ತೆಂಗಿನಕಾಯಿ ಪ್ರಸಾದಕ್ಕಾಗಿ ನೂಕು ನುಗ್ಗಲು – 17 ಮಂದಿಗೆ ಗಾಯ

Public TV
1 Min Read

ಭೋಪಾಲ್: ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ತೆಂಗಿನಕಾಯಿ ಪ್ರಸಾದ ಹಂಚುವ ವೇಳೆ ಕಾಲ್ತುಳಿತದಿಂದ 17 ಭಕ್ತರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿನಾ ಪಟ್ಟಣದಲ್ಲಿ ನಡೆದಿದೆ.

ಮುಖ್ಯ ಕಾರ್ಯಕ್ರಮದ ನಂತರ ತೆಂಗಿನಕಾಯಿ ಪಡೆಯಲು ಭಕ್ತರ ನಡುವೆ ನೂಕು ನುಗ್ಗಲು ಉಂಟಾಗಿದ್ದು, ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ 17 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಮೂವರ ಮೂಳೆ ಮುರಿದಿದ್ದು, ಇತರರನ್ನು ಪ್ರಾಥಮಿಕ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಊಟ ಹೋಟೆಲ್‍ಗಳಿಗೆ ಮಾರಾಟ

ಈ ಕುರಿತಂತೆ ಪ್ರತಿಕ್ರಿಯಿಸಿರುವ ಸ್ವಯಂಸೇವಕ ಆಕಾಶ್ ರಜಪೂತ್ ಅವರು, ಕಾರ್ಯಕ್ರಮದಲ್ಲಿ ಪ್ರತಿಯೊಂದಕ್ಕೂ ಸರಿಯಾದ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಆದರೆ ಕಾವಲುಗಾರರನ್ನು ಲೆಕ್ಕಿಸದೇ ಕೆಲವರು ಸರದಿಯಲ್ಲಿ ಜಿಗಿಯಲು ಪ್ರಯತ್ನಿಸಿದ ಪರಿಣಾಮ ಈ ಘಟನೆ ನಡೆದಿದೆ. ಇಲ್ಲಿ ಯಾವುದೇ ಅಸಮರ್ಪಕ ನಿರ್ವಹಣೆ ಇಲ್ಲ. ಸಂಘಟಕರಿಗೆ ಸಂಬಂಧಿಸಿದವರು ಸೇರಿದಂತೆ ಮುಂದಿನ ಸಾಲಿನಲ್ಲಿ ಕುಳಿತಿದ್ದವರಿಂದ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

Share This Article
Leave a Comment

Leave a Reply

Your email address will not be published. Required fields are marked *