೇಳನ ಆಯೋಜಿಸಿದ್ದು, ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ದಿಕ್ಸೂಚಿ ಭಾಷಣದಲ್ಲಿ, ಹಿಂದೂಗಳು ಎಲ್ಲೇ ಇದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಇದಕ್ಕೂ ಮೊದಲು ಉಡುಪಿಗೆ ದುರ್ಗಾ ಪೂಜೆಗೆ ಬರಬೇಕಿತ್ತು. ಆದರೆ ಕಾಂಗ್ರೆಸ್‌ ಅವಧಿಯಲ್ಲಿ ನನ್ನ ಮೇಲೆ ಆದ ಹಲ್ಲೆಯಿಂದಾಗಿ ನೋವು ಹೆಚ್ಚಾಗಿ ಬರಲಾಗಲಿಲ್ಲ. ಆದರೆ ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಬಂದಿದ್ದೇನೆ. ಜನನಿ ಜನ್ಮಭೂಮಿ ಎಂದು ನಾವು ನಂಬಿದ್ದೇನೆ. ಸ್ವರ್ಗಕ್ಕಿಂತ ಹೆಚ್ಚು ಎಂದು ಭಾವಿಸಿದ್ದೇವೆ. ಹಾಗಾಗಿ ಈ ಭೂಮಿಯ ಋಣ ತೀರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಪುರಸಭೆ ಸದಸ್ಯೆ ಮೇಲೆ ಬೀದಿನಾಯಿಗಳ ದಾಳಿ – ಈಗ್ಲಾದ್ರೂ ಸಮಸ್ಯೆಗೆ ಪರಿಹಾರ ನೀಡಿ ಎಂದ ಜನ

ನಮ್ಮನ್ನು ಹತ್ತಿಕ್ಕುವ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ಅದನ್ನು ಮೀರಿ ನಾವು ಬೆಳೆಯಬೇಕಿದೆ. ಕಿಡಿಗೇಡಿಗಳ ಕೃತ್ಯಕ್ಕೆ ನಮ್ಮವರು ಬಲಿದಾನಗೈದಿದ್ದಾರೆ. ಹಿಂದೂ ಸಂಘಟನೆಯ ಗೋವಿಂದರಾಜ್, ಶಿವಮೂರ್ತಿ, ಗೋಕುಲ್, ಹರ್ಷ, ಪ್ರವೀಣ್ ನೆಟ್ಟಾರ್, ಪ್ರಶಾಂತ್ ಪೂಜಾರಿ, ರುದ್ರೇಶ್, ಕುಟ್ಟಪ್ಪ, ಸೌಮ್ಯ ಭಟ್ ಸೇರಿದಂತೆ ಅನೇಕರ ಬಲಿದಾನವಾಗಿದೆ. ಆದರೆ ಈಗ ಸಾಯುವ ಸಮಯವಲ್ಲ, ಸಾಯಿಸುವ ಸಮಯ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ನಾನು ಬಿಜೆಪಿಯ ಸಂಸದೆ. ನಾನು ಜನರಿಗಾಗಿ ಸಂಸತ್ತಿನ ಒಳಗೆ, ಹೊರಗೆ ಹೋರಾಡುತ್ತಿದ್ದೇನೆ. ದೇಶದಲ್ಲಿ ಸಾಧು-ಸಂತರ ಮೇಲೆ ಹಲ್ಲೆ, ಹತ್ಯೆ ಆದಾಗ ಯಾರೂ ಮಾತನಾಡುವುದಿಲ್ಲ. ಆದರೆ ನಾವು ಸುಮ್ಮನೆ ಕೂರುವವರಲ್ಲ. ನನಗೂ ಸಾಕಷ್ಟು ಜೀವ ಬೆದರಿಕೆ ಬರುತ್ತದೆ. ಆದರೆ ನಾನು ಅಂತಹವರಿಗೆ ಎದುರು ಬಂದು ಮಾತನಾಡುವಂತೆ ಹೇಳುತ್ತೇನೆ. ನಾನು ಇಂದು ನಾರಿಶಕ್ತಿಯಾಗಿ ಮಾತನಾಡುತ್ತಿದ್ದೇನೆ. ಸರ್ಕಾರಗಳ ಮೇಲೆ ನಂಬಿಕೆ ಇಡಬೇಡಿ. ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬರುತ್ತದೆ ಹೋಗುತ್ತದೆ. ಆದರೆ ಸಾಧು-ಸಂತರು ಬದಲಾಗುವುದಿಲ್ಲ. ಅವರನ್ನು ಕೊಲೆ ಮಾಡಲಾಗುವುದಿಲ್ಲ. ಏಕೆಂದರೆ ಅವರು ಸತ್ತ ಮೇಲೆ ಸಾಧುಗಳಾಗುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹೊಸ ಪಕ್ಷದಿಂದ ಯಾವುದೇ ಪರಿಣಾಮ ಬೀರಲ್ಲ: ರೆಡ್ಡಿಗೆ ಶ್ರೀರಾಮುಲು ಟಾಂಗ್‌

