ಮೈಸೂರು ಸ್ಯಾಂಡಲ್ ಸೋಪ್‌ ಪ್ರಚಾರಕ್ಕೆ 48.88 ಕೋಟಿ – ತಮನ್ನಾಗೆ 6.20 ಕೋಟಿ, ಯಾರಿಗೆ ಎಷ್ಟು?

Public TV
1 Min Read

ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ರಾಯಭಾರಿಯಾಗಿ ಆಯ್ಕೆಯಾಗಿರುವ ತಮನ್ನಾ ಭಾಟಿಯಾಗೆ (Tamannaah Bhatia) ಸರ್ಕಾರ 6.20 ಕೋಟಿ ರೂ. ಪಾವತಿಸಿದೆ.

ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ (Sunil Kumar) ಅವರು ಕಳೆದ 2 ವರ್ಷಗಳಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ತಯಾರಾಗುತ್ತಿರುವ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತಿಗೆ ಸರ್ಕಾರ ಖರ್ಚು ಮಾಡಲಾಗಿರುವ ಹಣವೆಷ್ಟು ಎಂದು ಚುಕ್ಕೆ ಗುರುತು ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಯ ಜೊತೆಗೆ ಈ ಜಾಹೀರಾತಿಗಾಗಿ ಯಾವ ಯಾವ ರಾಯಭಾರಿಗಳನ್ನು ಬಳಸಿಕೊಳ್ಳಲಾಗಿದೆ ಮತ್ತು ಅವರಿಗೆ ಇದುವರೆಗೂ ನೀಡಲಾಗಿರುವ ಸಂಭಾವನೆಯೆಷ್ಟು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

 

ಕಳೆದ 2 ವರ್ಷಗಳ  ಅವಧಿಯಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತು ಮತ್ತು ಪ್ರಚಾರಕ್ಕಾಗಿ 48,88,21,350 ರೂ. ವೆಚ್ಚ ಮಾಡಲಾಗಿದೆ. ದೇಶ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ನ ಜಾಹೀರಾತು ಮತ್ತು ಪುಚಾರಕ್ಕಾಗಿ ಸಂಸ್ಥೆಯು ರಾಯಭಾರಿಗಳನ್ನು ನೇಮಕ ಮಾಡಿದೆ. ಇದನ್ನೂ ಓದಿಕನ್ನಡಕ್ಕೆ ಅಜಯ್ ದೇವಗನ್  ಜೆಪಿ ತುಮಿನಾಡ್‌ ಸಿನಿಮಾದಲ್ಲಿ ಅಭಿನಯ!

ಯಾರಿಗೆ ಎಷ್ಟು?
ತಮನ್ನಾ ಭಾಟಿಯಾ(2025-27) – 6.20 ಕೋಟಿ ರೂ., ಐಷಾನಿ ಶೆಟ್ಟಿ (Ishani Shetty) (2025-27) – 15 ಲಕ್ಷ ರೂ. ನೀಡಲಾಗಿದೆ. ಇವರಲ್ಲದೇ ಕರ್ನಾಟಕ ಮೂಲದ ಸ್ಥಳೀಯ ವ್ಯಕ್ತಿಗಳಾದ ನಿಮಿಕಾ ರತ್ನಾಕರ್, ಶ್ರೀನಿವಾಸ್ ಮೂರ್ತಿ, ಸಾನ್ಯಾ ಐಯ್ಯರ್ (Sanya Iyer), ಆರಾಧನಾ.ಆರ್ ಇವರುಗಳನ್ನು ದೂರದರ್ಶನ ಜಾಹೀರಾತುಗಳಲ್ಲಿ ಛಾಯಾ ಚಿತ್ರೀಕರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ರೀಲ್ಸ್‌ನಲ್ಲಿ ಬಳಲಾಗಿದೆ. ಒಟ್ಟು ಈ ಕೆಲಸಕ್ಕೆ 62.87 ಲಕ್ಷ ರೂ. ವೆಚ್ಚ ತಗುಲಿದೆ ಎಂದು ಸರ್ಕಾರ ಉತ್ತರ ನೀಡಿದೆ.

Share This Article