ಅಮ್ಮನ ಆಶೀರ್ವಾದ ಪಡೆದುಕೊಂಡ ಕ್ರಿಕೆಟ್ ದೇವರು

Public TV
2 Min Read

– ಸಚಿನ್‍ಗೆ ಸಿಕ್ತು ಅಮ್ಮನಿಂದ ವಿಶೇಷ ಗಿಫ್ಟ್

ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದೇಶ, ವಿದೇಶಗಳಿಂದ ಕೋಟ್ಯಂತರ ಅಭಿಮಾನಿಗಳು ಕ್ರಿಕೆಟ್ ದೇವರಿಗೆ ಶುಭಕೋರಿ ಹಾರೈಸುತ್ತಿದ್ದಾರೆ.

47ನೇ ಹುಟ್ಟುಹಬ್ಬದ ನಿಮಿತ್ತ ಸಚಿನ್ ತೆಂಡೂಲ್ಕರ್ ಅವರು ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಜೊತೆಗೆ ಅಮ್ಮನಿಂದ ಅವರಿಗೆ ವಿಶೇಷ ಗಿಫ್ಟ್ ಕೂಡ ಸಿಕ್ಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಮಾಸ್ಟರ್ ಬ್ಲಾಸ್ಟರ್, ತಾಯಿಯ ಆಶೀರ್ವಾದ ಪಡೆದು ನನ್ನ ದಿನವನ್ನು ಪ್ರಾರಂಭಿಸಿದೆ. ಅವರು ನನಗೆ ಉಡುಗೊರೆಯಾಗಿ ಗಣಪತಿ ಬಪ್ಪಾ ಫೋಟೋ ನೀಡಿದ್ದಾರೆ. ಇದು ಬೆಲೆ ಕಟ್ಟಲಾಗದ ಉಡುಗೊರೆ. ಈ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಂಡಿರುವೆ ಎಂದು ಹೇಳಿದ್ದಾರೆ.

47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಚಿನ್ ತೆಂಡೂಲ್ಕರ್ ಅವರಿಗೆ ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಕ್ರಿಸ್ ಗೇಲ್ ಸೇರಿದಂತೆ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಮಾಡಿ, ಕ್ರಿಕೆಟ್ ಮೇಲಿರುವ ಫ್ಯಾಶನ್ ಮೂಲಕ ಹಲವರಿಗೆ ಸ್ಫೂರ್ತಿಯಾಗಿರುವ ಸಚಿನ್ ಅವರಿಗೆ ಹುಟ್ಟುಹಬ್ಬದ ಶುಭಾಶಗಳು. ಮುಂದಿನ ನಿಮ್ಮ ದಿನಗಳು ಅದ್ಭುತವಾಗಿ ಇರಲಿ ಎಂದು ಹಾರೈಸಿದ್ದಾರೆ. ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ವಿಶ್ ಮಾಡಿದ್ದು, ಕ್ರೀಡೆಯಲ್ಲಿ ನೀವು ಬಿಟ್ಟುಹೋದ ಪರಂಪರೆ ಅಮರವಾದದ್ದು, ಹ್ಯಾಪಿ ಬರ್ತ್ ಡೇ ಚಾಂಪ್ ಎಂದು ಟ್ವೀಟ್ ಮಾಡಿದ್ದಾರೆ.

ಯುವರಾಜ್ ಸಿಂಗ್ ಕೂಡ ಟ್ವೀಟ್ ಮಾಡಿ, ಬ್ಯಾಟ್ ಮತ್ತು ಹಾರ್ಟ್ ನಲ್ಲಿ ವಿಶೇಷ ಸ್ಥಾನವೊಂದಿರುವ ಲೆಜೆಂಡ್‍ಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ದಾಖಲೆಯಂತೆ ನಿಮ್ಮ ಜೀವನ ಕೂಡ ಬೆಳಗಲಿ. ನಿಮ್ಮ ಉದಾತ್ತ ಕಾರ್ಯಗಳಿಂದ ಇನ್ನೂ ಹಲವರು ಸ್ಫೂರ್ತಿಗೊಳ್ಳಲಿ ಎಂದು ಬರೆದುಕೊಂಡಿದ್ದಾರೆ. ಆಟದ ರೀತಿಯನ್ನೇ ಬದಲಿಸಿ ಕ್ರಿಕೆಟ್ ಅನ್ನು ಅನೇಕರು ಪ್ರೀತಿಸುವಂತೆ ಮಾಡಿದ ವ್ಯಕ್ತಿ. ಒಳ್ಳೆಯ ವ್ಯಕ್ತಿತ್ವವಿರುವ ಲೆಜೆಂಡ್‍ಗೆ ಹ್ಯಾಪಿ ಬರ್ತೆ ಡೇ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

ಸಚಿನ್ ಅವರ ಹುಟ್ಟುಹಬ್ಬಕ್ಕೆ ಐಸಿಸಿ ಸೇರಿದಂತೆ ಬಿಸಿಸಿಐ ಕೂಡ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದು, ಭಾರತದ ಓಟಗಾರ್ತಿ ಹಿಮಾದಾಸ್ ಕೂಡ ಸಚಿನ್ ಅವರಿಗೆ ವಿಶ್ ಮಾಡಿದ್ದಾರೆ. ಉಳಿದಂತೆ ಮಾಜಿ ಆಟಗಾರರಾದ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಲ್ಲರೂ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *