ಭಾರತ ಭಾರತವಾಗಿ ಉಳಿಯಬೇಕೆಂದು ಬಯಸುವುದು RSS: ಸಿ.ಟಿ ರವಿ

Public TV
2 Min Read

ಹಾಸನ: ದೇಶ ಕಟ್ಟುವ ಕಾರ್ಯ ಭಾರತದುದ್ದಕ್ಕೂ ಆಗಬೇಕೆಂದು ಬಯಸುವುದು ಆರ್‍ಎಸ್‍ಎಸ್. ಭಾರತ ಭಾರತವಾಗಿ ಉಳಿಯಬೇಕೆಂದು ಬಯಸುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C.T Ravi) ಹೇಳಿದ್ದಾರೆ.

ಬೇಲೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಭಕ್ತ ಮತ್ತು ದೇಶ ದ್ರೋಹಿ, ದೇಶ ಭಕ್ತನ ಜೊತೆ ದೇಶ ದ್ರೋಹಿ ಒಲಿಸೋದು ಅಕ್ಷ್ಯಮ್ಯ ಅಪರಾಧ. ಆರ್‍ಎಸ್‍ಎಸ್ ಒಂದು ದೇಶ ಭಕ್ತ ಸಂಘಟನೆ. ಭಾರತವನ್ನ ಮೊಘಲ್ ಸ್ತಾನ್ ಮಾಡಿ ಹಿಂದುಗಳನ್ನೆಲ್ಲ ಸರ್ವನಾಶ ಮಾಡಬೇಕೆಂದು ಬಯಸೋದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI). ಹೋಲಿಕೆ ಮಾಡುವವರಿಗೆ ಏನು ಹೇಳಬೇಕು, ಯಾರಾದರೂ ತಲೆ ಸರಿ ಇದ್ದರೆ ಹೋಲಿಕೆ ಮಾಡ್ತಾರಾ ಎಂದು ಪ್ರಶ್ನಿಸಿದರು.

ಆರ್ ಎಸ್‍ಎಸ್ ಬೈದರೆ ವೋಟು ಸಿಗುತ್ತೆ ಅನ್ನುವ ದುರಾಸೆ. ಇವರಿಗೂ ಪಿಎಫ್‍ಐಗೂ ವ್ಯತ್ಯಾಸ ಏನು..? ಪಿಎಫ್‍ಐ ಕೂಡ ಆರ್‍ಎಸ್‍ಎಸ್‍ನೇ ಟಾರ್ಗೆಟ್ ಮಾಡುವುದು, ಕಾಂಗ್ರೆಸ್‍ನವರು ಆರ್ ಎಸ್‍ಎಸ್‍ನೇ ಟಾರ್ಗೆಟ್ ಮಾಡ್ತಾರೆ. ಹಾಗಾದ್ರೆ ಇವರಿಬ್ಬರಿಗೂ ಒಳ ಹೊಂದಾಣಿಕೆ ಇರುವ ಸಾಧ್ಯತೆ ಇದೆ. ಮೊಘಲ್ ಸ್ತಾನ್ ಮಾಡಲು ನೀವು ನಮಗೆ ಸಹಾಯ ಮಾಡಿ ನಿಮಗೆ ನಾವು ವೋಟು ಹಾಕ್ತೀವಿ ಅಂತ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: PFI ಬ್ಯಾನ್: ಹಳೇ ಕೇಸ್, ಹೊಸ ಆಟ – ಇದು ಬಿಜೆಪಿ ಗೇಮ್!

ಅಧಿಕಾರದ ದುರಾಸೆಗೆ ಭಾರತ (India) ವಿಭಜನೆ ಮಾಡೋದು. ಇಂದಿನ ಕಾಂಗ್ರೆಸ್ (Congress), ಪಿಎಫ್‍ಐ ಜೊತೆಗೆ ಕೈ ಜೋಡಿಸಿದ್ದಾರೆ ಅನ್ನುವ ಅನುಮಾನ ನನಗೆ ಬರುತ್ತಿದೆ. ಆರ್‍ಎಸ್‍ಎಸ್ ಮುಗಿಸುತ್ತೀನಿ ಅಂತಾರೆ, ಇನ್ನೊಂದು ವಿಭಜನೆಗೆ ತಡೆಗೋಡೆ ಆಗಿರುವುದು ಆರ್‍ಎಸ್‍ಎಸ್. ಆರ್‍ಎಸ್‍ಎಸ್ ಮುಗಿಸಿದ್ರೆ ಅವರು ಮೊಘಲ್ ಸ್ತಾನ್ ಮಾಡೋದು ಬಹಳ ಸುಲಭ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರೇ ನೀವು ಸುನ್ನಿ ಮಾಡಿಸಿಕೊಳ್ಳಲು ರೆಡಿ ಇದ್ದೀರಾ..? ಬಹುಶಃ ಸಿದ್ದರಾಮಯ್ಯ (Siddaramaiah) ಅವರು ವೋಟು ಸಿಗುತ್ತೆ ಅಂತ ತಯಾರು ಇರಬಹುದು, ನಾನಂತು ತಯಾರಿಲ್ಲ ಎಂದರು.

ಇದೇ ವೇಳೆ ದಸರಾ (Dasara 2022) ಹಬ್ಬದ ಬಗ್ಗೆ ಮಾತನಾಡಿದ ಅವರು, ಆ ತಾಯಿ ವರವನ್ನು ಕೊಡ್ತಾಳೆ. ಹಾಗೆಯೇ ದುಷ್ಟ ನಿಗ್ರಹಿಸುವಂತ ದುರ್ಗೆಯೂ ಹೌದು. ಆಕೆಯ ಬಳಿ ಶಸ್ತ್ರವೂ ಇದೆ, ಶಾಸ್ತ್ರವೂ ಇದೆ. ಯಾರೂ ಶಾಸ್ತ್ರದ ಮೂಲಕ ಸಂಧಾನಕ್ಕೆ ಬರ್ತಾರೆ ಸಂಧಾನ, ಯಾರೂ ಶಸ್ತ್ರದ ಮೂಲಕ ಬರ್ತಾರೆ ಅವರ ಸಂಹಾರ ಎಂದು ತಿಳಿಸಿದರು. ಇದನ್ನೂ ಓದಿ: ಪಿಎಫ್‌ಐ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ: ಅಸಾದುದ್ದೀನ್‌ ಓವೈಸಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *