ಸೀರೆಯುಟ್ಟು ಅಪ್ಸರೆಯಂತೆ ಕಂಗೊಳಿಸಿದ ‘ಗೌರಿ’ ಸಾನ್ಯ ಅಯ್ಯರ್

Public TV
1 Min Read

ಬಿಗ್ ಬಾಸ್ ಬೆಡಗಿ (Bigg Boss Kannada) ಸಾನ್ಯ ಅಯ್ಯರ್ (Saanya Iyer) ಅವರು ಸ್ಯಾಂಡಲ್‌ವುಡ್‌ಗೆ (Sandalwood)  ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ. ಗೌರಿ ಸಿನಿಮಾಗೆ ಹೀರೋಯಿನ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸೀರೆಯುಟ್ಟು ಮಿಂಚಿದ್ದರು. ಈಗ ಸೀರೆಯಲ್ಲಿನ ತಮ್ಮ ಚೆಂದದ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

ಇತ್ತೀಚಿನ ಫೋಟೋಶೂಟ್‌ನಲ್ಲಿ ಸಾನ್ಯ ಅಯ್ಯರ್ ಅವರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಲೈಟ್ ಬಣ್ಣದ ಸೀರೆಯುಟ್ಟು ಕೊಂಚ ರೆಟ್ರೋ ಸ್ಟೈಲಿನಲ್ಲಿ ಮಿಂಚಿದ್ದಾರೆ. ಹಸಿರು ಮತ್ತು ಸಿಲ್ವರ್ ಮಿಶ್ರಿತ ಬಣ್ಣದ ಜ್ಯುವೆಲ್ಲರಿ, ತಲೆಗೆ ಗುಲಾಬಿ ಹೂ ಮುಡಿದು ಡಿಫರೆಂಟ್ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ. ಸಾನ್ಯ ಸೀರೆ ಲುಕ್‌ ನೋಡ್ತಿದಂತೆ ಸೀರೆಯಲ್ಲಿ ಹುಡುಗಿರ ನೋಡಲೇಬಾರದು ನಿಲ್ಲಲ್ಲ ಟೆಂಪ್ರೇಚರ್‌ ಎಂದು ಪಡ್ಡೆಹುಡುಗರು ಹಾಡು ಹಾಡಲು ಶುರುಮಾಡಿದ್ದಾರೆ. ಇದನ್ನೂ ಓದಿ:Kushi ಸಿನಿಮಾ ಸಕ್ಸಸ್, ವಿಜಯ್ ದೇವರಕೊಂಡ ಟೆಂಪಲ್ ರನ್

ಸಾನ್ಯ ಅಯ್ಯರ್‌ಗೆ ನಾಯಕಿಯಾಗಿ ನಟಿಸಬೇಕು ಎಂಬುದು ಚಿಕ್ಕ ವಯಸ್ಸಿನಿಂದ ಆಸೆ ಇತ್ತು. ಅದರಂತೆ ಈಗ ಇಂದ್ರಜಿತ್ ಲಂಕೇಶ್ (Indrajit Lankesh)  ಅವರ ನಿರ್ದೇಶನದ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

ಮಗ ಸಮರ್ಜಿತ್ ಚೊಚ್ಚಲ ಸಿನಿಮಾಗೆ ಇಂದ್ರಜಿತ್ ನಿರ್ದೇಶನ ಮಾಡ್ತಿದ್ದಾರೆ. ಸಹೋದರಿ ಗೌರಿ ಲಂಕೇಶ್ ನೆನಪಿನಲ್ಲೇ ಈ ಸಿನಿಮಾಗೆ ಗೌರಿ (Gowri) ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಶುರುವಾಗಿಲಿದೆ. ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ರು. ಈಗ ಸಾನ್ಯ ನಾಯಕಿಯಾಗಿ ಕರ್ನಾಟಕ ಜನತೆಯ ಮನಗೆಲ್ಲುತ್ತಾರಾ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್