ಉಕ್ರೇನ್‍ನ ಬಹುಮಹಡಿ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ – ಭೀಕರ ದೃಶ್ಯ ವೈರಲ್

Public TV
1 Min Read

ಕೀವ್‌: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ತನ್ನ ಹಿಡಿತವನ್ನು ಬಲಗೊಳಿಸುತ್ತಿದೆ. ಇಂದು ಉಕ್ರೇನ್‍ನ ಬಹುಮಹಡಿ ಕಟ್ಟಡ ಒಂದಕ್ಕೆ ಕ್ಷಿಪಣಿ ದಾಳಿ ನಡೆಸಿ ನಾಶ ಪಡಿಸಿದೆ.

ಉಕ್ರೇನ್‍ನ ಕೀವ್‌ ನಗರದಲ್ಲಿರುವ ಜನ ವಸತಿ ಇದ್ದ ಬಹುಮಹಡಿ ಕಟ್ಟಡಕ್ಕೆ ರಷ್ಯಾದ ಮಿಲಿಟರಿ ಪಡೆ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಕಟ್ಟಡಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ. 6A ಲೋಬೊನವ್ಸ್ಕಿ ಅವೆನ್ಯೂ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ ಕಟ್ಟಡದ ಒಂದು ಭಾಗ ದ್ವಂಸವಾಗಿದ್ದು, ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

ದಾಳಿ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಕ್ರೇನ್ ಸಚಿವಾಲಯದ ಅಧಿಕಾರಿ, ಕ್ಷಿಪಣಿ ದಾಳಿಯಿಂದ ಕಟ್ಟಡಕ್ಕೆ ಹಾನಿಯಾಗಿದೆ. ಕಟ್ಟಡದ ನೆಲಮಹಡಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಕಟ್ಟಡದಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಿ ಸ್ಥಳಾಂತರಿಸಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

ಈ ಮೊದಲು ಕೈವಾದ ಜುಲಿಯಾನಿ ವಿಮಾನ ನಿಲ್ದಾಣದ ಪಕ್ಕ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಈಗಾಗಲೇ ಉಕ್ರೇನ್‍ನ ಹಲವು ಪ್ರದೇಶಗಳನ್ನು ರಷ್ಯಾ ಮಿಲಿಟರಿ ಪಡೆ ಸುತ್ತುವರಿದಿದ್ದು, ಅಲ್ಲಲ್ಲಿ ಬಾಂಬ್‍ಗಳ ದಾಳಿ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *