ಉಕ್ರೇನ್‍ನ ಧೀರ ಪ್ರಜೆಗಳೇ ರಷ್ಯಾ ವಿರುದ್ಧ ಹೋರಾಟ ಮಾಡಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸಿ ಕರೆ

Public TV
2 Min Read

ಮಾಸ್ಕೋ: ರಷ್ಯಾ ವಿರುದ್ಧ ನಮ್ಮದು ಏಕಾಂಗಿ ಹೋರಾಟ. ಅಮೆರಿಕಾ, ನ್ಯಾಟೋ ದೇಶಗಳು ಕೈಕೊಟ್ಟಿವೆ ಹಾಗಂತಾ ನಾವು ಎದೆಗುಂದುವುದು ಬೇಡ. ನಮ್ಮ ದೇಶ ಉಳಿಸಿಕೊಳ್ಳಿಕೊಳ್ಳಲು ವಿರೋಚಿತ ಹೋರಾಟ ನಡೆಸೋಣ ಉಕ್ರೇನ್‍ನ ಧೀರ ಪ್ರಜೆಗಳೇ ರಷ್ಯಾ ವಿರುದ್ಧ ಹೋರಾಟ ಮಾಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದಾರೆ.

ರಷ್ಯಾ ಯುದ್ಧ ತೀವ್ರಗೊಳಿಸುತ್ತಿದ್ದಂತೆ ಉಕ್ರೇನ್ ಪ್ರಜೆಗಳಿಗೆ ಮನವಿ ಮಾಡಿದ ಝೆಲೆನ್ಸ್ಕಿ, ಧೀರ ಪ್ರಜೆಗಳೇ ಉಕ್ರೇನ್ ಧ್ವಜ ಹಿಡಿದು, ಶಸ್ತ್ರಾಸ್ತ್ರ ಹಿಡಿದು ರಷ್ಯಾ ವಿರುದ್ಧ ಸೆಣೆಸಾಡಿ. ನಾನು ನಿಮ್ಮೊಂದಿಗೆ ಇರುತ್ತೇನೆ. ನಿಮಗಿಂತ ಮುಂದೆ ಇರುತ್ತೇನೆ ಎಂದು ಉಕ್ರೇನ್‍ನ 10 ಸಾವಿರಕ್ಕೂ ಹೆಚ್ಚು ನಾಗರಿಕರ ಕೈಗೆ ಸೇನೆ ಶಸ್ತ್ರಾಸ್ತ್ರ ನೀಡಿದೆ. ಇದನ್ನೂ ಓದಿ: ನವಜಾತ ಶಿಶುಗಳಿಗೂ ಯುದ್ಧದ ಬಿಸಿ – ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದ ಹಾಲುಗಲ್ಲದ ಕಂದಮ್ಮಗಳು

ಉಕ್ರೇನ್ ಹಿಂದೆ ನಾವಿದ್ದೇವೆ ಎಂದು ಪೋಸ್ ಕೊಟ್ಟಿದ್ದ ಅಮೆರಿಕಾ ಮತ್ತು ನ್ಯಾಟೋ ಪಡೆಗಳು ಈಗ ಕೈ ಎತ್ತಿಬಿಟ್ಟಿವೆ. ನ್ಯಾಟೋ ಸದಸ್ಯ ರಾಷ್ಟ್ರಗಳ ತಂಟೆಗೆ ಬಂದ್ರೆ ಸುಮ್ಮನಿರಲಿಕ್ಕಿಲ್ಲ ಎಂದು ಗುಡುಗಿವೆ. ಆದ್ರೆ, ಉಕ್ರೇನ್ ನ್ಯಾಟೋ ಸದಸ್ಯ ರಾಷ್ಟ್ರವಲ್ಲ ಎಂಬುದು ಕಟು ವಾಸ್ತವ. ಅಮೆರಿಕಾ, ನ್ಯಾಟೋ ಮಾತು ನಂಬಿ ಕೆಟ್ವಿದೆ ಎಂಬ ಸತ್ಯ ಈಗ ಉಕ್ರೇನ್ ಅರಿವಿಗೆ ಬಂದಂತೆ ಇದೆ. ನಮ್ಮನ್ನು ಎಲ್ಲಾ ದೇಶಗಳು ಒಂಟಿ ಮಾಡಿಬಿಟ್ವು. ನಾವು ತುಂಬಾ ದೇಶಗಳ ಜೊತೆ ಮಾತಾಡಿದ್ವಿ. ಆದ್ರೇ ಯಾರು ನಮ್ಮ ನೆರವಿಗೆ ಬರುತ್ತಿಲ್ಲ. ಅತ್ಯಂತ ಬಲಿಷ್ಠ ದೇಶವೊಂದು ಎಲ್ಲವನ್ನು ದೂರದಿಂದ ನೋಡುತ್ತಿದೆ. ನ್ಯಾಟೋ ನಂಬಿದಕ್ಕೂ ಪ್ರಯೋಜನವಾಗಿಲ್ಲ. ಇದಕ್ಕಾಗಿ ನಾನು ದೇಶದ ಜನತೆಯೊಂದಿಗೆ ಕ್ಷಮೆ ಕೋರುತ್ತಿದ್ದೇನೆ ಎಂದು ಝೆಲೆನ್ಸ್ಕಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: Russia-Ukraine War: ಉಕ್ರೇನ್ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರ ಎಂಟ್ರಿ – ಸಿಕ್ಕ ಸಿಕ್ಕಲ್ಲಿ ರಕ್ತಪಾತ

ಇತ್ತ ಉಕ್ರೇನ್ ಸರ್ಕಾರ ಪತನಗೊಳಿಸಿ. ಉಕ್ರೇನ್ ಅನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಿ ಎಂದು ರಷ್ಯಾ ಸೈನಿಕರಿಗೆ ವಾಡ್ಲಿಮಿರ್ ಪುಟಿನ್ ಕಟ್ಟಾಜ್ಞೆ ಹೊರಡಿಸಿದ್ದಾರೆ. ಕೆಲವೇ ಕ್ಷಣಗಳ ಹಿಂದೆ ಕೀವ್ ನಗರಕ್ಕೆ ರಷ್ಯಾ ಸೇನೆ ಎಂಟ್ರಿಕೊಟ್ಟಿದ್ದು, ಯಾವುದೇ ಕ್ಷಣದಲ್ಲಿ ಉಕ್ರೇನ್ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಶರಣಾಗುವಂತೆ ಉಕ್ರೇನ್ ಅಧ್ಯಕ್ಷರಿಗೆ ರಷ್ಯಾ ವಾರ್ನಿಂಗ್ ನೀಡಿದೆ. ಜೀವ ರಕ್ಷಣೆಗೆ ಉಕ್ರೇನ್ ಅಧ್ಯಕ್ಷ ಬಂಕರ್ ಸೇರಿದ್ದು, ಇದೀಗ ಉಕ್ರೇನ್ ಅಧ್ಯಕ್ಷರು ಶರಣಾಗ್ತಾರಾ? ಪ್ರತಿರೋಧಿಸ್ತಾರಾ? ಎಂಬ ಕುತೂಹಲವಿದೆ.

Share This Article
Leave a Comment

Leave a Reply

Your email address will not be published. Required fields are marked *