ಕಾಂಗ್ರೆಸ್‌ನ ಇಲ್ಲಿನ ನಾಯಕರೊಬ್ಬರು ಇತ್ತೀಚೆಗೆ ಹಿಂದೂಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಪೇಟ, ಧೋತಿ ಧರಿಸಲಾರಂಭಿಸಿದ್ದಾರೆ. ಆದರೆ ಅವರ ಪೇಟ ಬೀಳುತ್ತದೆ. ಹಿಂದೂಗಳಾಗಿ ಯಾರನ್ನು ತಯಾರಿಸಲಾಗುವುದಿಲ್ಲ. ಬದಲಿಗೆ ಜನ್ಮತಹಃ ಹಿಂದೂಗಳಾಗಿರಬೇಕು. ಅಂತಹವರಿಗೆ ಸರಿಯಾದ ಪಾಠ ಕಲಿಸಬೇಕು. ಮೋದಿ ಸುಮ್ಮನೆ ಪ್ರಧಾನಿಯಾಗಿಲ್ಲ. ಅವರ ಮನದಲ್ಲಿ, ದೇಹದ ಕಣದಲ್ಲಿ ಹಿಂದುತ್ವ ಇದೆ. ಗೋಧ್ರಾ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಮೋದಿಗೆ ಅಮೆರಿಕ ಪ್ರವೇಶ ನಿರಾಕರಿಸಿತು. ಆದರೆ ಇಂದು ಅದೇ ಅಮೆರಿಕ ಮೋದಿಯ ಕೈ ಹಿಡಿದಿದ್ದು, ಮಾತು ಕೇಳುತ್ತಿದೆ ಎಂದು ಹೇಳಿದ್ದಾರೆ.

ಈ ಮೊದಲು ದೇಶದ ಮೇಲೆ ಅತಿಕ್ರಮಣವಾದಾಗ ನಮ್ಮ ಜನ ಸಾಯುತ್ತಿದ್ದರು. 2007ರಲ್ಲಿ ಮುಂಬೈ ಮೇಲೆ ದಾಳಿಯಾದಾಗ ಕಾಂಗ್ರೆಸ್‌ ಸರ್ಕಾರ ಪಾಕಿಸ್ತಾನದ ವಿರುದ್ಧ ಮಾತನಾಡುವ ಧೈರ್ಯ ಮಾಡಲಿಲ್ಲ. ಆದರೆ ಈಗ ಹಾಗಲ್ಲ. ಮೋದಿ ಆಡಳಿತದಲ್ಲಿ ನಮ್ಮ ದೇಶದ ಮೇಲೆ ದಾಳಿ ಮಾಡಿದವರಿಗೆ ಸರಿಯಾದ ಪಾಠ ಕಲಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಮೃತ್ಯುಕೂಪವಾಗುತ್ತಿದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ – ಅತಿ ವೇಗಕ್ಕಿಲ್ಲ ಕಡಿವಾಣ!

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *