ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ – ಬಾಂಬ್, ಕ್ಷಿಪಣಿ ದಾಳಿಗೆ ಕೀವ್ ನಗರ ತತ್ತರ

Public TV
2 Min Read

ಕೀವ್: ಉಕ್ರೇನ್ ಮೇಲೆ ರಣರಕ್ಕಸ ಸ್ವರೂಪದಲ್ಲಿ ಸತತ 11ನೇ ದಿನವೂ ರಷ್ಯಾ ಸೇನಾ ಮುಗಿಬಿದ್ದಿದೆ. ಹಗಲು ರಾತ್ರಿ ಎನ್ನದೇ, ಉಸಿರಾಡಲು ಸ್ವಲ್ಪವೂ ಬಿಡದಂತೆ ಬಾಂಬ್‍ಗಳ ಸುರಿಮಳೆಗೈಯ್ಯುತ್ತಿದೆ. ಕೀವ್ ನಗರ ತತ್ತರಿಸಿ ಹೋಗಿದೆ.

ಈಗಾಗಲೇ ಖೇರ್ಸಾನ್ ನಗರ ವಶಪಡಿಸಿಕೊಂಡಿರುವ ರಷ್ಯಾ ಪಡೆಗಳು ಖಾರ್ಕಿವ್ ಮೇಲೆ ಪಟ್ಟು ಸಾಧಿಸಲು ನೈಟ್ ಆಪರೇಷನ್ ಕೈಗೊಂಡಿದೆ. ನೂರಾರು ಕ್ಷಿಪಣಿಗಳನ್ನು ಹಾರಿಸಿ ಭಾರೀ ಸಾವು ನೋವಿಗೆ ಕಾರಣವಾಗಿದೆ. ಸುಮಿ, ಮರಿಯುಪೋಲ್, ವೋಲ್ನೋವ್ಖಾ ನಗರಗಳಿಗೆ ಮುತ್ತಿಗೆ ಹಾಕಿದೆ. ಕೀವ್, ಬುಚಾ ನಗರಗಳಲ್ಲಿ ಜನವಸತಿ, ಸೇನೆಯ ವೈಮಾನಿಕ ನೆಲೆಗಳ ಮೇಲೆ ಶೆಲ್, ಮಿಸೈಲ್ ಟ್ಯಾಕ್ ಮಾಡಿದೆ. ಉಕ್ರೇನ್‍ನ ಛಾಶ್ಚಿಯಾ ನಗರವನ್ನು ಹಿಡಿತಕ್ಕೆ ತೆಗೆದುಕೊಂಡಿರೋದಾಗಿ ರಷ್ಯಾ ಘೋಷಿಸಿದೆ. ಸ್ಮಶಾನದಂತೆ ಆಗಿರುವ ಕೀವ್ ನಗರದ ಡ್ರೋನ್ ವಿಡೀಯೋ ರಿಲೀಸ್ ಮಾಡಿದೆ. ಈಗಾಗಲೇ ಎರಡು ರಿಯಾಕ್ಟರ್ ವಶಕ್ಕೆ ಪಡೆದಿರುವ ರಷ್ಯಾ ಪಡೆಗಳು ಈಗ ಮೂರನೇ ರಿಯಾಕ್ಟರ್ ಯೂಜ್‍ನೌಕ್ರೈನ್ಸ್ಕ್ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ: ಸೋಮವಾರ ಅಂತಿಮ ಹಂತದ ಮತದಾನ – ಮಾರ್ಚ್ 10ಕ್ಕೆ ಫಲಿತಾಂಶ

