ಭಾರತಕ್ಕೆ 5% ರಿಯಾಯಿತಿಯಲ್ಲಿ ತೈಲ ಪೂರೈಕೆ: ರಷ್ಯಾ

Public TV
1 Min Read

ಮಾಸ್ಕೋ: ಟ್ರಂಪ್ ಸುಂಕದ ಉದ್ವಿಗ್ನತೆ ನಡುವೆ ಭಾರತಕ್ಕೆ (India) ತೈಲದ ಮೇಲೆ 5% ರಿಯಾಯಿತಿ ನೀಡಲಾಗುವುದು ಎಂದು ರಷ್ಯಾ (Russia) ಘೋಷಿಸಿದೆ.

ಭಾರತಕ್ಕೆ ರಷ್ಯಾದ ಉಪ ವ್ಯಾಪಾರ ಪ್ರತಿನಿಧಿ ಎವ್ಗೆನಿ ಗ್ರಿವಾ, ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಖರೀದಿಯ ಮೇಲೆ ಮಾತುಕತೆಗೆ ಒಳಪಟ್ಟು ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಮೇಲೆ ಒತ್ತಡ ಹೇರಲು ಭಾರತದ ಮೇಲೆ ಸುಂಕ – ವೈಟ್‌ ಹೌಸ್‌

ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಭಾರತವು ಸರಿಸುಮಾರು ಅದೇ ಮಟ್ಟದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಗ್ರಿವಾ ತಿಳಿಸಿದ್ದಾರೆ. ರಿಯಾಯಿತಿಗಳಿಗೆ ಸಂಬಂಧಿಸಿದಂತೆ, ಇದು ವಾಣಿಜ್ಯ ರಹಸ್ಯವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಉದ್ಯಮಿಗಳ ನಡುವಿನ ಸಂಭಾಷಣೆ ಎಂದು ಹೇಳಿದ್ದಾರೆ.

ರಷ್ಯಾದ ಉಪ ಮುಖ್ಯಸ್ಥ ಮಿಷನ್ ರೋಮನ್ ಬಾಬುಷ್ಕಿನ್ ಮಾತನಾಡಿ, ಭಾರತಕ್ಕೆ ಇದು ಸವಾಲಿನ ಪರಿಸ್ಥಿತಿ. ಆದರೂ, ನಮಗೆ ನಮ್ಮ ಸಂಬಂಧಗಳಲ್ಲಿ ನಂಬಿಕೆ ಇದೆ. ಬಾಹ್ಯ ಒತ್ತಡದ ಹೊರತಾಗಿಯೂ ಭಾರತ-ರಷ್ಯಾ ಇಂಧನ ಸಹಕಾರ ಮುಂದುವರಿಯುತ್ತದೆ ಎಂದು ನಮಗೆ ವಿಶ್ವಾಸವಿದೆಯೆಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

ರಷ್ಯಾ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್‌ನಲ್ಲಿ ಯುದ್ಧಕ್ಕೆ ಭಾರತ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಶೇ.50 ರಷ್ಟು ಸುಂಕವನ್ನು ವಿಧಿಸಿದೆ. ಭಾರತವು ರಷ್ಯಾದ ತೈಲಕ್ಕೆ ಜಾಗತಿಕ ಕ್ಲಿಯರಿಂಗ್ ಹೌಸ್ ಆಗಿ ಕಾರ್ಯನಿರ್ವಹಿಸುತ್ತದೆ. ನಿರ್ಬಂಧಿತ ಕಚ್ಚಾ ತೈಲವನ್ನು ಹೆಚ್ಚಿನ ಮೌಲ್ಯದ ರಫ್ತುಗಳಾಗಿ ಪರಿವರ್ತಿಸುತ್ತದೆ. ಮಾಸ್ಕೋಗೆ ಅಗತ್ಯವಿರುವ ಡಾಲರ್‌ಗಳನ್ನು ನೀಡುತ್ತದೆ ಎಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಆರೋಪಿಸಿದ್ದರು.

Share This Article