ರಷ್ಯಾ ಸಂಧಾನ ಆಹ್ವಾನ ತಿರಸ್ಕರಿಸಿದ ಉಕ್ರೇನ್ – ಕೀವ್, ಖಾರ್ಕಿವ್ ಪ್ರದೇಶದಲ್ಲಿ ಗುಂಡಿನ ಸುರಿಮಳೆ

Public TV
1 Min Read

ಕೀವ್: ಉಕ್ರೇನ್ ವಿರುದ್ಧ ಯುದ್ಧ ಘೋಷಣೆಗ ವಿಶ್ವದ ಇತರ ರಾಷ್ಟ್ರಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ರಷ್ಯಾ, ಉಕ್ರೇನ್ ಜೊತೆ ಸಂಧಾನಕ್ಕೆ ಆಹ್ವಾನ ನೀಡಿದೆ. ಆದರೆ ಉಕ್ರೇನ್ ಮಾತ್ರ ಈ ಸಂಧಾನ ಆಹ್ವಾನ ನಿರಾಕರಿಸಿದೆ ಎಂದು ವರದಿಯಾಗಿದೆ.

ರಷ್ಯಾ ಸೇನೆ ಉಕ್ರೇನ್‍ನಲ್ಲಿ ರಕ್ತಪಾತ ಮುಂದುವರಿಸಿದೆ. ಈ ನಡೆಯನ್ನು ವಿಶ್ವದ ಇತರ ರಾಷ್ಟ್ರಗಳು ವಿರೋಧಿಸುತ್ತಿದೆ. ಹಾಗಾಗಿ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್, ಉಕ್ರೇನ್ ಜೊತೆಗೆ ಸಂಧಾನಕ್ಕೆ ನಿಯೋಗ ಕಳುಹಿಸಲು ಒಪ್ಪಿದ್ದರು. ಬೆಲಾರಸ್‍ನಲ್ಲಿ ಸಂಧಾನಕ್ಕೆ ರಷ್ಯಾ, ಉಕ್ರೇನ್‍ಗೆ ಆಹ್ವಾನ ನೀಡಿತ್ತು. ಆದರೆ ಈ ಆಹ್ವಾನವನ್ನು ಉಕ್ರೇನ್ ತಿರಸ್ಕರಿಸಿದೆ. ನಾವು ಬೆಲಾರಸ್‍ನಲ್ಲಿ ಸಂಧಾನ ನಡೆಯಲು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

ಯಾಕೆ ನಿರಾಕರಣೆ:
ಉಕ್ರೇನ್, ರಷ್ಯಾ ನೀಡಿದ ಸಂಧಾನ ಆಹ್ವಾನವನ್ನು ನಿರಾಕರಿಸಲು ಒಂದು ಕಾರಣವಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬೆಲಾರಸ್ ರಷ್ಯಾ ಜೊತೆಗಿದೆ. ಹೀಗಾಗಿ ಬೆಲಾರಸ್‍ನಲ್ಲಿ ಮಾತುಕತೆ ಸಿದ್ಧವಿಲ್ಲ ಎಂದ ಉಕ್ರೇನ್ ಸಂಧಾನ ಮಾತುಕತೆಯನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಷ್ಯಾ ಸೈನಿಕರನ್ನು ಸೆರೆ ಹಿಡಿದು ಅರೆಬೆತ್ತಲೆಗೊಳಿಸಿ ಸಿಗರೇಟ್ ಸೇದಿಸಿದ ಉಕ್ರೇನ್ ಸೇನೆ

ಇನ್ನೊಂದೆಡೆ ಉಕ್ರೇನ್‍ನ ಕೀವ್, ಖಾರ್ಕಿವ್ ಪ್ರದೇಶದಲ್ಲಿ ರಷ್ಯಾ ಗುಂಡಿನ ಸುರಿಮಳೆ ಸುರಿಸಿದೆ. ಖಾರ್ಕಿವ್ ಪ್ರದೇಶದಲ್ಲಿ ರಷ್ಯಾ ಮಿಲಿಟರಿ ವಾಹನಗಳನ್ನು ಸದೆಬಡಿದು ಉಕ್ರೆನ್ ಮಿಲಿಟರಿ ಪಡೆ ಸವಾಲೊಡ್ಡುತ್ತಿದೆ. ಈಗಾಗಲೇ ಖಾರ್ಕಿವ್ ಪ್ರದೇಶಕ್ಕೆ ರಷ್ಯಾ ಮಿಲಿಟರಿ ಪಡೆ ಎಂಟ್ರಿಯಾಗಿದೆ. ರಷ್ಯಾ ಪಡೆಯನ್ನು ಹತ್ತಿಕ್ಕಲು ಕೀವ್, ಖಾರ್ಕಿವ್ ನಗರದಲ್ಲಿ ಉಕ್ರೇನ್ ಸೈನಿಕರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಕಳೆದೆರೆಡು ದಿನಗಳಿಂದ ಕೀವ್, ಖಾರ್ಕಿವ್ ಭಾಗದಲ್ಲಿ ರಷ್ಯಾ ಬಾಂಬ್ ಸ್ಫೋಟಕಗಳನ್ನು ನಡೆಸುತ್ತಿದೆ. ಇದನ್ನೂ ಓದಿ: ಭಾರತದ ಧ್ವಜವಿದ್ದ ಕಾರಣ ಸುಲಭವಾಗಿ ಗಡಿ ದಾಟಿದ್ದೇವೆ: ವಿದ್ಯಾರ್ಥಿಗಳು

Share This Article
Leave a Comment

Leave a Reply

Your email address will not be published. Required fields are marked *