ಪುಟಿನ್ ವಿರುದ್ಧ ಅರೆಬೆತ್ತಲಾದ ಮಹಿಳೆಯರು- ಯುದ್ಧ ನಿಲ್ಲಿಸುವಂತೆ ಆಗ್ರಹ

Public TV
1 Min Read

ಮಾಸ್ಕೋ: ಉಕ್ರೇನ್ (Ukraine) ಮೇಲೆ ರಷ್ಯಾ (Russia) ದಾಳಿಯನ್ನು ಮುಂದುವರಿಸಿದೆ. ಈ ಯುದ್ಧದಿಂದ ಅನೇಕ ಮಂದಿ ತಮ್ಮ ಪ್ರಾಣ, ಮನೆ, ಬಂಧು ಬಾಂಧವರನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಮಧ್ಯೆ ಪ್ಯಾರಿಸ್‍ನಲ್ಲಿ ಮಹಿಳೆಯರು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ವ್ಲಾಡಿಮಿರ್ ಪುಟಿನ್ (Vladimir Putin) ವಿರುದ್ಧ ಟಾಪ್‍ಲೆಸ್ (Topless  protest) ಆಗಿ ಪ್ರತಿಭಟನೆ ನಡೆಸುವ ಮೂಲಕವಾಗಿ ಗಮನ ಸೆಳೆದಿದ್ದಾರೆ.

ವೀಡಿಯೋದಲ್ಲಿ ಏನಿದೆ?: ಪ್ಯಾರಿಸ್‍ನ (Paris) ಐಫೆಲ್ ಟವರ್‌ನ ಮುಂದೆ ಅನೇಕ ಮಹಿಳೆಯರು ಟಾಪ್‍ಲೆಸ್ ಆಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಬಹುದು. ಅವರು ತಮ್ಮ ದೇಹದ ಮೇಲ್ಭಾಗದಲ್ಲಿ ಉಕ್ರೇನಿಯನ್ ಧ್ವಜವನ್ನು ಚಿತ್ರಿಸಿದ್ದಾರೆ ಮತ್ತು ಯುದ್ಧವನ್ನು ವಿರೋಧಿಸಿ ಘೋಷಣೆಗಳನ್ನು ಚಿತ್ರಿಸಿದ್ದಾರೆ. ಸ್ಟಾಪ್ ವಾರ್ ಪುಟಿನ್ ಯುದ್ಧದ ವಿರುದ್ಧ ಸ್ತ್ರೀವಾದಿಗಳು, ಸ್ಲಾವಾ ಉಕ್ರೇನಿ ಎಂಬಿತ್ಯಾದಿ ಘೋಷಣೆಗಳನ್ನು ತಮ್ಮ ದೇಹದ ಮೇಲೆ ಬರೆದುಕೊಂಡಿದ್ದಾರೆ. ಸುದ್ದಿ ಸಂಸ್ಥೆಯೊಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್‌ ಸ್ವಾವಲಂಬನೆಯತ್ತ ಹೆಜ್ಜೆ

ಯುದ್ಧ ಆರಂಭವಾದಂದಿನಿಂದಲೂ ದಿನವೂ ಒಂದಲ್ಲ ಒಂದು ಪಶ್ಚಿಮದ ದೇಶಗಳು, ವಿವಿಧ ಸರ್ಕಾರಗಳು ಮತ್ತು ಸಂಸ್ಥೆಗಳು ಒಂದರ ನಂತರ ಒಂದರಂತೆ ರಷ್ಯಾಗೆ ವಿವಿಧ ರೀತಿಯಲ್ಲಿ ನಿರ್ಬಂಧ  ಹೇರುವ ಮೂಲಕ ಬಹಿಷ್ಕರಿಸಲು ಆರಂಭಿಸಿವೆ. ಯಾವ ಬಹಿಷ್ಕಾರವೂ ರಷ್ಯಾವನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ರಷ್ಯಾ ವಿರುದ್ಧ ಪ್ಯಾರಿಸ್‍ನಲ್ಲಿನ ಮಹಿಳೆಯರ ಈ ಟಾಪ್‍ಲೆಸ್ ಪ್ರತಿಭಟನೆಗಳು ಟ್ವಿಟರ್‌ನಲ್ಲಿ ಕಾಣಿಸಿಕೊಂಡಿವೆ. ಈ ಮಹಿಳೆಯರು ಯುದ್ಧಕ್ಕೆ ಮತ್ತು ನಿರ್ದಿಷ್ಟವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *