ಆರ್‌ಎಸ್‌ಎಸ್‌ನವರು ಅತಿರೇಕ ಮಾಡೋದು ಬಿಡಬೇಕು: ಬೇಳೂರು ಗೋಪಾಲಕೃಷ್ಣ

Public TV
2 Min Read

– ನಾನು ಸಚಿವ ಸ್ಥಾನದ ಆಕಾಂಕ್ಷಿ

ಬೆಂಗಳೂರು: ಆರ್‌ಎಸ್‌ಎಸ್‌ನವರು (RSS) ಅತಿರೇಕ ಮಾಡೋದು ಬಿಡಬೇಕು. ಮೊದಲು ಹೇಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದರೋ ಹಾಗೇ ಆರ್‌ಎಸ್‌ಎಸ್‌ನವರು ಕೆಲಸ ಮಾಡಿಕೊಂಡು ಹೋಗಬೇಕು ಅಂತ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalkrishna) ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳನ್ನು ಬ್ಯಾನ್ ಮಾಡಬೇಕು ಎಂಬ ಪ್ರಿಯಾಂಕ್ ಖರ್ಗೆ (Priyank Kharge) ಪತ್ರ ವಿಚಾರ ಮತ್ತು ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಬಂದಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರ್‌ಎಸ್‌ಎಸ್‌ಗೆ ನಿಷೇಧ ಹಾಕಬೇಕು ಎಂಬ ಖರ್ಗೆ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಆರ್‌ಎಸ್‌ಎಸ್ ಅವರು ಹಿಂದೆ ಇಂದ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದಾರೆ. ಆರ್‌ಎಸ್‌ಎಸ್ ಅವರು ಬೆದರಿಕೆ ಕೊಡೋದು ಬಿಡಬೇಕು. ಎಲ್ಲಾ ಧರ್ಮ ಒಟ್ಟಾಗಿ ತೆಗೆದುಕೊಂಡು ಹೋಗೋದು ಸರ್ಕಾರದ ಕೆಲಸ. ಖರ್ಗೆ ಹೆದರೋ ಅವಶ್ಯಕತೆ ಇಲ್ಲ. ನಮ್ಮದೇ ಸರ್ಕಾರ ಇದೆ. ಬೆದರಿಕೆ ಹಾಕೋರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅನುದಾನ ಬಿಡುಗಡೆ ಮಾಡದಿದ್ರೆ ರಾಜಕೀಯ ನಿವೃತ್ತಿ, ಯಾವ ಪಕ್ಷಕ್ಕೂ ಹೋಗಲ್ಲ: ಶಾಸಕ ಸತೀಶ್ ಸೈಲ್

ಮೊದಲು ಆರ್‌ಎಸ್‌ಎಸ್ ಅವರು ಮಾತ್ರ ಪ್ಯಾಂಟ್ ಶರ್ಟ್ ಹಾಕಿದ್ದರು. ಈಗ ಬಿಜೆಪಿಯವರು ಹಾಕುತ್ತಿದ್ದಾರೆ. ಆರ್‌ಎಸ್‌ಎಸ್ ಅವರು ಅನುಮತಿ ತೆಗೆದುಕೊಂಡು ಕಾರ್ಯಕ್ರಮ ಮಾಡೋದು ಸರಿ. ಅನುಮತಿ ಪಡೆಯಬೇಕು ಅಂತ ಹೇಳೋದು ಯಾಕೆ ತಪ್ಪಾಗುತ್ತದೆ. ಆರ್‌ಎಸ್‌ಎಸ್ – ಬಿಜೆಪಿ ಅವರು ಗೊಂದಲ ಮಾಡೋದು ಸಹಜ. ಅನುಮತಿ ಪಡೆದು ಕಾರ್ಯಕ್ರಮ ಮಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಇಂಟರ್‌ನ್ಯಾಷನಲ್ ನಂಬರ್‌ನಿಂದ ಬೆದರಿಕೆ ಕರೆ, ನಾನು ಹೆದರಲ್ಲ: ಪ್ರಿಯಾಂಕ್ ಖರ್ಗೆ

ಸಚಿವ ಸ್ಥಾನದ ಕುರಿತು ಮಾತನಾಡಿ, ನಾನು ಸಚಿವ ಸ್ಥಾನದ ಆಕಾಂಕ್ಷಿ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಸೃಷ್ಟಿ ಆಗುತ್ತಿದೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್, ರಾಜ್ಯ ನಾಯಕರು ನಿರ್ಧಾರ ಮಾಡುತ್ತಾರೆ. ನಾನು ಯಾವುದೇ ಗೊಂದಲ ಮಾಡೋಕೆ ಹೋಗಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ, ನಾನೇನು ಸನ್ಯಾಸಿ ಅಲ್ಲ. 3 ಬಾರಿ ಎಂಎಲ್‌ಎ ಆಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಂಜೇಗೌಡಗೆ ತಾತ್ಕಾಲಿಕ ರಿಲೀಫ್‌ – ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ತಡೆ

ಸಚಿವ ಸ್ಥಾನ ಕೊಡಿ ಅಂತ ಸಿಎಂಗೆ, ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಕೊಟ್ಟಿಲ್ಲ ಅಂದರೆ ಪಕ್ಷದ ನಿಷ್ಠೆಯಾಗಿ ಕೆಲಸ ಮಾಡುತ್ತೇನೆ, ಗೊಂದಲ ಮಾಡಲು ಹೊಗಲ್ಲ ಎಂದರು. ಇದನ್ನೂ ಓದಿ: GBA ರಚನೆ ಕುರಿತು ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿ: ಅರ್ಜಿದಾರರಿಗೆ ಸುಪ್ರೀಂ ನಿರ್ದೇಶನ

Share This Article