ಮೃತ ಮಹಿಳೆಯ ದೇಹವನ್ನೇ ತಿಂದ 20 ಸಾಕು ಬೆಕ್ಕುಗಳು

Public TV
1 Min Read

ಮಾಸ್ಕೋ: ಮೃತ ಮಹಿಳೆಯ ದೇಹವನ್ನು ಆಕೆ ಸಾಕಿದ್ದ 20 ಬೆಕ್ಕುಗಳೇ ತಿಂದ ಆಘಾತಕಾರಿ ಘಟನೆ ರಷ್ಯಾದ ಬಟಾಯ್ಸ್ಕ್‌ನ ನಿವಾಸವೊಂದರಲ್ಲಿ ನಡೆದಿದೆ.

ರಷ್ಯಾದ ಬಟಾಯ್ಸ್ಕ್‌ನಲ್ಲಿ ಮಹಿಳೆಯೊಬ್ಬಳಿಗೆ ಬೆಕ್ಕುಗಳನ್ನು ಸಾಕುವುದೆಂದರೆ ಬಹಳ ಪ್ರೀತಿಯಾಗಿತ್ತು. ಇದರಿಂದಾಗಿ ತನ್ನ ನಿವಾಸದಲ್ಲಿ 20 ಬೆಕ್ಕುಗಳನ್ನು ಹೊಂದಿದ್ದರು. ಆದರೆ ಮಹಿಳೆ ಸುಮಾರು 2 ವಾರಗಳ ಹಿಂದೆ ಮೃತಪಟ್ಟಿದ್ದಳು. ಇದರಿಂದಾಗಿ ಆ ಬೆಕ್ಕುಗಳಿಗೆ ತಿನ್ನಲು ಆಹಾರವಿಲ್ಲದಿದ್ದರಿಂದ ಆ ಮಹಿಳೆಯ ದೇಹವನ್ನೇ ತಿಂದಿದ್ದಾರೆ.

ತುಂಬಾ ದಿನಗಳಿಂದ ಮಹಿಳೆ ಕಾಣಿಸದಿದ್ದರಿಂದ ಆಕೆಯ ಸಹೋದ್ಯೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಕೊಂಡ ಪೊಲೀಸರಿಗೆ ಎರಡು ವಾರಗಳಾದರೂ ಮಹಿಳೆಯನ್ನು ಪತ್ತೆ ಹಚ್ಚಲಾಗಲಿಲ್ಲ. ಕೊನೆಗೆ ಮಹಿಳೆಯ ಮನೆಯನ್ನು ಶೋಧಿಸಿದಾಗ ಅಲ್ಲಿದ್ದ ಅವಶೇಷಗಳನ್ನು ನೋಡಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ನಿತ್ಯ 12 ಗಂಟೆ ಕೆಲಸ, ವಾರದಲ್ಲಿ 3 ದಿನ ರಜೆ – ಜುಲೈ 1ರಿಂದ ಹೊಸ ಕಾರ್ಮಿಕ ಸಂಹಿತೆ?

ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಮಹಿಳೆ ಸುಮಾರು ಎರಡು ವಾರಗಳ ಹಿಂದೆ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ತಿನ್ನಲು ಏನು ಇಲ್ಲದ ಕಾರಣ ಬೆಕ್ಕುಗಳು ಹಸಿದಿದ್ದವು. ಇದರಿಂದಾಗಿ ಬೆಕ್ಕುಗಳು ತಮ್ಮ ಸತ್ತ ಮಾಲೀಕರ ದೇಹವನ್ನು ತಿಂದಿವೆ ಎಂದು ತಿಳಿಸಿದರು. ಇದನ್ನೂ ಓದಿ: 24 ವರ್ಷ ಕಾದ ಬಳಿಕ 57ನೇ ವಯಸ್ಸಿನಲ್ಲಿ ಸಿಕ್ತು ಸರ್ಕಾರಿ ನೌಕರಿ

Live Tv

Share This Article
Leave a Comment

Leave a Reply

Your email address will not be published. Required fields are marked *