ಉಕ್ರೇನ್ ವಿರುದ್ಧ ರಷ್ಯಾ ಯುದ್ಧ – ದಕ್ಷಿಣ ಏಷ್ಯಾ ರಾಷ್ಟ್ರಗಳು ಯಾರ ಪರ?

By
1 Min Read

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ(ಯುಎನ್‌ಜಿಎ)ದಲ್ಲಿ ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಖಂಡಿಸುವ ನಿರ್ಣಯದಿಂದ ಮತ್ತೆ ಭಾರತ ದೂರ ಉಳಿದಿದ್ದರೆ ಅಫ್ಘಾನಿಸ್ತಾನ, ನೇಪಾಳ ನಿರ್ಣಯದ ಪರವಾಗಿ ಮತವನ್ನು ಚಲಾಯಿಸಿವೆ.

ರಷ್ಯಾ ವಿರುದ್ಧದ ನಿರ್ಣಯಕ್ಕೆ ಸಂಬಂಧಿಸಿದಂತೆ ಭಾರತ ಸೇರಿದಂತೆ 35 ರಾಷ್ಟ್ರಗಳು ತಟಸ್ಥ ಧೋರಣೆಯನ್ನು ಅನುಸರಿಸಿವೆ. ನಿರ್ಣಯದ ಪರವಾಗಿ 141 ದೇಶಗಳು ಇದ್ದರೆ, ವಿರುದ್ಧವಾಗಿ 5 ರಾಷ್ಟ್ರಗಳು ಮತ ಚಲಾಯಿಸಿವೆ. ನಿರ್ಣಯ ಮಂಡನೆಯಲ್ಲಿ 193 ಸದಸ್ಯ ರಾಷ್ಟ್ರಗಳು ಪಾಲ್ಗೊಂಡಿದ್ದವು. ತನ್ನ ಪರಮಾಣು ಪಡೆಗಳ ಸನ್ನದ್ಧತೆಯನ್ನು ಹೆಚ್ಚಿಸುವ ರಷ್ಯಾದ ನಿರ್ಧಾರವನ್ನು ಸಭೆಯಲ್ಲಿ ಖಂಡಿಸಲಾಯಿತು. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

ರಾಜಕೀಯ ಮಾತುಕತೆ, ಮಧ್ಯಸ್ಥಿಕೆ ಮತ್ತು ಇತರ ಶಾಂತಿಯುತ ವಿಧಾನಗಳ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ತಕ್ಷಣದ ಶಾಂತಿಯುತ ಅಗತ್ಯ ಎಂದು ನಿರ್ಣಯದ ಪರವಾಗಿದ್ದ ರಾಷ್ಟ್ರಗಳು ಒತ್ತಿ ಹೇಳಿವೆ.

ಕೆನಡಾ, ಫ್ರಾನ್ಸ್, ಜರ್ಮನಿ, ಜರ್ಮನಿ, ಐರ್ಲ್ಯಾಂಡ್, ಕುವೈತ್, ಸಿಂಗಾಪೂರ್, ಟರ್ಕಿ, ಉಕ್ರೇನ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 141 ದೇಶಗಳು ರಷ್ಯಾ ವಿರುದ್ಧದ ಖಂಡನ ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ಈ ರಾಷ್ಟ್ರಗಳ ಜೊತೆ ಭೂತನ್, ಅಫ್ಘಾನಿಸ್ತಾನ, ನೇಪಾಳ ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಚೀನಾ ಸೇರಿದಂತೆ 35 ರಾಷ್ಟ್ರಗಳು ಮತವನ್ನು ಚಲಾಯಿಸದೇ ನಿರ್ಣಯದಿಂದ ದೂರ ಉಳಿದಿವೆ. ಇದನ್ನೂ ಓದಿ: ಯುದ್ಧ ವಿರೋಧಿ ರಷ್ಯನ್ನರ ಬಂಧನ- ಪುಟಿನ್‌ ರಷ್ಯಾದವನಲ್ಲ ಎಂದ ನಾವೆಲ್ನಿ

ಕಳೆದ ಶುಕ್ರವಾರ ಇದೇ ರೀತಿ ನಿರ್ಣಯ ಮಂಡಿಸ ಭಾರತ ತಟಸ್ಥ ಧೋರಣೆ ಅನುಸರಿಸಿತ್ತು. ಈ ವೇಳೆ ನಿರ್ಣಯದ ಪರವಾಗಿ 11 ರಾಷ್ಟ್ರಗಳು ಮತ ಚಲಾಯಿಸಿದ್ದವು. ಆದರೆ ಭಾರತ, ಚೀನಾ ಸೇರಿದಂತೆ 3 ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದಿದ್ದವು.

Share This Article
Leave a Comment

Leave a Reply

Your email address will not be published. Required fields are marked *