– ಸರಿಯಾದ ವಯಸ್ಸಿನಲ್ಲಿ ಮದ್ವೆಯಾದ್ರೆ ಪೋಷಕರು, ಮಕ್ಕಳು ಆರೋಗ್ಯವಾಗಿರ್ತಾರೆ
– ಹಿಂದೂಗಳು ಎಲ್ಲವನ್ನೂ ಕಿತ್ತುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ; ಕಳವಳ
ನವದೆಹಲಿ: ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದರು.
ಆರ್‌ಎಸ್‌ಎಸ್ (RSS) 100 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು. ಮೂರಕ್ಕಿಂತ ಕಡಿಮೆ ಜನನದರ (Birth Rate) ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿಹೋಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ದೇಶಗಳಲ್ಲೂ ಈ ಪ್ರಕ್ರಿಯೆ ಸಹಜ. ಆದ್ದರಿಂದ ಮೂರಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕೇಂದ್ರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಗಣೇಶ ಹಬ್ಬದ ಬಂಪರ್ ಗಿಫ್ಟ್ – ಪಿಎಂ ಸ್ವನಿಧಿ ಯೋಜನೆ 5 ವರ್ಷ ವಿಸ್ತರಣೆ
ಸರಿಯಾದ ವಯಸ್ಸಿನಲ್ಲಿ ಮದ್ವೆಯಾಗೋದ್ರಿಂದ (Marriage) ಮೂವರು ಮಕ್ಕಳನ್ನು ಹೊಂದಬಹುದು. ಜೊತೆಗೆ ಪೋಷಕರು ಮತ್ತು ಮಕ್ಕಳು ಇಬ್ಬರು ಆರೋಗ್ಯವಾಗಿರ್ತಾರೆ ಅಂತ ವೈದ್ಯರೇ ಹೇಳಿದ್ದಾರೆ. ಮೂವರು ಒಡಹುಟ್ಟಿದವರು ಇರುವ ಮನೆಗಳಲ್ಲಿ ಅಹಂಕಾರ ನಿಯಂತ್ರಿಸೋದನ್ನ ಕಲಿಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಯಾವುದೇ ತೊಂದರೆ ಇರೋದಿಲ್ಲ. ಇದಕ್ಕೂ ಕೂಡ ವೈದ್ಯರೇ ಹೇಳಿರುವುದಾಗಿ ತಿಳಿಸಿದರು.
ಪ್ರಸ್ತುತ ದೇಶದ ಜನಸಂಖ್ಯೆಯು 2.1 ಜನನ ದರವನ್ನ ಶಿಫಾರಸು ಮಾಡುತ್ತೆ. ಇದು ಉತ್ತಮ ನೀತಿಯಾಗಿದೆ. ಯಾರೊಬ್ಬರು ಒಂದು ಮಗು ಹೊಂದಲು ಸಾಧ್ಯವಿಲ್ಲ. ಗಣಿತದಲ್ಲಿ 2.1 2 ಆಗುತ್ತದೆ. ಆದ್ದರಿಂದ ಮೂರು ಮಕ್ಕಳ ನೀತಿ ಉತ್ತಮ ಎಂದು ಮೋಹನ್ ಭಾಗವತ್ ಹೇಳಿದರು. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್
ಜನಸಂಖ್ಯೆ ಮೇಲೆ ಮತಾಂತರದ ಪರಿಣಾಮವೇ?
ಇನ್ನೂ ಜನಸಂಖ್ಯಾ ಮಾದರಿಗಳ ಮೇಲೆ ಪರಿಣಾಮ ಬೀರುವ ಕೆಲವೊಂದು ಅಂಶಗಳನ್ನು ಮೋಹನ್ ಭಾಗವತ್ ಗುರುತಿಸಿದ್ದು, ಮತಾಂತವೂ ಒಂದು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಮತಾಂತರವು ಜನಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ಕಾಥೊಲಿಕರು, ಉಲೇಮಾಗಳು ನಾವು ಮತಾಂತರದಲ್ಲಿ ತೊಡಗುವುದಿಲ್ಲ ಎನ್ನುತ್ತಾರೆ ಎಂದು ವಿವರಿಸಿದರು.
ಹಿಂದೂ – ಮುಸ್ಲಿಂ ಒಂದೇ
ಇದೇ ವೇಳೆ ಹಿಂದೂ ಮತ್ತು ಮುಸ್ಲಿಮರ ನಡುವಿನ ಸಂಬಂಧಗಳನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂ ಮುಸ್ಲಿಮರು ಮೂಲಭೂತವಾಗಿ ಒಬ್ಬರು, ನಮ್ಮ ನಡುವೆ ಏಕತೆಯಿದೆ. ಆದ್ರೆ ಒಂದು ಭಯವನ್ನು ಸೃಷ್ಟಿಸಲಾಗಿದೆ. ಹಿಂದೂಗಳು ಎಲ್ಲವನ್ನೂ ತೆಗೆದುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ. ಆದ್ರೆ ವಾಸ್ತವದಲ್ಲಿ ನಮ್ಮ ಗುರುತು ಏಕೀಕೃತವಾಗಿದೆ. ಸಾಂಸ್ಕೃತಿಕವಾಗಿ, ನಾವು ಹಿಂದೂಗಳು ಎಂದು ಬಣ್ಣಿಸಿದರು. ಇದನ್ನೂ ಓದಿ: ಟ್ರಂಪ್ ಸೂಚಿಸಿದ 5 ಗಂಟೆಗಳೊಳಗೆ ಪಾಕ್ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್ ಗಾಂಧಿ ಕಿಡಿ
ಮುಂದುವರಿದು.. ಅನೇಕ ಹಿಂದೂಗಳು ತಾವು ದುರ್ಬಲರೆಂದು ಭಾವಿಸಿ ಅಸುರಕ್ಷಿತವಾಗಿದ್ದೇವೆ. ಅವರಿಗೊಂದು ಸಲಹೆ ನೀಡುತ್ತೇನೆ. ಇತರರೊಂದಿಗೆ ಸಹಬಾಳ್ವೆ ನಡೆಸುವುದರಿಂದ ಸ್ವಂತ ನಂಬಿಕೆಗೆ ಹಾನಿಯಾಗಲ್ಲ. ಈ ವಿಶ್ವಾಸ ಬೇರೂರಿದರೆ, ಸಂಘರ್ಷ ಕೊನೆಗೊಳ್ಳುತ್ತದೆ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಗುಜರಾತ್‌ನಲ್ಲಿ ಹೆಸರೇ ಕೇಳದ ಪಕ್ಷಗಳಿಗೆ 4,300 ಕೋಟಿ ದೇಣಿಗೆ – ರಾಗಾ ಮತ್ತೊಂದು ಬಾಂಬ್