ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಪತ್ತೆ ವದಂತಿ – ಎಚ್ಚೆತ್ತ ಆರೋಗ್ಯ ಇಲಾಖೆ, ಮೊಟ್ಟೆ ಟೆಸ್ಟ್‌ಗೆ ಸೂಚನೆ!

2 Min Read

ಬೆಂಗಳೂರು: ಮೊಟ್ಟೆ (Egg) ಪ್ರಿಯರು ನೋಡಲೇಬೇಕಾದ ಸ್ಟೋರಿ. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಎಂಬ ವದಂತಿ ಹಿನ್ನೆಲೆ ಜನರ ಆತಂಕ ದೂರು ಮಾಡೋಕೆ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಬ್ರ್ಯಾಂಡ್‌ಗಳ ಮೊಟ್ಟೆ ಟೆಸ್ಟ್‌ಗೆ ಆರೋಗ್ಯ ಸಚಿವರು ಸೂಚಿಸಿದ್ದಾರೆ. ಜೊತೆಗೆ ಕಳೆದ 6 ತಿಂಗಳ ಹಿಂದೆ ಆಹಾರ ಸುರಕ್ಷತಾ ಇಲಾಖೆ (Food Safety Department) ಟೆಸ್ಟ್‌ನಲ್ಲಿ ಮೊಟ್ಟೆ ಸೇಫ್ ಅಂತ ಕೂಡ ವರದಿ ಬಂದಿದೆ.

ಎಲ್ಲಾ ಬ್ರ್ಯಾಂಡ್‌ ಮೊಟ್ಟೆ ಟೆಸ್ಟ್‌ಗೆ ಸೂಚನೆ
ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗ್ತಿರೋ ವಿಚಾರ ಅಂದರೆ ಅದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಅನ್ನೋ ವಿಚಾರ. ಜನ ಆತಂಕಕ್ಕೆ ಒಳಗಾಗಿದ್ದು ಮೊಟ್ಟೆ ತಿನ್ನೋದಕ್ಕೂ ಭಯ ಪಡುವಂತಾಗಿದೆ. ಜನರ ಆತಂಕ ದೂರು ಮಾಡೋದಕ್ಕೆ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ರಾಜ್ಯದಲ್ಲಿ ಮೊಟ್ಟೆ ಟೆಸ್ಟ್ (Egg Test) ಮಾಡೋದಕ್ಕೆ ಸೂಚನೆ ಕೊಟ್ಟಿದ್ದಾರೆ. ಜನ ಆತಂಕಕ್ಕೆ ಒಳಗಾಗೋದು ಬೇಡ ಎಲ್ಲಾ ಬ್ರ್ಯಾಂಡ್‌ಗಳನ್ನ ಟೆಸ್ಟ್ ಮಾಡೋಕೆ ಹೇಳ್ತೆನೆ ಅಂದಿದ್ದಾರೆ.

ಇನ್ನೂ ಪ್ರಮುಖವಾಗಿ ವಾಗಿ ಕ್ಯಾನ್ಸರ್‌ಗೆ ಕಾರಣ ಆಗುವ ಅಂಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಆಥರ ತಪ್ಪು ಆಗಿದ್ರೆ ಶಿಕ್ಷೆ ಆಗುತ್ತೆ. ಜನರು ಗೊಂದಲಕ್ಕೆ ಒಳಗಾಗೋದು ಬೇಡ. ಜನರು ಆತಂಕ ಕೂಡ ಪಡೋದು ಬೇಡ ಅಂತಿದ್ದಾರೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಶಾಕ್‌ – ದರ ಇಳಿಕೆ ಮಾಡಲ್ಲ ಅಂತ ದರ ನಿಗದಿ ಸಮಿತಿ ಸ್ಪಷ್ಟನೆ

6 ತಿಂಗಳ ಹಿಂದಿನ ವರದಿಯಲ್ಲಿ ಏನಿತ್ತು?
ಇನ್ನೂ ಪ್ರಮುಖವಾಗಿ ಮೊಟ್ಟೆ ವದಂತಿ ವಿಚಾರ ಚರ್ಚೆಯಲ್ಲಿ ಇರುವ ಬೆನ್ನಲ್ಲೇ ರಾಜ್ಯ ಆಹಾರ ಸುರಕ್ಷತಾ ಇಲಾಖೆ ವತಿಯಿಂದ ಮಹತ್ವದ ವಿಚಾರ ಬಯಲಾಗಿದೆ‌. ಕಳೆದ 6 ತಿಂಗಳ ಹಿಂದೆ ಮೊಟ್ಟೆ ಟೆಸ್ಟ್ ಆಗಿದ್ದು ಅದರಲ್ಲಿ ಮೊಟ್ಟೆಯಲ್ಲಿ ಯಾವುದೇ ಹಾನಿಕಾರಕ ಇಲ್ಲ ಅಂತಾ ವರದಿ ಬಂದಿದೆ. ಮೊಟ್ಟೆ ಸೇಫ್ ಅಂತಾ ಆಹಾರ ಸುರಕ್ಷತೆ ಮತ್ತು ಔಷಧಿ ಗುಣಮಟ್ಟ ನಿಯಂತ್ರಣ ‌ಇಲಾಖೆ ಕಮೀಷನರ್ ಶ್ರೀನಿವಾಸ್ ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಮೊಟ್ಟೆ ಸೇಫ್ ಅಂತಾ ವರದಿ ಇದೆ ಅಂತಾ ಆಹಾರ ಸುರಕ್ಷತಾ ಇಲಾಖೆ ಹೇಳ್ತಿದೆ. ಇತ್ತ ಆರೋಗ್ಯ ಸಚಿವರು ಮೊಟ್ಟೆ ಟೆಸ್ಟ್ ಗೆ ಸೂಚನೆ ನೀಡಿದ್ದಾರೆ. ಆತಂಕದಲ್ಲಿ ಇರುವ ಜನರಿಗೆ ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆಯ ಲ್ಯಾಬ್ ರಿಪೋರ್ಟ್ ಏನಾಗಿರಲಿದೆ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಕಹಳೆ – ಸಿದ್ದರಾಮಯ್ಯ, ಡಿಕೆಶಿ, ಸಚಿವರು, ಶಾಸಕರು ಭಾಗಿ

Share This Article