ಝೈಟೋಮೀರ್‌ನ ಮೆಟ್ರೋ ಬಳಿ ಬಾಂಬ್ ಸ್ಫೋಟಗೊಂಡಿದೆ. ಒಡೆಸಾ ಉಡಾಯಿಸಲು ರಷ್ಯಾ ತಯಾರಿ ನಡೆಸಿದೆ. ಈ ಮಧ್ಯೆ, ಉಕ್ರೇನ್ ಸೇನೆಗಳು ಪ್ರತಿರೋಧ ತೋರುತ್ತಿವೆ. ರಷ್ಯಾದ ಸುಖೋಯ್ ಯುದ್ಧ ವಿಮಾನ, ಹೆಲಿಕಾಪ್ಟರ್, ಯುದ್ಧ ಟ್ಯಾಂಕ್‍ನ್ನು ಉಡೀಸ್ ಮಾಡಿದೆ. ಒಡೆಸಾದಲ್ಲಿ ರಷ್ಯಾ ಪಡೆ ಪ್ರವೇಶಿಸದಂತೆ, ನಗರದ ರಸ್ತೆಗಳಲ್ಲೆಲ್ಲಾ ಕಬ್ಬಿಣದ ಬೇಲಿಯನ್ನು ಉಕ್ರೇನ್ ಹಾಕಿದೆ. ಈ ಮಧ್ಯೆ, ಮರಿಯುಪೋಲ್, ವಾಲ್ನೋವ್ಖಾ ನಗರಗಳಲ್ಲಿ ಇವತ್ತು ಕೂಡ ರಷ್ಯಾ 11 ಗಂಟೆ ಕದನ ವಿರಾಮ ಪ್ರಕಟಿಸಿತ್ತು. ಇದನ್ನೂ ಓದಿ: ಶ್ವಾನಕ್ಕಾಗಿ ಉಕ್ರೇನ್‍ನಲ್ಲಿ ಲಗೇಜ್ ಬಿಟ್ಟು ಬಂದ ವಿದ್ಯಾರ್ಥಿನಿ ಕೀರ್ತನಾ

11ನೇ ದಿನ ರಷ್ಯಾ, ಉಕ್ರೇನ್ ಯಾವ ದೇಶಕ್ಕೆಷ್ಟು ಹಾನಿ:
ಉಕ್ರೇನ್ ಸೇನೆಯ 2119 – ಸೇನಾ ಕಟ್ಟಡಗಳು, 74 – ಕಂಟ್ರೋಲ್ ಪಾಯಿಂಟ್ಸ್, 68 – ರಾಡಾರ್ ಕೇಂದ್ರಗಳು, 80 – ಯುದ್ಧ ವಿಮಾನಗಳು, 108 – ಎಸ್-300 ಕ್ಷಿಪಣಿ, 748 – ಯುದ್ಧ ಟ್ಯಾಂಕ್‍ಗಳು, 76 – ರಾಕೆಟ್ ಲಾಂಚರ್‌ಗಳು, 274 – ಫಿರಂಗಿಗಳು, 532 – ವಿಶೇಷ ಸೇನಾ ವಾಹನಗಳು, 59 – ಡ್ರೋಣ್‍ಗಳು ನಾಶವಾಗಿದೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

ರಷ್ಯಾ ಸೇನೆಯ, 11,000 – ಸೈನಿಕರು, 48 – ಹೆಲಿಕಾಪ್ಟರ್, 44 – ಯುದ್ಧ ವಿಮಾನ, 285 – ಯುದ್ಧ ಟ್ಯಾಂಕ್ , 109 – ಫಿರಂಗಿಗಳು, 985 – ಶಸ್ತ್ರಾಸ್ತ್ರ ವಾಹನ, 50 – ಕ್ಷಿಪಣಿ ವಾಹಕಗಳು, 2 – ಹೈಸ್ಪೀಡ್ ಬೋಟ್, 447 – ಸೇನಾ ಕಾರು, 60 – ಆಯಿಲ್ ಟ್ಯಾಂಕರ್‌ಗಳು, 4 – ಡ್ರೋಣ್‍ಗಳು, 21 – ಆ್ಯಂಟಿ ಏರ್‌ಕ್ರಾಫ್ಟ್ ವಾಹನಗಳು ಉಡೀಸ್ ಆಗಿದೆ ಎಂದು ಮಾಹಿತಿ ಹೊರಬಿದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *