ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಾಗಲ್ಲ: ಮೋಹನ್ ಭಾಗವತ್

Public TV
1 Min Read

ಮುಂಬೈ: ಹಿಂಸೆ ಹೆಚ್ಚುತ್ತಿರುವ ಸಮಾಜವು ಹೆಚ್ಚು ದಿನಗಳು ಉಳಿಯುವುದಿಲ್ಲ. ಇದರಿಂದಾಗಿ ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದೇಶದ ಹಲವಾರು ಭಾಗಗಳಲ್ಲಿ ಗುಂಪುಗಳ ನಡುವೆ ಘರ್ಷಣೆಗಳು ನಡೆಯುತ್ತಿವೆ. ಈ ರೀತಿಯ ಹಿಂಸಾಚಾರದಿಂದಾಗಿ ಯಾರಿಗೂ ಪ್ರಯೋಜನವಿಲ್ಲ. ಇದರ ಬದಲು ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸುವ ಮತ್ತು ಮಾನವೀಯತೆಯನ್ನು ಕಾಪಾಡುವ ಅಗತ್ಯತೆ ಇದೆ ಎಂದರು.

ಹಿಂಸೆ ಹೆಚ್ಚುತ್ತಿರುವ ಸಮಾಜವು ತನ್ನ ಕೊನೆಯ ದಿನಗಳನ್ನು ಎಣಿಸುತ್ತದೆ. ನಾವು ಎಂದಿಗೂ ಅಹಿಂಸಾತ್ಮಕ ಮತ್ತು ಶಾಂತಿ ಪ್ರಿಯರಾಗಬೇಕು. ಇದಕ್ಕಾಗಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಶಾಂತಿ ಕಾಪಾಡುವುದು ಅತ್ಯಗತ್ಯವಾಗಿದೆ. ಎಲ್ಲರೂ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: PSI ನೇಮಕಾತಿ ಅಕ್ರಮ ಪ್ರಕರಣದ ಕ್ವೀನ್‍ಪಿನ್ ದಿವ್ಯಾ ಹಾಗರಗಿ ಅರೆಸ್ಟ್

ಸಿಂಧಿ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ದೇಶದಲ್ಲಿ ಸಿಂಧಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅಗತ್ಯವಿದೆ. ಭಾರತ ಬಹುಭಾಷಾ ದೇಶವಾಗಿದ್ದು, ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಕೆಲವು ಸಿಂಧಿಗಳು ತಮ್ಮ ಭೂಮಿಯನ್ನು ರಕ್ಷಿಸಲು ಪಾಕಿಸ್ತಾನದಲ್ಲಿ ಉಳಿದುಕೊಂಡಿದ್ದರೆ, ಅನೇಕರು ತಮ್ಮ ಧರ್ಮವನ್ನು ರಕ್ಷಿಸಲು ಭಾರತಕ್ಕೆ ಬಂದರು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಗರ್ಭಿಣಿ ಪತ್ನಿಗೆ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಕುಡಿಸಿ ಕೊಂದ ಪಾಪಿ ಪತಿ

Share This Article
Leave a Comment

Leave a Reply

Your email address will not be published. Required fields are marked *