ದಿಢೀರ್‌ ‘ಬಿಗ್‌ ಬಾಸ್‌’ಗೆ ಕಿಚ್ಚ ವಿದಾಯ ಹೇಳಿದ್ಯಾಕೆ?: ಸುಳಿವು ಕೊಟ್ಟ ರೂಪೇಶ್‌ ರಾಜಣ್ಣ

By
2 Min Read

ಕಿಚ್ಚ ಸುದೀಪ್ (Kichcha Sudeep) ನಿನ್ನೆ (ಅ.13) ಬಿಗ್ ಬಾಸ್ ಶೋಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಈ ಕುರಿತು ರೂಪೇಶ್ ರಾಜಣ್ಣ (Rupesh Rajanna) ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದು ಹಂಚಿಕೊಂಡಿದ್ದಾರೆ. ದಿಢೀರ್‌ ಬಿಗ್‌ ಬಾಸ್‌ಗೆ ಸುದೀಪ್‌ ಯಾಕೆ ವಿದಾಯ ಹೇಳ್ತಿದ್ದಾರೆ ಎಂದು ಮಹತ್ವದ ಸುಳಿವೊಂದನ್ನು ಬಿಟ್ಟು ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಮಾಡಿದ ಅವಮಾನ ಸಹಿಸೋಲ್ಲ ಅಂತ ರೂಪೇಶ್ ರಾಜಣ್ಣ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಬಿಗ್ ಬಾಸ್’ ಎಂಬ ಕಾರ್ಯಕ್ರಮ ನಡೆಸುವ ಕೆಲ ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ, ಸುದೀಪ್ ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನವನ್ನು ಸಹಿಸಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ, ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ಮಾತಾಡ್ತೀನಿ ಎಂದು ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ರೂಪೇಶ್ ರಾಜಣ್ಣ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಕುರಿತು ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ. ಸುದೀಪ್ ಅವರ ಈ ನಿರ್ಣಯ ಹಿಂದೆ ಬೇರೆ ಏನಾದರೂ ಕಥೆ ಇದ್ಯಾ? ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸದ್ಯದಲ್ಲೇ ಇದಕ್ಕೆಲ್ಲಾ ಉತ್ತರ ಸಿಗುತ್ತಾ? ಕಾದುನೋಡಬೇಕಿದೆ.

ಕಿಚ್ಚನ ಎಕ್ಸ್ ಪೋಸ್ಟ್‌ನಲ್ಲಿ ಏನಿದೆ?

ನೀವೆಲ್ಲರೂ BBK 11ರಲ್ಲಿ ತೋರಿಸಿರುವ ಪ್ರತಿಕ್ರಿಯೆಗೆ ಧನ್ಯವಾದಗಳು. ಶೋ ಮತ್ತು ನನ್ನ ಮೇಲೆ ತೋರಿಸಿದ ಪ್ರೀತಿಯ ಬಗ್ಗೆ ಹಲವರು ಹೇಳುತ್ತಾರೆ. ಇದು ನಮ್ಮೊಂದಿಗೆ ಪ್ರಯಾಣಿಸಿದ 10+1 ವರ್ಷದ ಶ್ರೇಷ್ಠ ಅನುಭವವಾಗಿತ್ತು. ಮತ್ತು ಈಗ ನಾನು ನನ್ನ ಮುಂದಿನ ಹೆಜ್ಜೆಗೆ ಸಾಗುವ ಸಮಯವಾಗಿದೆ. ಇದು BBK ಯಲ್ಲಿನ ನನ್ನ ಕೊನೆಯ ಆವೃತ್ತಿಯಾಗಲಿದೆ. ನನ್ನ ನಿರ್ಧಾರವನ್ನು ನನ್ನ ಅಭಿಮಾನಿಗಳು ಮತ್ತು ಈ ವರ್ಷಗಳಲ್ಲಿ BB ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂಬುದರಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ.

ಈ ಆವೃತ್ತಿಯನ್ನು ಅತ್ಯುತ್ತಮವಾಗಿ ಮಾಡಲು ಪ್ರಯತ್ನಿಸೋಣ ಎಂದು ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಇತ್ತೀಚೆಗೆ ಸುದೀಪ್ ಅವರು ದೊಡ್ಮನೆ ಆಟ ಸೀಸನ್ 11 ನಡೆಸಿಕೊಡಲ್ಲ ಅಂತಾ ನೇರವಾಗಿ ತಿಳಿಸಿದ್ದರು. ಆದರೆ ವಾಹಿನಿಯ, ಅಭಿಮಾನಿಗಳ ಒತ್ತಾಯಕ್ಕೆ ಸುದೀಪ್ ಸಾಥ್ ನೀಡಿದ್ದರು. ಈಗ ಮುಂದಿನ ಸೀಸನ್ ನಡೆಸಿಕೊಡಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದರು.

Share This Article