ಉಕ್ರೇನ್‌ ಮೇಲೆ ಮತ್ತೆ ರಷ್ಯಾ ವಾರ್‌ – 100 ಕ್ಷಿಪಣಿ, 100 ಅಟ್ಯಾಕಿಂಗ್‌ ಡ್ರೋನ್‌ಗಳಿಂದ ದಾಳಿ

By
2 Min Read

ಕೈವ್‌: ಉಕ್ರೇನ್‌ ವಿರುದ್ಧ ಮತ್ತೆ ರಷ್ಯಾದ (Russia) ಅಟ್ಟಹಾಸ ಮುಂದುವರಿದಿದೆ. ಉಕ್ರೇನ್‌ನ (Kyiv) ಕೈವ್‌ ಮೇಲೆ ರಷ್ಯಾ ಸೇನೆ ಭೀಕರ ದಾಳಿ ನಡೆಸಿದ್ದು, ಕ್ಷಿಪಣಿ, ಡ್ರೋನ್‌ಗಳ ಸುರಿಮಳೆಯನ್ನೇ ಸುರಿಸಿದೆ.

ಸೋಮವಾರ ಬೆಳಗ್ಗಿನ ಜಾವ ಉಕ್ರೇನ್‌ (Ukraine) ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿಗಳು ಹಾಗೂ 100ಕ್ಕೂ ಹೆಚ್ಚು ಅಟ್ಯಾಕಿಂಗ್‌ ಡ್ರೋ‌ನ್‌ಗಳಿಂದ ದಾಳಿ ನಡೆಸಿದೆ. ದಾಳಿಯಲ್ಲಿ ಉಕ್ರೇನ್‌ನ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ರಾಷ್ಟ್ರವ್ಯಾಪಿ ಇಂಧನ ಸೌಲಭ್ಯಗಳನ್ನು ನಾಶಪಡಿಸಿದೆ ಎಂದು ಉಕ್ರೇನ್‌ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ : ಬಿಜೆಪಿಯಿಂದ 44 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಆರಂಭಗೊಂಡು ಸುಮಾರು ಎರಡೂ ವರೆ ವರ್ಷ ಆಗಿದೆ. ಕನಿಷ್ಠ 10 ಪ್ರದೇಶಗಳಲ್ಲಿ ರಷ್ಯಾ, ಉಕ್ರೇನಿನ ಮೂಲ ಸೌಕರ್ಯಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ವಿದ್ಯುತ್‌ ಸೇರಿದಂತೆ ಇತರೇ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಾ ಬಂದಿದೆ. ಕಳೆದ ಮಾರ್ಚ್‌ನಲ್ಲೂ ರಷ್ಯಾವು ಉಕ್ರೇನಿನ ಪವರ್‌ ಗ್ರಿಡ್‌ ಮೇಲೆ ರಷ್ಯಾ ಹೆಚ್ಚಾಗಿ ದಾಳಿ ನಡೆಸಿತು. ಇದರಿಂದ ಕೈವ್‌ ಒಳಗೊಂಡಂತೆ ಹಲವಾರು ಪ್ರದೇಶಗಳಲ್ಲಿ ವಿದ್ಯುತ್‌ ಹಾಗೂ ನೀರಿನ ಸೌಲಭ್ಯ ಕಡಿತಗೊಂಡಿದೆ ಎಂದು ವರದಿಯಾಗಿದೆ.

ಅದರಲ್ಲೂ ಸೋಮವಾರ ಬೆಳಗ್ಗೆ ರಷ್ಯಾ ನಡೆಸಿದ್ದ ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ಅತ್ಯಂತ ಭೀಕರವಾದದ್ದು, ಉಕ್ರೇನ್‌ನ ಪೂರ್ವ ಭಾಗದಲ್ಲಿ ಸ್ಥಿರವಾಗಿ ಮುಂದೆ ಸಾಗುತ್ತಿರುವ ರಷ್ಯಾ ಸೇನೆ ಹೊಸ ನೆಲೆಗಳನ್ನು ಗುರುತಿಸಿ ದಾಳಿ ನಡೆಸಿದೆ. ಇದು ಅತಿದೊಡ್ಡ ಸಂಯೋಜಿತ ದಾಳಿಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಜ.22ರ ಅಯೋಧ್ಯೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ 113 ಕೋಟಿ ವೆಚ್ಚ

ಈ ಬಗ್ಗೆ ಉಕ್ರೇನ್‌ ಅಧ್ಯಕ್ಷ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಇತರ ಪಾಲುದಾರರಿಂದ ಭಯೋತ್ಪಾದನೆಗೆ ಕಡಿವಾಣ ಹಾಕುವ ಹೊಂದಿರುವುದಾಗಿ ಝೆಲೆನ್ಸ್ಕಿ ತಿಳಿಸಿದ್ದಾರೆ. ಇನ್ನೂ ಉಕ್ರೇನ್‌ ಪ್ರಧಾನಿ ಡೆನಿಸ್ ಶ್ಮಿಹಾಲ್ ಪ್ರಕಾರ, 15 ಪ್ರದೇಶಗಳು ಹಾನಿಗೊಳಗಾಗಿವೆ. ಇಂಧನ ವಲಯವು ಹೆಚ್ಚು ಹಾನಿಗೀಡಾಗಿದೆ ಎಂದು ರಷ್ಯಾ ವಿರುದ್ಧ ಆರೋಪಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ಚುನಾವಣೆ: ಇಂದು ಬೆಳಗ್ಗೆ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿ ಹಿಂಪಡೆದ ಬಿಜೆಪಿ

Share This Article