ತಿರುವನಂತಪುರ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಬಳ್ಳಾರಿ, ತಮಿಳುನಾಡು, ಕೇರಳ ಸೇರಿದಂತೆ 21 ಕಡೆ ಇಡಿ ದಾಳಿ (ED Raid) ನಡೆಸಿದೆ.
ಈ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದ್ದು, ಇದೀಗ ಇಡಿ ಎಂಟ್ರಿಕೊಟ್ಟಿದೆ. ಬೆಂಗಳೂರು, ಬಳ್ಳಾರಿ ಹಾಗೂ ತಿರುವನಂತಪುರಂದ ಹಲವೆಡೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದೆ.ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ರೊದ್ದಂ ಜ್ಯುವೆಲ್ಸ್ ಮೇಲೆ ಕೇರಳ ಎಸ್ಐಟಿ ದಾಳಿ
ಚಿನ್ನ ಕಳ್ಳತನದ ಆರೋಪದಲ್ಲಿ ಜೈಲುಪಾಲಾಗಿರುವ ಗೋವರ್ಧನ್ ಒಡೆತನದ ಬಳ್ಳಾರಿಯ ರೊದ್ದಂ ಜ್ಯುವೆಲರಿ ಶಾಪ್ ಹಾಗೂ ಮನೆ, ಶಬರಿಮಲೆಯ ತಂತ್ರಿಯಾಗಿದ್ದ ಬೆಂಗಳೂರಿನ ಶ್ರೀರಾಮಪುರ ನಿವಾಸಿ ಪೊನ್ನಿ ಉನ್ನಿಕೃಷ್ಣನ್, ಸ್ಟಾರ್ಟ್ ಕ್ರಿಯೇಷನ್, ವಾಸು ನಿವಾಸ ಸೇರಿದಂತೆ ತಮಿಳುನಾಡು, ಕೇರಳ ಸೇರಿದಂತೆ 21 ಕಡೆ ಇಡಿ ದಾಳಿ ನಡೆಸಿದೆ. ಈ ಹಿಂದೆ ಎಸ್ಐಟಿ ಅಧಿಕಾರಿಗಳು ಕೂಡ ದಾಳಿ ನಡೆಸಿದ್ದರು.
ಚಿನ್ನ ಕಳ್ಳತನ ಕೇಸಲ್ಲಿ ಅಕ್ರಮ ಹಣದ ವರ್ಗಾವಣೆ ಕಂಡುಬಂದ ಹಿನ್ನೆಲೆ ಇಸಿಐಆರ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು (ಜ.20) ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸ್ತಿದೆ. ಪೊನ್ನಿ ಉನ್ನಿಕೃಷ್ಣನ್ ಹಾಗು ಗೋವರ್ಧನ್ ಸೇರಿಕೊಂಡು ಕದ್ದ ಚಿನ್ನದ ಹಣವನ್ನ ಅಕ್ರಮವಾಗಿ ಇತರರಿಗೆ ವರ್ಗಾವಣೆ ಸಹ ಮಾಡಿದ್ದಾರೆ. ಹೀಗಾಗಿ ಮನೆಯಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿ, ಬಳಿಕ ನೋಟಿಸ್ ಕೊಟ್ಟು ಆರೋಪಿಗಳನ್ನು ವಿಚಾರಣೆಗೆ ಕರೆದು ಅರೆಸ್ಟ್ ಮಾಡುವ ಸಾಧ್ಯತೆಯಿದೆ.
ಈಗಾಗಲೇ ಎಸ್ಐಟಿ ಅಧಿಕಾರಿಗಳು ದೇಗುಲದ ಪ್ರಧಾನ ಅರ್ಚಕ ಕಂದರಾರು ರಾಜೀವ್ನನ್ನು ಅರೆಸ್ಟ್ ಮಾಡಿದ್ದಾರೆ. ಚಿನ್ನ ಕಳ್ಳತನದ ಹಿಂದೆ ದೊಡ್ಡ ಸಂಚು ಮತ್ತು ಮಧ್ಯವರ್ತಿಗಳ ಲಿಂಕ್ ಇರುವ ಬಗ್ಗೆ ಎಸ್ಐಟಿ ಶಂಕೆ ವ್ಯಕ್ತಪಡಿಸಿದೆ. ಕಂದರಾರು ರಾಜೀವ್, ತಂತ್ರಿ ಉನ್ನಿಕೃಷ್ಣನ್ ಪೊಟ್ಟಿಯವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಫಲಕಗಳಿಗೆ ಚಿನ್ನ ಲೇಪಿಸುವ ನೆಪದಲ್ಲಿ ನಡೆದ ಪ್ರಾಯೋಜಕತ್ವದ ನಂತರ ಚಿನ್ನದ ಕಳ್ಳತನಕ್ಕೆ ಕಾರಣವಾಯಿತು ಎಂಬ ಆರೋಪ ಕೇಳಿಬಂದಿದೆ. ಫಲಕಗಳಿಗೆ ಚಿನ್ನ ಲೇಪಿಸಲು ಕಂದರಾರು ರಾಜೀವ್ ಅನುಮತಿ ನೀಡಿದ್ದ ಎಂಬುದು ತನಿಖೆಯಲ್ಲಿ ಮಹತ್ವದ ಅಂಶವಾಗಿದೆ. ಕಳೆದ ನವೆಂಬರ್ನಲ್ಲಿಯೇ ಎಸ್ಐಟಿ ರಾಜೀವ್ನಿಂದ ಮಾಹಿತಿ ಸಂಗ್ರಹಿಸಿತ್ತು. ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಕೇಸ್ – SITಯಿಂದ ಪ್ರಧಾನ ಅರ್ಚಕ ಕಂದರಾರು ರಾಜೀವ್ ಅರೆಸ್ಟ್

