ವೆನೆಜುವೆಲಾ ಅಧ್ಯಕ್ಷ, ಪತ್ನಿ ಬಿಡುಗಡೆಗೆ ರಷ್ಯಾ, ಚೀನಾ ಪಟ್ಟು – ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಆಗ್ರಹ!

2 Min Read

– ತೈಲ ನಿಕ್ಷೇಪದ ಬಳಿಕ ಗ್ರೀನ್‌ ಲ್ಯಾಂಡ್‌, ಕ್ಯೂಬಾ ಮೇಲೆ ಟ್ರಂಪ್‌ ಕೆಂಗಣ್ಣು

ಲಂಡನ್‌: ವೆನೆಜುವೆಲಾ ಮೇಲೆ ಅಮೆರಿಕ (USA) ನಡೆಸಿದ ದಾಳಿಯು ವಿಶ್ವದ ಹಲವು ದೇಶಗಳಲ್ಲಿ ಸಂಚಲನ ಮೂಡಿಸಿದೆ. ಅಮೆರಿಕದ ಹೈಡ್ರಾಮಗಳ ಕುರಿತು ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸಭೆಯಲ್ಲೂ ಚರ್ಚೆ ನಡೆದಿದೆ. ಸಭೆಯಲ್ಲಿ ಪದಚ್ಯುತ ವೆನೆಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೊ ಅವರನ್ನ ತಕ್ಷಣವೇ ಬಿಡುಗಡೆ ಮಾಡುವಂತೆ ರಷ್ಯಾ ಮತ್ತು ಚೀನಾ ಒತ್ತಾಯಿಸಿವೆ.

ವಿಶ್ವಸಂಸ್ಥೆಯ ಸಭೆಯಲ್ಲಿ ರಷ್ಯಾ (Russia) ರಾಯಭಾರಿ ವಾಸಿಲಿ ನೆಬೆಂಜಿಯಾ, ವೆನೆಜುವೆಲಾ ಮೇಲಿನ ಅಮೆರಿಕದ ಆಕ್ರಮಣವನ್ನ ತೀವ್ರವಾಗಿ ಖಂಡಿಸಿದ್ದಾರೆ. ಟ್ರಂಪ್‌, ಮಡುರೊ (Nicolas Maduro) ಮತ್ತು ಅವರ ಪತ್ನಿಯನ್ನ ಕೂಡಲೇ ಬಿಡುಗಡೆ ಮಾಡಬೇಕು. ಅಮೆರಿಕದ ಅಪರಾಧಗಳಿಗೆ ಯಾವುದೇ ಸಮರ್ಥನೆಯಿಲ್ಲ. ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ, ಸಶಸ್ತ್ರ ದಾಳಿ ನಡೆಸಿದೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Venezuela | ವಿಶ್ವದ ಅತಿದೊಡ್ಡ ತೈಲ ನಿಕ್ಷೇಪದ ಮೇಲೆ ಟ್ರಂಪ್‌ ಕಣ್ಣಿಟ್ಟಿದ್ದೇಕೆ? ಭಾರತದ ಮೇಲೆ ಏನು ಪರಿಣಾಮ?

Nicolas Maduro 1

ಚೀನಾ ಕೂಡ, ಅಮೆರಿಕದ ದಾಳಿಯನ್ನ ಕಾನೂನು ಬಾಹಿರ ಎಂದು ಕರೆದಿದೆ. ಒಂದು ದೇಶದ ಮೇಲೆ ಬೆದರಿಕೆ ಹಾಕುವುದು ಆಘಾತಕಾರಿ ಬೆಳವಣಿಗೆ. ಅಮೆರಿಕ ತನ್ನ ನಿಲುವನ್ನ ಬದಲಿಸಬೇಕು. ಬೆದರಿಸುವ ಅಭ್ಯಾಸಗಳನ್ನ ಬಿಟ್ಟು, ಪರಸ್ಪರ, ಗೌರವ ಸಮಾನತೆಯಿಂದ ನಡೆದುಕೊಳ್ಳಬೇಕು. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನ ನಿಲ್ಲಿಸಬೇಕು. ಜೊತೆಗೆ ಮಡುರೋ ಮತ್ತು ಅವರ ಪತ್ನಿಯ ಬಿಡುಗಡೆ ಮಾಡಬೇಕು ಚೀನಾದ ವಿಶ್ವಸಂಸ್ಥೆ ಪ್ರತಿನಿಧಿ ಸನ್ ಲೀ ಒತ್ತಾಯಿಸಿದ್ದಾರೆ.

