Bigg Boss: ಮತ್ತೆ ಒಟ್ಟಾಗಿ ಕಾಣಿಸಿಕೊಂಡ ಸಾನ್ಯ, ರೂಪೇಶ್ ಶೆಟ್ಟಿ

Public TV
1 Min Read

ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಅಯ್ಯರ್ (Saanya Iyer) ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಬಹುದಿನಗಳ ನಂತರ ದೊಡ್ಮನೆಯ ಪ್ರೇಮ ಪಕ್ಷಿಗಳು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ರೂಪೇಶ್ ಶೆಟ್ಟಿ ಜೊತೆಗಿನ ಸಾನ್ಯ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಕಾರ್ಯಕ್ರಮವೊಂದರಲ್ಲಿ ಇಬ್ಬರು ಕ್ಯಾಮೆರಾ ಕಣ್ಣಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸಾನ್ಯ ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಕೆಂಪು ಬಣ್ಣದ ಉಡುಗೆಯಲ್ಲಿ ರೂಪೇಶ್ ಹೈಲೆಟ್ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 9ರಲ್ಲಿ ರೂಪೇಶ್ ಮತ್ತು ಸಾನ್ಯ ಲವ್ವಿ ಡವ್ವಿ ಜೋರಾಗಿತ್ತು. ಇಬ್ಬರು ಪ್ರೇಮಿಗಳಂದೇ ಹೈಲೆಟ್ ಆಗಿದ್ದರು. ದೊಡ್ಮನೆಯಲ್ಲಿ ರೂಪೇಶ್ ಮತ್ತು ಸಾನ್ಯ ಒಡನಾಟ ಚೆನ್ನಾಗಿತ್ತು. ಇದನ್ನೂ ಓದಿ:ಆಪ್ತ ಸಹಾಯಕನ ಮನೆಗೆ ಯಶ್ ಸರ್ಪ್ರೈಸ್ ಎಂಟ್ರಿ

ದೊಡ್ಮನೆ ಆಟ ಮುಗಿದ ಮೇಲೆ ಸಾನ್ಯ ಮತ್ತು ರೂಪೇಶ್ ಇಬ್ಬರು ಕೂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ  ಬ್ಯುಸಿಯಾಗಿದ್ದಾರೆ. ಸಾನ್ಯ ‘ಗೌರಿ’ (Gowri) ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Share This Article