ಉಕ್ರೇನ್‍ನ ನಾಲ್ಕು ಪ್ರದೇಶಗಳು ರಷ್ಯಾ ವಶ – ನ್ಯಾಟೋ ಸದಸ್ಯತ್ವಕ್ಕಾಗಿ ಝೆಲೆನ್ಸ್ಕಿ ಪಟ್ಟು

Public TV
1 Min Read

‌ಮಾಸ್ಕೋ: ಉಕ್ರೇನ್‍ನ (Ukraine) ನಾಲ್ಕು ಪ್ರದೇಶಗಳನ್ನು ರಷ್ಯಾ (Russia) ವಶಪಡಿಸಿಕೊಂಡ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಸದಸ್ಯತ್ವವವನ್ನು ಆದಷ್ಟೂ ಬೇಗ ಕೊಡಿ ಎಂದು ನ್ಯಾಟೋಗೆ (Nato) ಮನವಿ ಸಲ್ಲಿಸಿದ್ದಾರೆ.

ಉಕ್ರೇನ್‍ನ ನಾಲ್ಕು ಪ್ರದೇಶಗಳಾದ ಡಾನೆಸ್ಕ್, ಖೇರ್ಸಾನ್, ಲುಹಾಂಸ್ಕ್ ಮತ್ತು ಝೆಪೋರ್‌ಝಿಯಾ ಪ್ರದೇಶಗಳನ್ನು ರಷ್ಯಾ ವಶಕ್ಕೆ ಪಡೆದಿದೆ. ಈ ನಾಲ್ಕು ಪ್ರದೇಶಗಳನ್ನು ರಷ್ಯಾದೊಂದಿಗೆ ವಿಲೀನ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ – ಪುಟಿನ್‌ ಘೋಷಣೆ

ಕ್ರೆಮ್ಲಿನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿಲೀನ ಪ್ರಕ್ರಿಯೆ ನಡೆಯಿತು. ಬಳಿಕ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಉಕ್ರೇನ್‍ನ ಸುಮಾರು ಶೇ.15 ರಷ್ಟು ಭೂಭಾಗವಿರುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪ್ರದೇಶಗಳು ಶಾಶ್ವತವಾಗಿ ರಷ್ಯಾ ಪಾಲಾಗಲಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

ಇತ್ತ ರಷ್ಯಾ ಈ ನಡೆಯ ಬೆನ್ನಲ್ಲೇ ಝೆಲೆನ್ಸ್ಕಿ, ನ್ಯಾಟೋ ಸದಸ್ಯತ್ವ ತ್ವರಿತವಾಗಿ ಕೊಡಬೇಕೆಂದು ಪಟ್ಟುಹಿಡಿದಿದ್ದಾರೆ. ನಾವು ಮಿತ್ರಪಕ್ಷಗಳೊಂದಿಗೆ ಮೈತ್ರಿಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನೂ ಪಾಲಿಸಿದ್ದೇವೆ. ಹಾಗಾಗಿ ನಮಗೆ ಆದಷ್ಟೂ ಬೇಗ ಸದಸ್ಯತ್ವ ನೀಡುವಂತೆ ಕೋರಿರುವ ಅರ್ಜಿಗೆ ಸಹಿ ಹಾಕಿ ನ್ಯಾಟೋಗೆ ನೀಡಿದ್ದಾರೆ. ಈ ಮೂಲಕ ನಾವು ನಿರ್ಣಾಯಕ ಹೆಜ್ಜೆ ಇಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ರಷ್ಯಾ ವಿರುದ್ಧ ನ್ಯಾಟೋ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ನಡುವೆಯೇ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಝೆಪೋರ್‌ಝಿಯಾ ಪ್ರದೇಶಗಳಲ್ಲಿ ರಷ್ಯಾ ತನ್ನ ಹಿಡಿತವನ್ನು ಸಾಧಿಸಲು ರಾಕೆಟ್ ದಾಳಿ ನಡೆಸಿ ಅನೇಕ ಸಾವು, ನೋವಿಗೆ ಕಾರಣವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *