ಹತ್ಯೆಯ ಭಯ – ಜಿ20 ಶೃಂಗಸಭೆಯಲ್ಲಿ ಭಾಗವಹಿಸಲ್ಲ ಎಂದ ಪುಟಿನ್‌

Public TV
1 Min Read

ಮಾಸ್ಕೋ: ಜಿ20(G20) ಶೃಂಗಸಭೆಯಲ್ಲಿ ಭಾಗವಹಿಸದೇ ಇರಲು ರಷ್ಯಾ ಅಧ್ಯಕ್‌ ವ್ಲಾದಿಮಿರ್‌ ಪುಟಿನ್‌(Vladimir Putin) ನಿರ್ಧರಿಸಿದ್ದಾರೆ.

ಇಂಡೋನೇಷ್ಯದ(Indonesia) ಬಾಲಿಯಲ್ಲಿ ನ.15 ಮತ್ತು 16 ರಂದು ಶೃಂಗಸಭೆ ನಡೆಯಲಿದೆ. ಈ ಶೃಂಗಸಭೆಯಲ್ಲಿ ತನ್ನ ಹತ್ಯೆ ಮಾಡಬಹುದು ಎಂಬ ಕಾರಣಕ್ಕೆ ಭಾಗವಹಿಸದೇ ಇರಲು ನಿರ್ಧಾರ ತೆಗೆದುಕೊಂಡಿದ್ದಾರೆ.

Russia-UkraineWar

ಅಮೆರಿಕ, ಯುಕೆ ಅಥವಾ ಉಕ್ರೇನ್‌ ಪುಟಿನ್‌ ಹತ್ಯೆಗೆ ಸಂಚು ರೂಪಿಸಿದೆ ಎಂದು ರಷ್ಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಯಲ್ಲಿ ಪುಟಿನ್‌ ಶೃಂಗಸಭೆಗೆ ತೆರಳುತ್ತಿಲ್ಲ. ಇದನ್ನೂ ಓದಿ: ರಷ್ಯಾ ಆಕ್ರಮಣದಿಂದ ನಾಶವಾದ ವಿಶ್ವದ ದೈತ್ಯ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ಚಿಂತನೆ

ಈ ಸಭೆಯಲ್ಲಿ ಪುಟಿನ್‌ ಅವರನ್ನು ಅವಮಾನ ಮಾಡುವ ಸಾಧ್ಯತೆಯಿದೆ. ಉದಾಹರಣೆಗೆ ಕೆಲವು ಅಂಗವಿಕಲ ಸಾಮಾಜಿಕ ಕಾರ್ಯಕರ್ತರು ಪುಟಿನ್ ಅವರನ್ನು ಕೆಳಗೆ ಬೀಳಿಸುತ್ತಾರೆ. ಇದಕ್ಕೆ ವಿಶ್ವದ ಮಾಧ್ಯಮಗಳು ಕೆಳಗೆ ಬಿದ್ದ ಪುಟಿನ್‌ ಎಂದು ವರದಿ ಮಾಡುತ್ತವೆ. ಹುಚ್ಚು ಪಾಶ್ಚಾತ್ಯ ಮಾಧ್ಯಮಗಳು ಈ ರೀತಿಯ ಸುದ್ದಿ ಮಾಡಲು ಪ್ಲಾನ್‌ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಪುಟಿನ್‌ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ರಷ್ಯಾ ಹೇಳಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *