ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್‌ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral

Public TV
2 Min Read

ಮಾಸ್ಕೋ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಹಾಗೂ ಸಾಮಾನ್ಯ ಸಭೆಯಲ್ಲಿ ತನ್ನ ವಿರುದ್ಧ ನಿರ್ಣಯ ಮಂಡಿಸಿರುವ ಅಮೆರಿಕ ಹಾಗೂ ಜಪಾನ್‌ ಸೇರಿದಂತೆ ಅನೇಕ ರಾಷ್ಟ್ರಗಳ ರಾಷ್ಟ್ರೀಯ ಧ್ವಜವನ್ನು ತೆರವುಗೊಳಿಸಿರುವ ರಷ್ಯಾ ಸರ್ಕಾರದ ಬಾಹ್ಯಾಕಾಶ ಸಂಸ್ಥೆಯು ಭಾರತದ ಧ್ವಜವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ.

ಬೈಕೊನೂರ್ ಬಾಹ್ಯಾಕಾಶ ನಿಲ್ದಾಣದಲ್ಲಿ ಬೃಹತ್ ರಾಕೆಟ್ ಮೇಲೆ ಹಲವು ರಾಷ್ಟ್ರಗಳ ರಾಷ್ಟ್ರೀಯ ಧ್ವಜವನ್ನು ಚಿತ್ರಿಸಲಾಗಿತ್ತು. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ರಷ್ಯಾ ಮತ್ತು ಇತರ ರಾಷ್ಟ್ರಗಳ ನಡುವಿನ ಸಂಬಂಧದ ಸಂಕೇತವಾಗಿತ್ತು. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

ಬೈಕೊನೂರ್‌ನಲ್ಲಿರುವ ಉಡಾವಣಾ ಕೇಂದ್ರವು ಕೆಲವು ದೇಶಗಳ ಧ್ವಜಗಳಿಲ್ಲದೆಯೇ ನಮ್ಮ ರಾಕೆಟ್‌ ಹೆಚ್ಚು ಸುಂದರವಾಗಿ ಕಾಣುತ್ತದೆ ಎಂದು ನಿರ್ಧರಿಸಿದರು ಎಂದು ರೋಸ್ಕೊಸ್ಮಾಸ್‌ ಮಹಾನಿರ್ದೇಶಕ ಡಿಮಿಟ್ರಿ ಒಲೆಗೊವಿಚ್ ರೊಗೊಜಿನ್ ಟ್ವೀಟ್ ಮಾಡಿದ್ದಾರೆ.

ಅನೇಕ ರಾಷ್ಟ್ರಗಳ ಧ್ವಜಗಳನ್ನು ಅಳಿಸಿ ಹಾಕುತ್ತಿರುವ ಸಂಬಂಧದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ವೀಡಿಯೋದಲ್ಲಿ ಅಮೆರಿಕ, ಜಪಾನ್‌ ರಾಷ್ಟ್ರ ಧ್ವಜಗಳನ್ನು ಅಳಿಸಿ, ಭಾರತದ ಧ್ವಜದ ಚಿತ್ರವನ್ನು ಮಾತ್ರ ಹಾಗೆಯೇ ಬಿಡಲಾಗಿದೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

ರಷ್ಯಾದ ಫೆಡರಲ್ ಸ್ಪೇಸ್ ಏಜೆನ್ಸಿ ಎಂದು ಕರೆಯಲ್ಪಡುವ ರೋಸ್ಕೊಸ್ಮಾಸ್ ಅನ್ನು ಯುನೈಟೆಡ್ ರಾಕೆಟ್ ಮತ್ತು ಸ್ಪೇಸ್ ಕಾರ್ಪೊರೇಷನ್‌ನೊಂದಿಗೆ ವಿಲೀನಗೊಳಿಸಿದ ನಂತರ 1992ರಲ್ಲಿ ರಚಿಸಲಾಯಿತು. ಇದು ಬಾಹ್ಯಾಕಾಶ ವಲಯವನ್ನು ಉತ್ತೇಜಿಸುವ ಉದ್ದೇಶದ ಜಂಟಿ-ಸ್ಟಾಕ್ ಘಟಕವಾಗಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್‌ ಸೇರುವುದನ್ನು ರಷ್ಯಾ ಹಿಂದಿನಿಂದಲೂ ವಿರೋಧಿಸಿತ್ತು. ಆದರೆ ಉಕ್ರೇನ್‌ ತನ್ನ ನಿಲುವಿನಿಂದ ಹಿಂದೆ ಸರಿಯದ ಕಾರಣ, ರಷ್ಯಾ ಯುದ್ಧ ನಡೆಸುತ್ತಿದೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ ಸೇನಾ ಪಡೆ ದಾಳಿಯನ್ನು ನಡೆಸುತ್ತಿದೆ. ರಷ್ಯಾ ಯುದ್ಧವನ್ನು ವಿರೋಧಿಸಿ ನ್ಯಾಟೋ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್‌, ಜರ್ಮನಿ, ಯುಕೆ, ಯುಎಸ್‌, ಜಪಾನ್‌ ಸೇರಿದಂತೆ ಅನೇಕ ರಾಷ್ಟ್ರಗಳು ರಷ್ಯಾಗೆ ಅನೇಕ ನಿರ್ಬಂಧಗಳನ್ನು ವಿಧಿಸಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಮತ್ತು ಸಾಮಾನ್ಯ ಸಭೆಯಲ್ಲಿ ಉಕ್ರೇನ್‌ ಮೇಲಿನ ರಷ್ಯಾ ದಾಳಿ ಖಂಡಿಸುವ ನಿರ್ಣಯದಿಂದ ಭಾರತ ದೂರ ಉಳಿದಿದೆ. ರಷ್ಯಾ, ಉಕ್ರೇನ್‌ ಯಾವುದೇ ರಾಷ್ಟ್ರದ ಪರವಹಿಸದೇ ತಟಸ್ಥ ಧೋರಣೆ ಅನುಸರಿಸಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

Share This Article
Leave a Comment

Leave a Reply

Your email address will not be published. Required fields are marked *