Russia-Ukraine Crisis: 4 ಬಸ್‍ಗಳಲ್ಲಿ 240 ವಿದ್ಯಾರ್ಥಿಗಳು ರೊಮೇನಿಯಾಗೆ ಶಿಫ್ಟ್

Public TV
1 Min Read

ಕೀವ್: ಉಕ್ರೇನ್‍ನಲ್ಲಿ ಭಾರತೀಯರನ್ನು ಪಾರುಮಾಡುವ ಸಾಹಸಗಳು ನಡೆಯುತ್ತಿವೆ. ರಷ್ಯಾ- ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರನ್ನು ರೊಮೇನಿಯಾಗೆ ಸ್ಥಳಾಂತರಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ.

ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರು ಇಲ್ಲಿಯವರೆಗೆ ತಮ್ಮ ಜೀವ ಉಳಿಸಿಕೊಳ್ಳಲು ಮೆಟ್ರೋ ಸುರಂಗಗಳಲ್ಲಿ ಅಡಗಿ ಕುಳಿತಿದ್ದರು. ಇದೀಗ ಅಡಗಿ ಕುಳಿತಿದ್ದ 240 ವಿದ್ಯಾರ್ಥಿಗಳನ್ನು 4 ಬಸ್‍ಗಳಲ್ಲಿ ಉಕ್ರೇನ್-ರೊಮೇನಿಯಾ ಗಡಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ರೊಮೇನಿಯಾಗೆ ವಿಮಾನ – ಏರ್ ಇಂಡಿಯಾ ಯೋಜನೆ

ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಭಾಗವಾಗಿ 1 ಸಾವಿರಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ಏರ್‌ಲಿಫ್ಟ್ ಮಾಡಲು ಸಿದ್ಧತೆ ನಡೆಯುತ್ತಿದೆ. ಉಕ್ರೇನ್‍ನಲ್ಲಿ ಎಲ್ಲಾ ನಾಗರಿಕ ವಿಮಾನಯಾನವನ್ನು ಸ್ಥಗಿತಗೊಳಿಸಿರುವುದರಿಂದ ನೇರವಾಗಿ ಉಕ್ರೇನ್‍ನಿಂದ ಭಾರತಕ್ಕೆ ಮರಳಿ ಬರುವುದು ಅಸಾಧ್ಯವಾಗಿದೆ. ಹೀಗಾಗಿ ಭಾರತೀಯರನ್ನು ಕರೆತರಲು ಮೊದಲು ಅವರನ್ನು ರೊಮೇನಿಯಾಗೆ ಸ್ಥಳಾಂತರಿಸುವ ಅಗತ್ಯವಿದೆ. ಅಲ್ಲಿಂದ 13 ಕಿ.ಮೀ ನಡಿಗೆಯ ಮೂಲಕ ಏರ್‌ಲಿಫ್ಟ್ ಮಾಡಲಾಗುವ ಜಾಗದವರೆಗೆ ಹೋಗಬೇಕಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಕಲಬುರಗಿಯ ಐವರು ವಿದ್ಯಾರ್ಥಿಗಳು

ರೊಮೇನಿಯಾ ಸರ್ಕಾರದೊಂದಿಗೆ ಭಾರತೀಯ ವಿದೇಶಾಂಗ ಇಲಾಖೆ ಸತತ ಸಂಪರ್ಕದಲ್ಲಿದೆ. ಏರ್ ಇಂಡಿಯಾ ವತಿಯಿಂದ 2 ವಿಮಾನಗಳನ್ನು ಈಗಾಗಲೇ ಕಳುಹಿಸಲಾಗಿದೆ. ಸದ್ಯ ಭಾರತೀಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವ ಬಸ್ಸುಗಳು ರೊಮೇನಿಯಾ ತಲುಪಲು 800 ಕಿ.ಮೀ ಪ್ರಯಾಣಿಸಬೇಕಿದೆ. ಮೊದಲ ಹಂತದ ಸ್ಥಳಾಂತರ ಮುಕ್ತಾಯವಾಗಲು ಶನಿವಾರ ಮಧ್ಯಾಹ್ನದವರೆಗೂ ಸಮಯ ತಗುಲಬಹುದು ಎಂದು ವರದಿಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *