ಎದೆ ಮೇಲೆ ಕೈ ಇಟ್ಟ ಅಂತಾ ಕಿರಿಕ್‌ ಮಾಡಿದ್ದು ನೀನೇ ಅಲ್ವಾ- ಸಾನ್ಯ ಹಾಟ್ ಫೋಟೋಗೆ ಕಿಡಿಕಾರಿದ ನೆಟ್ಟಿಗರು

By
1 Min Read

‘ಬಿಗ್ ಬಾಸ್’ (Bigg Boss Kannada) ಸೀಸನ್ 9ರ ಶೋ ಮೂಲಕ ಮನೆ ಮಾತಾದ ಕಿರಿಕ್ ಸುಂದರಿ ಸಾನ್ಯ ಅಯ್ಯರ್ (Saanya Iyer) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಮಾಡ್ತಿರುತ್ತಾರೆ. ಈಗ ಮತ್ತೆ ಹಾಟ್ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಎದೆ ಮೇಲೆ ಕೈ ಇಟ್ಟ ಅಂತಾ ಕಿರಿಕ್‌ ಮಾಡಿದ್ದು ನೀನೇ ಅಲ್ವಾ ಅಂತಾ ಸಾನ್ಯ ಹಾಟ್ ಫೋಟೋಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಪುಟ್ಟಗೌರಿ ಮದುವೆ, ಬಿಗ್ ಬಾಸ್ (Bigg Boss Kannada) ಮೂಲಕ ಪರಿಚಿತರಾದ ಸಾನ್ಯ ಅಯ್ಯರ್ ಅವರು ಸಿನಿಮಾ ವಿಚಾರಕ್ಕಿಂತ ಕಿರಿಕ್ ಮಾಡಿಕೊಂಡ ವಿಚಾರವಾಗಿಯೇ ಸದ್ದು ಮಾಡಿದ್ದು, ಜಾಸ್ತಿ. ದೊಡ್ಮನೆಯಿಂದ ಹೊರ ಬಂದ ಮೇಲೆ ಹೇಳಿಕೊಳ್ಳುವಂತಹ ಅವಕಾಶ ಅವರಿಗೇನು ಸಿಕ್ಕಿಲ್ಲ. ಒಂದೊಳ್ಳೆಯ ಅವಕಾಶಕ್ಕಾಗಿ ನಟಿ ಎದುರು ನೋಡ್ತಿದ್ದಾರೆ.

ಇತ್ತೀಚಿಗಷ್ಟೇ ಖ್ಯಾತ ಬಾಲಿವುಡ್ (Bollywood) ಫೋಟೋಗ್ರಾಫರ್ ಡಬೂ ರತ್ನಾನಿ (Dabboo Ratnani) ಕ್ಯಾಮೆರಾ ಕಣ್ಣಿನಲ್ಲಿ ಸಾನ್ಯ ಅಯ್ಯರ್ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಮತ್ತೊಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನೇರಳೆ ಬಣ್ಣದ ಕೋಟ್, ಕಪ್ಪು ಬಣ್ಣದ ಸ್ಕರ್ಟ್ ಧರಿಸಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಈ ಫೋಟೋಶೂಟ್‌ನಲ್ಲಿ ಮತ್ತಷ್ಟು ಹಾಟ್ & ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಟಿ ಬಿಪಾಶಾ ಬಸು

 

View this post on Instagram

 

A post shared by Saanya Iyer (@saanyaiyer)

ಸಾನ್ಯ ಹಾಟ್ ಫೋಟೋಗೆ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಹರಿದು ಬರುತ್ತಿದೆ. ನೀನೇ ಅಲ್ವಾ ಯಾವುದೋ ಜಾತ್ರೆಯಲ್ಲಿ ಎದೆ ಮೇಲೆ ಕೈ ಹಾಕಿದ್ದ ಅಂತಾ ಗಲಾಟೆ ಮಾಡಿ ಫೇಮಸ್ ಆಗಿದ್ದು, ಈಗ ಏನು ನಿಮ್ಮ ಅವತಾರ ಅಂತಾ ತುಸು ಖಾರವಾಗಿಯೇ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅವಕಾಶಕ್ಕಾಗಿ ಏನು ಬೇಕಾದರೂ ಮಾಡ್ತೀರಾ ಅಂತಾ ಫ್ಯಾನ್ಸ್, ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

Share This Article