ಪಾಲಕ್ಕಾಡ್‍ನಲ್ಲಿ RSS ಮುಖಂಡನ ಹತ್ಯೆ

Public TV
1 Min Read

ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಮುಖಂಡ ಶ್ರೀನಿವಾಸನ್ ಅವರನ್ನು ಶನಿವಾರ ಪಾಲಕ್ಕಾಡ್ ಪಟ್ಟಣದ ಮೇಲಮುರಿಯಲ್ಲಿ ಹತ್ಯೆ ಮಾಡಲಾಗಿದೆ.

ಪಾಲಕ್ಕಾಡ್ ಸಮೀಪದ ಎಲಪ್ಪುಲ್ಲಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಕಾರ್ಯಕರ್ತನನ್ನು ಹತ್ಯೆ ಮಾಡಿದ 24 ಗಂಟೆಗಳ ನಂತರ, ಶನಿವಾರ ಪಾಲಕ್ಕಾಡ್ ಪಟ್ಟಣದ ಮೇಲಮುರಿಯಲ್ಲಿ RSS ಮುಖಂಡನನ್ನು ಹತ್ಯೆ ಮಾಡಲಾಗಿದೆ. ಇದನ್ನೂ ಓದಿ:  ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಇಲ್ಲಿ ಇರಬಾರದು: ಅದಮಾರು ಶ್ರೀ

ನಡೆಸಿದ್ದೇನು?
ಮೇಲಮುರಿಯಲ್ಲಿ ಶ್ರೀನಿವಾಸ್ ಅವರು ತಮ್ಮ ಅಂಗಡಿಯಲ್ಲಿದ್ದಾಗ ಐದು ಜನರ ಗುಂಪೊಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ದಾಳಿ ನಡೆಸಿದೆ. ಆರೋಪಿಗಳು ಮೂರು ಬೈಕ್‍ಗಳಲ್ಲಿ ಬಂದು ಶ್ರೀನಿವಾಸನ್‍ಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ಶ್ರೀನಿವಾಸನ್ ಅವರ ಅಂಗಡಿ, ಆಟೋಗಳ ಮೇಲೆ ದಾಳಿ ನಡೆದಿದೆ.

ಕೂಡಲೇ ಅವರನ್ನು ಪಾಲಕ್ಕಾಡ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ದಾಳಿಯಲ್ಲಿ ಶ್ರೀನಿವಾಸನ್ ತಲೆ ಮತ್ತು ಕೈಕಾಲುಗಳಿಗೆ ಭೀಕರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಒಂದೇ ಗಂಟೆಯಲ್ಲಿ ಮೃತಪಟ್ಟಿದ್ದಾರೆ.

CRIME 2

ಎಸ್‍ಡಿಪಿಐ ಕಾರ್ಯಕರ್ತ ಎ.ಸುಬೈರ್ ಅಂತ್ಯಕ್ರಿಯೆಗೂ ಮುನ್ನವೇ RSS ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅಧಿಕಾರಿಗಳು ಹಾಗೂ ಜನತೆ ಬೆಚ್ಚಿಬಿದ್ದಿದ್ದಾರೆ. ಸುಬೈರ್ ಹತ್ಯೆಗೆ ಪ್ರತೀಕಾರವಾಗಿ ಶ್ರೀನಿವಾಸನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

ಸುಬೈರ್ ಹತ್ಯೆಯಾಗಿದ್ದು ಹೇಗೆ?
ಮಧ್ಯಾಹ್ನ 1:30ಕ್ಕೆ ಎಲಪ್ಪುಲ್ಲಿ ಎಂಬಲ್ಲಿ ಸುಬೈರ್ ತನ್ನ ತಂದೆಯೊಂದಿಗೆ ಶುಕ್ರವಾರ ಜುಮಾ ಪ್ರಾರ್ಥನೆ ಮುಗಿಸಿ ಬೈಕ್‍ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಎರಡು ಕಾರುಗಳಿಂದ ಬಂದ ದುಷ್ಕರ್ಮಿಗಳು ಸುಬೈರ್ ಅವರ ಬೈಕ್‍ಗೆ ಡಿಕ್ಕಿ ಹೊಡೆದು ಕೊಂದಿದ್ದಾರೆ. ಬೈಕ್‍ನಿಂದ ಕೆಳಗೆ ಬಿದ್ದ ತಂದೆ ಅಬೂಬಕರ್ ಗಾಯಗೊಂಡಿದ್ದಾರೆ. ಆದರೆ ಈ ಹತ್ಯೆಯ ಹಿಂದೆ ಆರ್‍ಎಸ್‍ಎಸ್ ಕೈವಾಡವಿದೆ ಎಂದು ಎಸ್‍ಡಿಪಿಐ ಆರೋಪಿಸಿದೆ. ಇದನ್ನೂ ಓದಿ: ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

They looked at me while hacking him, I was unable to move: Subair's father, palakkad subair murder, palakkad sdpi leader murder, kerala latest news, rss vs sdpi kerala

ಶ್ರೀನಿವಾಸನ್ ಹತ್ಯೆಯ ಹಿಂದೆ ಎಸ್‍ಡಿಪಿಐ ಕೈವಾಡವಿದೆ ಎಂದು ಬಿಜೆಪಿ ನಾಯಕರು ಶನಿವಾರ ಹೇಳಿದ್ದಾರೆ. ಪಾಲಕ್ಕಾಡ್‍ನಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *