ಬಾತ್ ಟಬ್‌ನಲ್ಲಿ ಸಾನ್ಯ ಅಯ್ಯರ್ ಫೋಟೋಶೂಟ್

Public TV
1 Min Read

‘ಬಿಗ್ ಬಾಸ್’ ಬೆಡಗಿ ಸಾನ್ಯ ಅಯ್ಯರ್ (Saanya Iyer) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಪಡ್ಡೆಹುಡುಗರನ್ನ ಅಟ್ರ್ಯಾಕ್ಟ್ ಮಾಡುತ್ತಿರುತ್ತಾರೆ. ಇದೀಗ ಬಾತ್ ಟಬ್‌ನಲ್ಲಿ ಕುಳಿತು ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸಾನ್ಯ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕಪ್ಪು ಬಣ್ಣದ ತುಂಡು ಬಟ್ಟೆ ಧರಿಸಿ ಹಿಂದೆ ಜರಿಯಂತೆ ಕಲರ್‌ಫುಲ್ ಡ್ರೆಸ್ ತೊಟ್ಟು ಸಾನ್ಯ ಮಿಂಚಿದ್ದಾರೆ. ತಲೆಗೆ ಕಡ್ಡಿಯ ಕಿರೀಟ ಧರಿಸಿ ಮುದ್ದು ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಬಾತ್ ಟಬ್‌ನಲ್ಲಿ ಮಲಗಿ ನಾನಾ ರೀತಿಯ ಪೋಸ್ ನೀಡಿದ್ದಾರೆ.

ಕಳೆದ ವರ್ಷ ‘ಬಿಗ್ ಬಾಸ್’ ಸೀಸನ್ 9ರಲ್ಲಿ (Bigg Boss Kannada 9) ಸಾನ್ಯ ಅಯ್ಯರ್ ಸ್ಪರ್ಧಿಯಾಗಿದ್ದರು. 80ಕ್ಕೂ ಹೆಚ್ಚು ದಿನಗಳವರೆಗೂ ಸಾನ್ಯ ಆಟ ಆಡಿ ಎಲಿಮಿನೇಟ್ ಆಗಿದ್ದರು. ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ವಿಚಾರವಾಗಿ ಸಖತ್ ಸುದ್ದಿಯಾಗಿದ್ದರು.

ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಚಿತ್ರದಲ್ಲಿ ಸಾನ್ಯ ಅಯ್ಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇರುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಗೌರಿ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ‘ಗೌರಿ’ ಸಿನಿಮಾ ಜೊತೆ ಜೊತೆಗೆ ಹೊಸ ಬಗೆಯ ಕಥೆಗಳನ್ನ ನಟಿ ಕೇಳುತ್ತಿದ್ದಾರೆ.

Share This Article