ನ್ಯೂಯಾರ್ಕ್‌ ಜೈಲಿನಲ್ಲಿ ಮಡುರೋ
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಓಹಿಯೋ ನಿವಾಸದ ಮೇಲೆ ಗುಂಡಿನ ದಾಳಿಯಾಗಿದೆ. ಗುಂಡಿನ ದಾಳಿ ನಡೆಸಿದ ಓರ್ವ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಅದೃಷ್ಟವಶಾತ್ ಗುಂಡಿನ ದಾಳಿ ಸಮಯದಲ್ಲಿ ವ್ಯಾನ್ಸ್ ಕುಟುಂಬದ ಯಾರೊಬ್ಬರೂ ಮನೆಯಲ್ಲಿ ಇರಲಿಲ್ಲ ಅಂತ ತಿಳಿದು ಬಂದಿದೆ. ಬಂಧಿತನನ್ನು ಇದೀಗ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು, ನ್ಯೂಯಾರ್ಕ್ ಜೈಲಿನಲ್ಲಿರೋ ವೆನೆಜುವೆಲ್ಲಾದ ಮಾಜಿ ಅಧ್ಯಕ್ಷ ಮಡುರೋನನ್ನು ಕೋರ್ಟ್ ಮುಂದೆ ವಿಚಾರಣೆಗೆ ಹಾಜರುಪಡಿಸಲಾಗಿದೆ.

ಅಮೆರಿಕ-ವೆನೆಜುವೆಲಾ ಮೇಲೆ ನಡೆದ ದಾಳಿಯು ವಿಶ್ವದ ಹಲವು ದೇಶಗಳಲ್ಲಿ ಸಂಚಲನ ಮೂಡಿಸಿದೆ. ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್ ಅಧಿಕಾರ ಸ್ವೀಕರಿಸಿದ್ದು, ಅವರಿಗೂ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಡೆಲ್ಸಿ ರೊಡ್ರಿಗಸ್ ಅಮೆರಿಕದೊಂದಿಗೆ ಸಹಕರಿಸದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.  ಇದನ್ನೂ ಓದಿ: ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸದಿದ್ದರೆ ಸುಂಕ ಏರಿಕೆ: ಭಾರತಕ್ಕೆ ಟ್ರಂಪ್‌ ಮತ್ತೆ ಧಮ್ಕಿ

Nicolas Maduro

ಗ್ರೀನ್‌ ಲ್ಯಾಂಡ್‌, ಕ್ಯೂಬಾ ಮೇಲೆ ಟ್ರಂಪ್‌ ಕಣ್ಣು
ಇತ್ತ, ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ಕಾರ್ಯಾಚರಣೆಗೆ ಇರಾನ್ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಇನ್ನು, ಅಮೆರಿಕ ದಾಳಿಯಿಂದ ಕ್ಯೂಬಾದ 32 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯೂಬಾ ಸರ್ಕಾರ ಹೇಳಿದೆ. ಸಾವನ್ನಪ್ಪಿದ 32 ಜನರು ಕ್ಯೂಬಾದ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಸದಸ್ಯರು ಎಂದು ಸ್ಪಷ್ಟಪಡಿಸಿದೆ. ಈ ಮಧ್ಯೆ, ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಹಾಗೂ ಕ್ಯೂಬಾ ಮೇಲೆ ಕಣ್ಣಿಟ್ಟಿದ್ದಾರೆ. ಫ್ಲೋರಿಡಾದಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, ನಮಗೆ ಗ್ರೀನ್‌ಲ್ಯಾಂಡ್‌ನ ಅವಶ್ಯಕತೆ ಇದೆ, ಖನಿಜಗಳಿಗಾಗಿ ಅಲ್ಲ. ಬದಲಿಗೆ ರಾಷ್ಟ್ರೀಯ ಭದ್ರತೆಗಾಗಿ ಎಂದಿದ್ದಾರೆ.  ಇದನ್ನೂ ಓದಿ: US ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮನೆ ಮೇಲೆ ಗುಂಡಿನ ದಾಳಿ – ಶಂಕಿತ ಅರೆಸ್ಟ್‌

Share This Article