ಹೆಣ ಬಿದ್ದ ಜಾಗದಲ್ಲಿ ಮತ್ತೊಬ್ಬ ಹೋಗಿ ಹೆಣ ಆಗಲು ಯಾರೂ ತಯಾರಿಲ್ಲ: ಶಿವರಾಮ್ ಹೆಬ್ಬಾರ್

By
1 Min Read

ಧಾರವಾಡ: ಉಕ್ರೇನ್ ದೇಶದಲ್ಲಿ ರಷ್ಯಾ ನಡೆಸಿದ ದಾಳಿಯಿಂದಾಗಿ ಮೃತಪಟ್ಟಿರುವ ಹಾವೇರಿ ಜಿಲ್ಲೆಯ ನವೀನ್ ಶೇಖರಪ್ಪನ  ಶವವನ್ನು ತರಲು ಸರ್ಕಾರ ಎಲ್ಲ ರೀತಿಯಿಂದಲೂ ಪ್ರಯತ್ನ ಮಾಡುತ್ತಿದೆ. ಆದರೆ, ಹೆಣ ಬಿದ್ದ ಜಾಗಕ್ಕೆ ಹೋಗಿ ಮತ್ತೊಬ್ಬ ಹೆಣವಾಗಲು ಯಾರೂ ಸಿದ್ಧರಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಹೆಸರಿನಡಿ 42 ವಿಮಾನಗಳನ್ನು ಉಕ್ರೇನ್ ಪಕ್ಕದ ದೇಶಗಳಿಗೆ ಕಳುಹಿಸಿ, ಆ ಮೂಲಕ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದೆ. ಹೀಗಾಗಿ ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಪಕ್ಕದ ದೇಶಗಳಿಗೆ ಬಂದು ಮುಟ್ಟಬೇಕಿದೆ. ಯುದ್ಧದ ತೀವ್ರತೆ ಉಕ್ರೇನ್‍ನಲ್ಲಿ ಹೆಚ್ಚಾಗಿರುವುದರಿಂದ ಅಲ್ಲಿ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಿಲ್ಲ. ಆದರೂ ಭಾರತ ಸರ್ಕಾರದ ನಾಲ್ಕು ಜನ ಮಂತ್ರಿಗಳು ನಾಲ್ಕು ದಿಕ್ಕಿನಲ್ಲಿ ನಿಂತು ರಕ್ಷಣಾ ಕಾರ್ಯ ಪರಿಶೀಲಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

ದುರದೃಷ್ಟವಶಾತ್ ನಮ್ಮ ನಾಡಿನ ನವೀನ್ ಈ ಯುದ್ಧದಲ್ಲಿ ಅಸುನೀಗಿದ್ದಾನೆ. ನಾನು ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನು ಹೊಂದಿದ್ದೇನೆ. ನವೀನ್ ಮನೆಗೆ ಭೇಟಿ ನೀಡಿ ಬಂದಿದ್ದೇನೆ. ಆತನ ಶವ ತರಲು ಸರ್ವ ಪ್ರಯತ್ನ ನಡೆದಿದೆ. ನವೀನ್‍ನ್ನು ಜೀವಂತವಾಗಿ ಮನೆಗೆ ಕರೆ ತರಲು ಆಗಲಿಲ್ಲ. ಕಡೆ ಪಕ್ಷ ಆತನ ಪೋಷಕರಿಗೆ ಕೊನೆಯ ಬಾರಿಗೆ ನವೀನ್‍ನ ಮುಖವನ್ನಾದರೂ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯುದ್ಧ ಮನುಕುಲದ ಶತ್ರು, ಸದ್ಯ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ: ಬಸವಾನಂದ ಶ್ರೀ

Share This Article
Leave a Comment

Leave a Reply

Your email address will not be published. Required fields are marked *