ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ

By
3 Min Read

ಮುಂಬೈ: ಬಾಲಿವುಡ್ ತಾರೆಗಳು ಮತ್ತು ಕ್ರಿಕೆಟ್ ದಂತಕಥೆಗಳೊಂದಿಗೆ ಮೊಟ್ಟಮೊದಲ ಬಾರಿಗೆ ‘ಫ್ರೆಂಡ್‍ಶಿಪ್ ಕಪ್’ ಕ್ರಿಕೆಟ್ ಟೂರ್ನಿಮೆಂಟ್ ನಡೆಯಲಿದ್ದು, ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ನೇತೃತ್ವದ ತಂಡದಲ್ಲಿ ಎಸ್ ಶ್ರೀಶಾಂತ್ ಅವರು ಆಟವಾಡಲಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಮೂರು ದಿನಗಳ ಫ್ರೆಂಡ್‍ಶಿಪ್ ಟಿ-10 ಕಪ್ ಟೂರ್ನಿಮೆಂಟ್ ನಡೆಯಲಿದೆ. ಇದರಲ್ಲಿ ವಿಶ್ವದ ಮಾಜಿ ಕ್ರಿಕೆಟ್ ದಂತಕಥೆಗಳು ಮತ್ತು ಬಾಲಿವುಡ್ ತಾರೆಗಳು ವಿಶ್ವದಾದ್ಯಂತ ಜನರು ಮತ್ತು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಟಗರು ಲುಕ್‍ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

ಮಾರ್ಚ್ 5 ರಿಂದ ಮೊದಲ ಆವೃತ್ತಿಯ ಫ್ರೆಂಡ್‍ಶಿಪ್ ಕಪ್ ಅನ್ನು ಅರ್ಬಾ ಸ್ಪೋಟ್ರ್ಸ್ ಸರ್ವಿಸ್ ಎಲ್‍ಎಲ್‍ಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಸ್ಲಂ ಗುರುಕ್ಕಲ್ ಅವರು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದಾರೆ.

ಗರಿಷ್ಠ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಯೋಜಿಸಿದ ವಿಶ್ವದಾಖಲೆಯನ್ನು ಹೊಂದಿರುವ ಶಾರ್ಜಾವು ಮೊದಲ ಫ್ರೆಂಡ್‍ಶಿಪ್ ಕಪ್ ಅನ್ನು ಯುಎಇಯಲ್ಲಿ ಹಮ್ಮಿಕೊಂಡಿದೆ. ಈ ಪಂದ್ಯಾವಳಿಯು ನಾಲ್ಕು ತಂಡಗಳನ್ನು ಒಳಗೊಂಡಿರುತ್ತದೆ. ಇಂಡಿಯಾ ಲೆಜೆಂಡ್ಸ್, ಪಾಕಿಸ್ತಾನ್ ಲೆಜೆಂಡ್ಸ್, ವಲ್ರ್ಡ್ ಲೆಜೆಂಡ್ಸ್ 11 ಮತ್ತು ಬಾಲಿವುಡ್ ಕಿಂಗ್ಸ್ ತಂಡಗಳನ್ನು ಕ್ರಿಕೆಟ್ ಹಾಗೂ ಬಾಲಿವುಡ್ ತಾರೆಗಳು ಮುನ್ನಡೆಸಲಿದ್ದಾರೆ.

ನಟ ಸುನೀಲ್ ಶೆಟ್ಟಿ ನೇತೃತ್ವದಲ್ಲಿ ಬಾಲಿವುಡ್ ಕಿಂಗ್ಸ್ ತಂಡವು ಮುನ್ನಡೆಯಲಿದ್ದು, ಸೊಹೈಲ್ ಖಾನ್ ಮತ್ತು ಅಫ್ತಾಬ್ ಶಿವದಾಸನಿ ಜೊತೆಗೆ ನಟ ಸಲೀಲ್ ಅಂಕೋಲಾ ಮತ್ತು ಎಸ್. ಶ್ರೀಶಾಂತ್ ಅವರನ್ನು ಒಳಗೊಂಡಿದೆ.

ಶ್ರೀಶಾಂತ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮೆಗಾ ಹರಾಜಿಗೆ ರೂ 50 ಲಕ್ಷ ಮೂಲ ಬೆಲೆಗೆ ನೊಂದಾಯಿಸಿದ್ದರು ಆದರೆ ಮಾರಾಟವಾಗಲಿಲ್ಲ.

ಎರಡನೇ ಟೀಮ್ ಇಂಡಿಯಾ ಲೆಜೆಂಡ್ಸ್ ತಂಡದಲ್ಲಿ, ಮೊಹಮ್ಮದ್ ಕೈಫ್, ಮುನಾಫ್ ಪಟೇಲ್, ಅಜಯ್ ಜಡೇಜಾ ಮತ್ತು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಂತಹ ಶ್ರೇಷ್ಠರನ್ನು ಒಳಗೊಂಡಿದೆ. ಇದನ್ನೂ ಓದಿ: ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮೂರನೇ ತಂಡ ಪಾಕಿಸ್ತಾನ ಲೆಜೆಂಡ್ಸ್‍ನಲ್ಲಿ ವಿಶ್ವ ದರ್ಜೆಯ ಆಟಗಾರರಾದ ಮಹಮ್ಮದ್ ಯೂಸುಫ್, ಸಲ್ಮಾನ್ ಬಟ್ ಮತ್ತು ಇಮ್ರಾನ್ ನಜೀರ್ ಅವರನ್ನು ಒಳಗೊಂಡಿದೆ.

ಅಜಂತಾ ಮೆಂಡಿಸ್ ನೇತೃತ್ವದ ನಾಲ್ಕನೇ ತಂಡವಾದ ವಲ್ರ್ಡ್ ಲೆಜೆಂಡ್ಸ್ 11ನಲ್ಲಿ, ಶ್ರೀಲಂಕಾದ ಆಟಗಾರರಾದ ತಿಲಕರತ್ನೆ ದಿಲ್ಶನ್ ಮತ್ತು ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆಯಂತಹ ಇತರ ಕ್ರಿಕೆಟ್ ದಂತಕಥೆಗಳನ್ನು ಒಳಗೊಂಡಿದೆ.

ಎಆರ್‍ಬಿಎ ಸ್ಪೋಟ್ರ್ಸ್ ಸರ್ವೀಸಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಸ್ಲಾಮ್ ಗುರುಕ್ಕಲ್, ಕ್ರಿಕೆಟ್ ಆಟದ ಬಗ್ಗೆ ನಮ್ಮ ಅಭಿಮಾನ ಮತ್ತು ಪ್ರೀತಿಯನ್ನು ತಿಳಿಸಲು ನಾವು ಸ್ಪರ್ಧೆಯನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ಫ್ರೆಂಡ್‍ಶಿಪ್ ಕಪ್ ಯುಎಇ ಪ್ರಪಂಚದಾದ್ಯಂತದ ಜನರು ಮತ್ತು ವಿವಿಧ ರಾಷ್ಟ್ರೀಯತೆಗಳ ಬಂಧಗಳನ್ನು ಬಲಪಡಿಸಲು ಇದು ಒಂದು ಅದ್ಭುತ ಅವಕಾಶವಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *