ಐದೂವರೆ ವರ್ಷದ ಬಳಿಕ ಬ್ಯಾಟ್ ಹಿಡಿದು ಮಹಿಳಾ ಬೌಲರ್‌ನನ್ನು ಎದುರಿಸಿದ ಸಚಿನ್- ವಿಡಿಯೋ

Public TV
2 Min Read

ಮೆಲ್ಬರ್ನ್: ಇಲ್ಲಿನ ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾದ ಬುಷ್‍ಫೈರ್ ಪರಿಹಾರಕ್ಕೆ ನೆರವಾಗಲು ಸಚಿನ್ ತೆಂಡೂಲ್ಕರ್ ಅವರು ನಿವೃತ್ತಿಯಿಂದ ಹೊರಬಂದು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾದ ಮಹಿಳಾ ವೇಗದ ಬೌಲರ್ ಎಲಿಸ್ ಪೆರ್ರಿ ಎಸೆದ ವಿಶೇಷ ಓವರ್‌ನಲ್ಲಿ ಭರ್ಜರಿ ಬ್ಯಾಟ್ ಬೀಸಿದ್ದಾರೆ. ಐದೂವರಿ ವರ್ಷಗಳ ಬಳಿಕ ಸಚಿನ್ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.

ಸಚಿನ್ ತೆಂಡೂಲ್ಕರ್ ಅವರು ಎಲಿಸ್ ಪೆರ್ರಿ ಎಸೆದ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. ಬಳಿಕ ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಎಲಿಸ್ ಪೆರ್ರಿ ಬಳಿಕ ಆಸ್ಟ್ರೇಲಿಯಾ ಮಹಿಳಾ ತಂಡದ ಮತ್ತೋರ್ವ ಮಹಿಳಾ ಬೌಲರ್ ಎಸೆತಗಳನ್ನು ಸಚಿನ್ ಎದುರಿಸಿದರು.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಆಲ್‍ರೌಂಡರ್ ಎಲಿಸ್ ಪೆರ್ರಿ ಅವರ ವಿಡಿಯೋವನ್ನು ಟ್ವೀಟ್ ಮಾಡಿತ್ತು. ಈ ವಿಡಿಯೋದಲ್ಲಿ ಎಲಿಸ್ ಪೆರ್ರಿ, ಹಾಯ್ ಸಚಿನ್. ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ನೀವು ರಿಕ್ಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿರುವುದು ನನಗೆ ಗೊತ್ತಿದೆ. ಪಂದ್ಯದ ವಿಶ್ರಾಂತಿ ವೇಳೆ ಒಂದು ಓವರ್ ಆಡಲು ನೀವು ನಿವೃತ್ತಿಯಿಂದ ಹೊರಬಂದರೆ ನಾವು ಹೆಚ್ಚು ಖುಷಿ ಪಡುತ್ತೇವೆ ಎಂದು ಕೇಳಿಕೊಡಿದ್ದರು.

https://www.facebook.com/cricketcomau/videos/2552024751723036/?t=157&v=2552024751723036

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸಚಿನ್, ಉತ್ತಮ ಮನವಿ ಎಲಿಸ್. ನಾನು ಒಂದು ಓವರ್ ಬ್ಯಾಟ್ ಮಾಡಲು ಇಷ್ಟಪಡುತ್ತೇನೆ. ನನ್ನ ಭುಜದ ಗಾಯದಿಂದಾಗಿ ವೈದ್ಯರು ಆಡದಂತೆ ಸಲಹೆ ನೀಡಿದ್ದಾರೆ. ಈಗ ನಾನು ಆಡುವುದು ಅವರ ಸಲಹೆಗೆ ವಿರುದ್ಧವಾಗಿರುತ್ತದೆ. ಆದರೂ ಮೈದಾಕ್ಕಿಳಿಯುತ್ತೇನೆ ಎಂದು ತಿಳಿಸಿದ್ದರು.

ಅಷ್ಟೇ ಅಲ್ಲದೆ ಸಚಿನ್ ಎಲಿಸ್ ಪೆರ್ರಿ ಅವರಿಗೆ ಸವಾಲೊಂದನ್ನು ಹಾಕಿದ್ದರು. ಭಾನುವಾರ ನಡೆಯುವ ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಸಾಕಷ್ಟು ಹಣ ಬರುತ್ತದೆ. ಆ ಒಂದು ಓವರಿನಲ್ಲಿ ನನ್ನನ್ನು ಔಟ್ ಮಾಡಿ ಎಂದು ಎಲಿಸ್ ಪೆರ್ರಿ ಅವರಿಗೆ ಹೇಳಿದ್ದರು.

ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಪಾಂಟಿಂಗ್ ನಾಯಕತ್ವದ ತಂಡ ಬ್ರಿಯಾನ್ ಲಾರಾ 30 ರನ್ (11 ಎಸೆತ), ರಿಕ್ಕಿ ಪಾಂಟಿಂಗ್ 26 ರನ್ (14 ಎಸೆತ), ಮ್ಯಾಥ್ಯೂ ಹೇಡನ್ 16 ರನ್ (14 ಎಸೆತ), ಲ್ಯೂಕ್ ಹಾಡ್ಜ್ ಔಟಾಗದೆ 11 ರನ್ (4 ಎಸೆತ) ಸೇರಿ ನಿಗದಿತ 10 ಓವರಿಗೆ 5 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತ್ತು. ಇದೇ ಸಮಯದಲ್ಲಿ ಗಿಲ್‍ಕ್ರಿಸ್ಟ್ ತಂಡದ ಯುವರಾಜ್ ಸಿಂಗ್, ಆ್ಯಡ್ರ್ಯೂ ಸೈಮಂಡ್ಸ್ ಹಾಗೂ ಕಟ್ರ್ನಿ ವಾಲ್ಷ್ ತಲಾ ಒಂದು ವಿಕೆಟ್ ಪಡೆದರು. ಆದರೆ ಪಾಂಟಿಂಗ್ ತಂಡ ನೀಡಿದ್ದ 105 ರನ್‍ಗಳ ಗುರಿ ಬೆನ್ನಟ್ಟಿದ ಆ್ಯಡಮ್ ಗಿಲ್‍ಕ್ರಿಸ್ಟ್ ತಂಡವು ಒಂದು ರನ್‍ನಿಂದ ಸೋಲು ಒಪ್ಪಿಕೊಂಡಿತು.

Share This Article
Leave a Comment

Leave a Reply

Your email address will not be published. Required fields are marked *