ರಾಜಮೌಳಿ ನಿರ್ದೇಶನದ ‘ವಾರಣಾಸಿ’ ರಿಲೀಸ್‌ ಡೇಟ್‌ ಔಟ್‌

1 Min Read

ಎಸ್‌.ಎಸ್‌.ರಾಜಮೌಳಿ (S.S.Rajamouli) ನಿರ್ದೇಶನದ ಬಹುನಿರೀಕ್ಷಿತ ‘ವಾರಣಾಸಿ’ (Varanasi Movie) ಸಿನಿಮಾ ರಿಲೀಸ್‌ ಡೇಟ್‌ ಹೊರಬಿದ್ದಿದೆ. ಮುಂದಿನ ವರ್ಷದ ಏ.7 ರಂದು ದೇಶಾದ್ಯಂತ ಸಿನಿಮಾ ತೆರೆ ಕಾಣಲಿದೆ.

ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು (Mahesh Babu), ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಕ್ಷನ್‌ ಎಪಿಕ್ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ

ಸುದೀರ್ಘ ವಿರಾಮದ ನಂತರ ವಾರಣಾಸಿ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಚಿತ್ರದಲ್ಲಿ ಅವರು ಮಂದಾಕಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಿದ್ದಾರೆ.

2025ರ ನವೆಂಬರ್ 15 ರಂದು ಹೈದರಾಬಾದ್‌ನಲ್ಲಿ ನಡೆದ Globetrotter ಸಮಾರಂಭದಲ್ಲಿ ಚಿತ್ರದ ಅಧಿಕೃತ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿತ್ತು. ಚಿತ್ರದ ಮೊದಲ ದೃಶ್ಯಗಳನ್ನು ಆರಂಭದಲ್ಲಿ ಹೈದರಾಬಾದ್ ಈವೆಂಟ್‌ನಲ್ಲಿ ಹಾಜರಿದ್ದ ಪ್ರೇಕ್ಷಕರಿಗೆ ಮಾತ್ರ ತೋರಿಸಲಾಗಿತ್ತು. ತಯಾರಕರು ಇಂದು ಜಾಗತಿಕವಾಗಿ ಗ್ಲಿಂಪ್ಸ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಸಹೋದರನ ಚಿತ್ರಕ್ಕೆ ನಿರ್ಮಾಪಕನಾದ ಪ್ರಜ್ವಲ್ ದೇವರಾಜ್ – ಚಿತ್ರದ ಫಸ್ಟ್ ಲುಕ್ ಲಾಂಚ್

Share This Article