ಹೊಸ ವರ್ಷಾರಂಭದಲ್ಲಿ ಮತ್ತೆ ಯುದ್ಧ – ರಷ್ಯಾದಿಂದ 2 ಲಕ್ಷ ಸಾಮರ್ಥ್ಯದ ಸೇನೆ ಸಿದ್ಧ

Public TV
2 Min Read

ಕೀವ್: ಮುಂಬರುವ ಹೊಸ ವರ್ಷ ಉಕ್ರೇನ್ (Ukraine) ಪಾಲಿಗೆ ಕಹಿಯಾಗಿದೆ. ಕೆಲ ದಿನಗಳಿಂದ ಬಿಡುವು ನೀಡಿದ್ದ ರಷ್ಯಾ-ಉಕ್ರೇನ್ ಯುದ್ಧ (Russia Ukraine War)  ಮತ್ತೊಮ್ಮೆ ಭೀಕರ ಸ್ವರೂಪಕ್ಕೆ ತಿರುಗುವುದು ಖಚಿವಾಗಿದೆ. 2023ರ ಹೊಸ ವರ್ಷದ ಆರಂಭದಲ್ಲಿ ರಷ್ಯಾದಿಂದ ಮತ್ತೆ ದಾಳಿ ಎದುರಾಗುವ ಬಗ್ಗೆ ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್ ಮುಖ್ಯಸ್ಥ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ರಷ್ಯಾ, ಉಕ್ರೇನ್ (Russia-Ukraine) ಮೇಲಿನ ತನ್ನ ದಾಳಿಯನ್ನು ಮುಂದುವರಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಸುಮಾರು 2 ಲಕ್ಷ ಸೈನಿಕರನ್ನು ಒಳಗೊಂಡ ಹೊಸ ಸೇನಾಪಡೆಯನ್ನು ಸಿದ್ಧಪಡಿಸುತ್ತಿದೆ. ಕೀವ್‌ನಲ್ಲಿ (Kyiv) ಅಟ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಕದನ ವಿರಾಮ, ರಾಜತಾಂತ್ರಿಕತೆ ಮಾರ್ಗ ಕಂಡುಕೊಳ್ಳಬೇಕಿದೆ – ಜಿ20 ಶೃಂಗಸಭೆಯಲ್ಲಿ ಮೋದಿ ಮಾತು

ಉಕ್ರೇನ್ ಸಹ ದಾಳಿಯ ಬಗ್ಗೆ ಎಲ್ಲಾ ಲೆಕ್ಕಾಚಾರ ಮಾಡಿಕೊಂಡಿದೆ. ನಮಗೆ ಎಷ್ಟು ಯುದ್ಧ ಟ್ಯಾಂಕರ್‌ಗಳು ಬೇಕು? ಫಿರಂಗಿಗಳು ಬೇಕು ಎಲ್ಲ ರೀತಿಯ ಲೆಕ್ಕಾಚಾರ ಮಾಡಿದ್ದೇವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಉಕ್ರೇನ್ ಈಶಾನ್ಯದಲ್ಲಿರುವ ಖಾರ್ಕೀವ್ ಪ್ರದೇಶದಿಂದ ರಷ್ಯನ್ ಪಡೆಗಳನ್ನು ಹಿಂದಕ್ಕೆ ಸರಿಸಿತ್ತು. ಆನಂತರದಲ್ಲಿ ರಷ್ಯಾ, ಉಕ್ರೇನಿನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿತ್ತು. ನಿರಂತರ ಕ್ಷಿಪಣಿ (Missile), ಡ್ರೋನ್ (Drone) ದಾಳಿಯಿಂದ ಇಂಧನ ಸಂಪನ್ಮೂಲ ಹಾಗೂ ಇತರ ಮೂಲಸೌಕರ್ಯಗಳನ್ನು ನಾಶಪಡಿಸಿತು. ಇದರಿಂದ ಈಗಾಗಲೇ ದೇಶಾದ್ಯಂತ ಭಾರೀ ವಿದ್ಯುತ್ ಅಭಾವವನ್ನುಂಟು ಮಾಡಿದೆ ಎಂದು ಸೇನಾ ಮುಖ್ಯಸ್ಥ ತಿಳಿಸಿದ್ದಾರೆ.

ಸದ್ಯ ಉಕ್ರೇನ್‌ಗೆ ರಷ್ಯಾ ಪಡೆಗಳನ್ನು ಎದುರಿಸಲು 300 ಟ್ಯಾಂಕರ್‌ಗಳು, 600 ರಿಂದ 700 ಇನ್ಫಾಂಟರಿ ಫೈಟಿಂಗ್ ವೆಹಿಕಲ್ (ಪದಾತಿದಳದ ಹೋರಾಟದ ವಾಹನಗಳು) ಹಾಗೂ 500 ಹೊವಿಟ್ಜರ್‌ಗಳು ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಕ್ಷಣ ಉಕ್ರೇನ್‌ನಿಂದ ಹೊರಟುಬಿಡಿ – ವಿದ್ಯಾರ್ಥಿಗಳು, ನಾಗರಿಕರಿಗೆ ಭಾರತ ತುರ್ತು ಸಲಹೆ

ಕೆಲ ದಿನಗಳ ಹಿಂದೆಯಷ್ಟೇ ಉಕ್ರೇನ್ ರಷ್ಯಾದ ತೂಗು ಸೇತುವೆಯನ್ನು ಧ್ವಂಸಗೊಳಿಸಿದ ನಂತರ ಉಕ್ರೇನ್ ಭೀಕರ ದಾಳಿಗೆ ತುತ್ತಾಗಿತ್ತು. ರಷ್ಯಾ ಏಕಾಏಕಿ 100 ಕ್ಷಿಪಣಿಗಳು, ಇರಾನಿ ಡ್ರೋನ್‌ಗಳ ಮೂಲಕ ದಾಳಿ ನಡೆಸಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *