ಭಾರತೀಯ ಸೈನಿಕರ ಶೌರ್ಯ, ತ್ಯಾಗ ಹಾಡಿಹೊಗಳಿದ ರಷ್ಯಾ ಮಹಿಳೆ

Public TV
2 Min Read

ನವದೆಹಲಿ: ಭಾರತ-ಪಾಕ್‌ ಉದ್ವಿಗ್ನತೆ ನಡುವೆ ರಷ್ಯಾದ ಮಹಿಳೆಯೊಬ್ಬರು ಭಾರತೀಯ ಸೇನೆಯನ್ನು ಹೊಗಳಿ, ಭಾರತವನ್ನು ತನ್ನ ಮನೆ ಎಂದು ಬಣ್ಣಿಸಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ರಷ್ಯಾ ಮಹಿಳೆ ಮಾತಿಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುಗ್ರಾಮ್‌ನಲ್ಲಿ ವಾಸಿಸುವ ರಷ್ಯಾದ ಪ್ರಜೆ ಪೋಲಿನಾ ಅಗರ್ವಾಲ್, ದೇಶವನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ಭಾರತೀಯ ಸೇನೆಗೆ ಧನ್ಯವಾದ ಎಂದು ಹೃತ್ಪೂರ್ವಕ ಸಂದೇಶವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ದಾಳಿಗೆ ವಿಲವಿಲ – ಪಾಕ್‌ನಲ್ಲಿ ಮದರಸಾಗಳ ಮೇಲೆ ನಾಗರಿಕರಿಂದಲೇ ಕಲ್ಲು ತೂರಾಟ

 

View this post on Instagram

 

A post shared by Polina Agrawal (@pol.explorer)

ಭಾರತೀಯ ಸೈನಿಕರ ಧೈರ್ಯ ಮತ್ತು ರಾಷ್ಟ್ರವನ್ನು ರಕ್ಷಿಸಲು ಅಚಲ ಸಮರ್ಪಣೆಯನ್ನು ಅವರು ಶ್ಲಾಘಿಸಿದ್ದಾರೆ. ‘ನಮ್ಮನ್ನು ರಕ್ಷಿಸುವ ಮತ್ತು ಯಾವುದೇ ಭೀತಿಯಿಲ್ಲದೇ ನೆಮ್ಮದಿಯಿಂದ ನಿದ್ರೆ ಮಾಡಲು ಸಹಾಯ ಮಾಡುವ ಎಲ್ಲಾ ಭಾರತೀಯ ಸೈನಿಕರಿಗೆ ಕೃತಜ್ಞತೆಗಳು ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಆದಾಗ ನನ್ನ ಅಜ್ಜಿ ಆತಂಕಕ್ಕೆ ಒಳಗಾಗಿದ್ದರು. ನನ್ನನ್ನು ಮನೆಗೆ (ರಷ್ಯಾ) ಹಿಂತಿರುಗುವಂತೆ ಒತ್ತಾಯಿಸಿದ್ದರು. ನಾನು ಭಾರತದ ಗುರುಗ್ರಮ್‌ನಲ್ಲಿದ್ದೇನೆ. ಭಯವಿಲ್ಲ ಎಂದು ಅಜ್ಜಿಗೆ ಸ್ಪಷ್ಟಪಡಿಸಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮರಾಠಿಯಲ್ಲಿ ಮಾತಾಡು, ಇಲ್ಲದಿದ್ರೆ ಹಣ ಕೊಡಲ್ಲ; ಪಿಜ್ಜಾ ಡೆಲಿವರಿ ಬಾಯ್‌ಗೆ ದಂಪತಿ ಧಮ್ಕಿ

ಭಾರತೀಯ ಸೇನೆ ಮತ್ತು ಅವರ ಬಲವಾದ ರಕ್ಷಣಾ ವ್ಯವಸ್ಥೆಗಳನ್ನು ಪೋಲಿನಾ ಹಾಡಿಹೊಗಳಿದ್ದಾರೆ. ‘ಭಾರತೀಯ ಸೇನೆಯು ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದೆ. ರಷ್ಯಾ ಸ್ವತಃ ಅವುಗಳನ್ನು ಒದಗಿಸಿದೆ. ಇದು ಎಲ್ಲಾ ಡ್ರೋನ್‌ಗಳು, ಜೆಟ್‌ಗಳು ಎದುರಾಳಿಯ ಯಾವುದೇ ಬೆದರಿಕೆಗಳನ್ನು ವಿರೋಧಿಸಲು ತುಂಬಾ ಬಲಿಷ್ಠವಾಗಿದೆ ಎಂದು ಬಣ್ಣಿಸಿದ್ದಾರೆ.

ಭಾರತೀಯ ಸೈನಿಕರು ಸಮರ್ಪಣೆ ಮನೋಭಾವದವರು, ವಿಶಾಲ ಹೃದಯಿಗಳು. ದೇಶದ ಜನತೆ ನೆಮ್ಮದಿಯಿಂದ ನಿದ್ರೆ ಮಾಡಲು ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ. ನಾನು ಅವರಿಗೆ ಕೃತಜ್ಞಳಾಗಿದ್ದೇನೆ ಎಂದು ಯೋಧರ ತ್ಯಾಗವನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: ಪಾಕ್‌ ನ್ಯೂಕ್‌ ವೆಪನ್‌ ಫೆಸಿಲಿಟಿ ಮೇಲೆ ದಾಳಿಯಾಗಿದೆ, ಭಾರತಕ್ಕೆ ಜಯ ಸಿಕ್ಕಿದೆ: ಟಾಮ್‌ ಕೂಪರ್‌

Share This Article